Friday, March 19, 2010

ninna kaNgaLa bisiya hanigaLu - baDavara bandhu

ಸಾಹಿತ್ಯ: ಚಿ.ಉದಯಶಂಕರ್

ಸಂಗೀತ: ಎಮ್.ರಂಗರಾವ್
ಗಾಯನ: ಡಾ.ರಾಜ್ ಕುಮಾರ್
ನಟರು: ಡಾ. ರಾಜಕುಮಾರ್

ನಿನ್ನ ಕಂಗಳ ಬಿಸಿಯ ಹನಿಗಳು
ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ
ನೂರು ನೆನಪು ಮೂಡಿವೆ....ನಿನ್ನ ಕಂಗಳ..

ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ
ಬಿಸುಲು ಮಳೆಗೆ ನರಳದಂತೆ ನಿನ್ನ ನೆರಳಲಿ ಸಲಹಿದೆ
ಆ ಪ್ರೀತಿಯ ಮನ ಮರೆವುದೆ....ನಿನ್ನ ಕಂಗಳ....

ಬಳ್ಳಿಯಂತೆ ಹಬ್ಬಿ ನಿನ್ನಾ ಆಸರೆಯಲಿ ಬೆಳೆದೆನು
ಆ.....ಆ.....ಆ....ಆ....
ನನ್ನ ತಾಯಿಯ ಪಾದದಾಣೆ ಬೇರೆ ಏನನೂ ಅರಿಯೆನು
ನೀನೆ ನನ್ನ ದೇವನು....ನಿನ್ನ ಕಂಗಳ...

ನೀನು ನಕ್ಕರೆ ನಾನು ನಗುವೇ ಅತ್ತರೇ ನಾ ಅಳುವೆನು
ನಿನ್ನ ಉಸಿರಲಿ ಉಸಿರು ಬೆರೆತಿರೆ ನಿನ್ನಲೊಂದಾಗಿರುವೆನು
ನಾ ನಿನ್ನ ಕಾಣದೇ ಬದುಕೆನು....ನಿನ್ನ ಕಂಗಳ....

2 comments:

santhosh said...

Thanks a lot for your update.
I was searching for this song from quite long time in the internet.
Santhosh

Darshan said...

Can you please post Naga beda Naga beda song from same movie