Tuesday, November 24, 2009

preetige janma - excuse me

ಚಿತ್ರ: ಎಕ್ಸ್ಕ್ಯೂಸ್ ಮಿ
ಹಾಡಿದವರು: ಹೇಮಂತ್
ನಟರು: ಅಜಯ್ ರಾವ್, ಸುನಿಲ್ ರಾವ್, ರಮ್ಯ 

ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ 
ಭೂಮಿಗೆ ತಂದು ಎಸೆದ
ಹಂಚಲು ಹೋಗಿ ಬೇಸರವಾಗಿ 
ಹಂಚಿಕೋ ಹೋಗಿ ಎಂದ
ಕೊನೆಗೂ ಸಿಗದೇ ಪ್ರೀತಿ

ಬದುಕು ರಣಭೂಮಿ
ಜಯಿಸಲಿ ಪ್ರೇಮಿ 

ಅವನ ಅವಳ ಬದುಕು ಮುಗಿದರೂನು
ಅವರ ಪ್ರೀತಿ ಗುರುತು ಸಾಯದಿನ್ನು
ಬಿರುಗಾಳಿಗೆ ಸೂರ್ಯ ಹಾರಿ ಹೋದರು 
ಪ್ರೀತಿಯು ಹಾರದು 
ಈ ಜಗದ ಎಲ್ಲ ಗಡಿಯಾರ ನಿಂತರು 
ಪ್ರೀತಿಯು ನಿಲ್ಲದು 

ಬದುಕು ಸುಡುಭೂಮಿ
ನಡುಗನು ಪ್ರೇಮಿ

ಯಮನು ಶರಣು ಎನುವ ಪ್ರೀತಿ ಮುಂದೆ
ಧನಿಕ ತಿರುಕ ಪ್ರೀತಿ ಮುಂದೆ ಒಂದೆ
ಹಳೆ ಗಾದೆ ವೇದಾಂತ ಬೂದಿಯಾದರು
ಪ್ರೀತಿಯು ಸಾಯದು
ತಿರುಗಾಡುವ ಭೂಮಿಯು ನಿಂತೆ ಹೋದರು
ಪ್ರೀತಿಯು ನಿಲ್ಲದು

ಬದುಕು ಮರುಭೂಮಿ
ಮಳೆ ಹನಿ ಪ್ರೇಮಿ

preetse preetse - preetse

ಚಿತ್ರ: ಪ್ರೀತ್ಸೇ
ನಟರು: ಉಪೇಂದ್ರ, ಸೊನಾಲಿ ಬೇಂದ್ರೆ
ಹಾಡಿದವರು: ಹೇಮಂತ್

ಪ್ರೀತ್ಸೇ ಪ್ರೀತ್ಸೇ ಕಣ್ಣು ಮುಚ್ಚಿ ನನ್ನ ಪ್ರೀತ್ಸೇ
ಮನಸು ಬಿಚ್ಚಿ ನನ್ನ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ ಕಣ್ಣು ಮುಚ್ಚಿ ನನ್ನ ಪ್ರೀತ್ಸೇ
ಮನಸು ಬಿಚ್ಚಿ ನನ್ನ ಪ್ರೀತ್ಸೇ
ಉಸಿರಾಗಿ ಪ್ರೀತ್ಸೇ ಬದುಕಾಗಿ ಪ್ರೀತ್ಸೇ
ನನಗಾಗಿ ಪ್ರೀತ್ಸೇ ನಿನಗಾಗಿ ಪ್ರೀತ್ಸೇ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ
ಕಿರಣ ಕಿರಣ.....

ಸಾವಿರಾರು ದಿನಗಳ ಕೆಳಗೆ
ನನ್ನೆದೆಯ ಗರ್ಭದ ಒಳಗೆ
ಉಸಿರಾಡಿತು ಆಸೆಯ ಭ್ರೂಣ
ಪಡೆಯಿತು ಪ್ರಾಣ
ಬೆಳೆಯಿತು ಕಲಿಯಿತು ಮುದ್ದಿನ ಮಾತೊಂದ
ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ನನ್ನೇ ಪ್ರೀತ್ಸೇ
ಮಾತಾಡ್ತಾ ಪ್ರೀತ್ಸೇ ಮುದ್ದಾಡ್ತಾ ಪ್ರೀತ್ಸೇ
ಕಣ್ಣೊರೆಸಿ ಪ್ರೀತ್ಸೇ ಮಗು ಅಂತ ಪ್ರೀತ್ಸೇ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ
ಕಿರಣ ಕಿರಣ.......

ನಿನ್ನಂದಕೆ ನಾ ಅಭಿಮಾನಿ
ನನ್ನೆದೆಗೆ ನೀ ಯಜಮಾನಿ
ನೀನಿಲ್ಲದ ಲೋಕ ಶೂನ್ಯ ಬಾಳು ಬರಡು
ಜನ್ಮ ದಂಡ ಸೃಷ್ಟಿಯ ಅದ್ಭುತವೇ
ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ನನ್ನೇ ಪ್ರೀತ್ಸೇ
ದಯಮಾಡಿ ಪ್ರೀತ್ಸೇ ಕೃಪೆ ತೋರಿ ಪ್ರೀತ್ಸೇ
ಪ್ರೇಮಿಗಾಗಿ ಪ್ರೀತ್ಸೇ ಪ್ರೀತಿಗಾಗಿ ಪ್ರೀತ್ಸೇ
ಓ ಕಿರಣ ಓ ಕಿರಣ
ನೀ ನನ್ನ ಪ್ರೀತಿ ಕಿರಣ...
ಕಿರಣ ಕಿರಣ.......

nannaaseya hoove - naa ninna mareyalaare

ಚಿತ್ರ: ನಾ ನಿನ್ನ ಮರೆಯಲಾರೆ
ನಟರು: ರಾಜ್ ಕುಮಾರ್, ಲಕ್ಷ್ಮಿ
ಹಾಡಿದವರು: ರಾಜ್ ಕುಮಾರ್

ನನ್ನಾಸೆಯ ಹೂವೆ ಬೆಳದಿಂಗಳ ಚೆಲುವೆ
ಇನ್ನೇತಕೆ ಅಳುವೆ ಏಕಾಂತದಿ ಭಯವೆ
ನಿನ್ನೊಲವಿಗೆ ಸೋತೆನು ಬಂದೆನು ನಾ

ಈ ಮೌನವೇನು ನಿನ್ನಲ್ಲಿ 
ಈ ಕೋಪವೇಕೆ ನನ್ನಲ್ಲಿ 
ನೀ ದೂರ ಹೋದರೆ ಹೀಗೆ 
ನಾ ತಾಳೆ ಈ ವಿರಹದ ಬೇಗೆ 
ಅಹಹ ಅಹಹ ಆಹಾ.....

ಕಾಣದಿರೆ ನೋಡುವ ಆಸೆ
ನೋಡುತಿರೆ ಸೇರುವ ಆಸೆ 
ಸೇರಿದರೆ ಚಿನ್ನ ನಿನ್ನ 
ಕೆಂಪಾದ ಚೆಂದುಟಿಯ ಆಸೆ 

ನನ್ನಾಸೆಯ.....

ಆಹಾ ....ಲಲಲ......

ಬಾನಲ್ಲಿ ನೀಲಿ ಬೆರೆತಂತೆ
ಹೂವಲ್ಲಿ ಜೇನು ಇರುವಂತೆ
ನನ್ನಲ್ಲಿ ನೀನೊಂದಾಗಿ
ಇರುವಾಗ ಏಕೆ ಈ ಚಿಂತೆ

ಕಣ್ಣಲ್ಲಿ ಕಣ್ಣ ನೀ ಬೆರೆಸು  
ಲತೆಯಂತೆ ನನ್ನ ಮೈ ಬಳಸು
ನೂರೆಂಟು ಸುಂದರ ಕನಸು
ಆ ನಿಮಿಷ ಬಾಳಿಗೆ ಸೊಗಸು

ನನ್ನಾಸೆಯ ಹೂವೆ......

naariya seere kadda - daari tappida maga

ಚಿತ್ರ: ದಾರಿ ತಪ್ಪಿದ ಮಗ
ನಟರು: ರಾಜ್ ಕುಮಾರ್, ಮಂಜುಳ, ಆರತಿ, ಕಲ್ಪನಾ
ಹಾಡಿದವರು: ರಾಜ್ ಕುಮಾರ್


ಕೃಷ್ಣ....ಮುರಾರಿ.....ಯಮುನಾ ತೀರ ವಿಹಾರಿ
ಗೋಪಿ ಮಾನಸ ಹಾರಿ....ಶೌರಿ....ಶೌರಿ
ಬೋಲೋ ಶ್ರೀ ಕೃಷ್ಣ ಪರಮಾತ್ಮಕಿ

ನಾರಿಯ ಸೀರೆ ಕದ್ದ ರಾಧೆಯ ಮನವ ಗೆದ್ದ
ಕಳ್ಳರ ಕಳ್ಳ ಕೃಷ್ಣನು ಬಂದ
ಮೋಹದ ಮೋಡಿ ಹಾಕಿದ
ಕೃಷ್ಣ  .........ಮುರಾರಿ......

ಮಗುವಾಗಿರುವಾಗ ಬೆಣ್ಣೆಯ ಕದ್ದ
ಮಣಿಯೊಡನೆ ರಮಣಿ ಭಾಮೆಯ ಗೆದ್ದ
ಮದುವೆ ಮನೆಗೆ ನುಗ್ಗಿ, ಏನ್ ಮಾಡ್ದ ಗೊತ್ತೇ
ರುಕ್ಮಿಣಿಯ ಕದ್ದ
ನರಕಾಸುರನ ಕೊಂದು ಹದಿನಾರು ಸಾವಿರ ನಾರಿಯರ ಗೆದ್ದ
ಅಹಹ...ಹುದಪ್ಪ
ಕದ್ದ ಗೆದ್ದ, ಗೆದ್ದ ಕದ್ದ.....

ನಾರಿಯ.....

ಯಮುನಾ ತೀರದಲಿ ತಣ್ಣನೆ ಗಾಳಿಯಲಿ
ರಾಧೆ ಕಾದಿರಲು ಮೆಲ್ಲನೆ
ಕೊಳಲನೂದುತಲಿ ಮನವ ಕೆಣಕುತಲಿ
ಕಂಡು ಕಾಣಿಸದೆ ಮೋಹನ
ಆಡಿ ಓಡಿದನು
ಬೋಲೋ ಶ್ರೀ ಕೃಷ್ಣ ಪರಮಾತ್ಮಕಿ

ನಾರಿಯ.....

ಕೃಷ್ಣ ಎಲ್ಲಿರುವೆ ಏಕೆ ಕಾಡಿರುವೆ
ವಿರಹದಿ ನೊಂದಿರುವೆ ಕಾಣದೆ
ರಾಧ ಮೋಹನನೆ ಬಾರೋ ಮಾಧವನೆ
ಎಂದು ಕೂಗಿರಲು ಬಂದು 
ತನುವ ಬಳಸಿ ನಿಂದನು 

ನಾರಿಯ ಸೀರೆ.....

ಕೃಷ್ಣ ಎನ್ನಿ ರಾಮ ಎನ್ನಿ
ಮುಕುಂದ ಎನ್ನಿ ಗೋವಿಂದ ಎನ್ನಿ
ರಾಧೆ ಕೃಷ್ಣ ಜೈ ಜೈ ಕೃಷ್ಣ ......

Tuesday, November 17, 2009

keLisade kallu kallinali - beLLi kaalungura

ಚಿತ್ರ: ಬೆಳ್ಳಿ ಕಾಲುಂಗುರ
ಹಾಡಿದವರು: ಎಸ್ ಪಿ ಬಿ
ನಟರು: ಮಾಲಾಶ್ರಿ, ಸುನಿಲ್, ತಾರ

ಓ...

ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ
ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು

ಧೂರಮೆಯ ಆಧಾರ ಈ ಕಲೆಯ ಸಿಂಗಾರ
ಬಂಗಾರ ತೇರೇರಿ ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ
ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು

ಕೇಳಿಸದೆ .....

ಗಾಳಿಯೇ ಆದೇಶ ಮೇಘವೇ ಸಂದೇಶ
ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ 
ಋತು ಋತುಗಳು ನಿನ್ನ ಕಾದಿವೆ
ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ
ನವರಸವು ಮೈತಾಳಿ ಜೀವನದ ಜೋಕಾಲಿ
ಯುಗಯುಗದಲು ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು

ಕೇಳಿಸದೆ.....

beLLi kaalungura - beLLi kaalungura

ಚಿತ್ರ: ಬೆಳ್ಳಿ ಕಾಲುಂಗುರ
ಹಾಡಿದವರು: ಎಸ್ ಜಾನಕಿ, ??
ನಟರು: ಮಾಲಾಶ್ರಿ, ಸುನಿಲ್, ತಾರ

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಓ.....
ಲಾಲಾ.....

ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ ಬಂಧನವಾಗಿದೆ ಬಂಧನವಾಗಿದೆ

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ

ಬಾಳ ಕಡಲಲಿ ಪ್ರೇಮ ನದಿಗಳ ಸಂಧಿ ಸಮಯದಲಿ
ಮಿಂಚುವ ಮಿನುಗುವ ಸಾಕ್ಷಿ ಈ ಕಾಲುಂಗುರ
ನಾದಗಡಲಲಿ ವೇದ ಘೋಷದ ಸಪ್ತಪದಿಗಳಲಿ
ಬದುಕಿನ ಬಂಡಿಗೆ ಸಾರಥಿ ಕಾಲುಂಗುರ
ಶುಕವ ತರುವ ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ ಒಡವೆಯೋ

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ

ಆದಿ ಕಾಲದ ವೇದ ಮೂಲದ ಸತಿಯ ಆಭರಣ
ಚೆಲುವಿಗೆ ಒಲವಿಗೆ ಗೌರವ ಕಾಲುಂಗುರ 
ಐದು ಮುತ್ತುಗಳಾರು ಮುಡಿವಳೋ ಅವಳೆ ಮುತ್ತೈದೆ 
ಸಿಂಧೂರ ಮಾಂಗಲ್ಯ ಮೂಗುತಿ ಓಲೆ ಕಾಲುಂಗುರ 
ಹೃದಯ ತೆರೆದು ಉಸಿರೊಡೆಯ ತರದು 
ಗಂಡು ಹೆಣ್ಣಿಗೆ ನೀಡುವ ಆಣೆಯ ಉಡುಗೊರೆ

ಬೆಳ್ಳಿ ಕಾಲುಂಗುರ.......     

nagu endide manjina bindu - pallavi anupallavi

ಚಿತ್ರ: ಪಲ್ಲವಿ ಅನುಪಲ್ಲವಿ
ಹಾಡಿದವರು: ಎಸ್ ಜಾನಕಿ
ನಟರು: ಲಕ್ಷ್ಮಿ, ಅನಿಲ್ ಕಪೂರ್

ನಗು ಎಂದಿದೆ ಮಂಜಿನ ಬಿಂದು
ನಲಿ ಎಂದಿದೆ ಗಾಳಿ ಇಂದು

ಚಿಲಿ ಪಿಲಿ ಎಂದು ಹಕ್ಕಿಯು ಹೇಳಿದೆ ಈಗ ಬಾ ಬಾ
ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ ಬೇಗ ಬಾ ಬಾ
ಹಾರಲು ಆಗದೆ ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು
ಬಯಸಿದೆ ಅರಸಿದೆ ನಾ
ಕಂಡೆ ಈಗಲೇ ನಾ
ನನ್ನ ಸ್ನೇಹಿತನ....

ಇದೆ ನಗುವ ಮನದ ಸ್ಪಂದ
ಸವಿ ಮಧುರ ಮಮತೆ ಬಂಧ

ಆ....ತನನ....

ಹಾಡುವ ಬಾ ಬಾ ನದಿ ಅಲೆ ಕೊಡುವುದು ಜಾಗ ಈಗ
ಕುಣಿಯುವ ಬಾ ಬಾ ಮಳೆ ಹನಿ ತರುವುದು ತಾಳ ಮೇಳ
ಪ್ರಕೃತಿಯು ಬರೆದ ಕವನವಿದು
ಮಮತೆಯ ಸೊಗಸಿನ ಪಲ್ಲವಿಯು
ಸುಂದರ ಸ್ನೇಹವಿದು
ಇಂತ ಅನುಬಂಧ ಎಂತ ಆನಂದ

ಇದೆ ನಗುವ ಮನದ ಸ್ಪಂದ
ಸವಿ ಮಧುರ ಮಮತೆ ಬಂಧ

Friday, November 13, 2009

sadaa kaNNale - kaviratna kaaLidaasa

ಚಿತ್ರ: ಕವಿರತ್ನ ಕಾಳಿದಾಸ
ಹಾಡಿದವರು: ರಾಜ್ ಕುಮಾರ್, ವಾಣಿ ಜಯರಾಂ
ನಟರು: ರಾಜ್ ಕುಮಾರ್, ಜಯಪ್ರದ

ಆ.......

ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ

ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ
ನಾಸಿಕವು ಸಂಪಿಗೆಯಂತೆ ನೀ ನಗಲು ಹೂ ಬಿರಿದಂತೆ
ನಡೆಯುತಿರೆ ನಾಟ್ಯದಂತೆ ರತಿಯೇ ಧರೆಗಿಳಿದಂತೆ
ಈ ಅಂದಕೆ ಸೋತೆನು ಸೋತೆ ನಾನು

ಗುಡುಗುಗಳು ತಾಳದಂತೆ ಮಿಂಚುಗಳು ಮೇಳದಂತೆ
ಸುರಿವ ಮಳೆ ನೀರೆಲ್ಲ ಪನ್ನೀರ ಹನಿಹನಿಯಂತೆ
ಜೊತೆಯಾಗಿ ನೀನಿರೆ ಸಾಕು ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ ಸೋತೆನು ಸೋತೆ ನಾನು

ಸದಾ ಕಣ್ಣಲೆ.......

roadigiLi raadhika - excuse me

ಚಿತ್ರ: ರೋಡಿಗಿಳಿ ರಾಧಿಕ
ನಟರು: ಅಜಯ್ ರಾವ್, ಸುನಿಲ್ ರಾವ್, ರಮ್ಯ

ರೋಡಿಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ

ಲೌ ಅವ್ನ್ ಬಾಯ್ಗೊಸಿ ನೀರ್ ಬಿಡ್ರಲ
ನಿಗರ್ಕೊಂಬುಟಾನು
ಲೌ ಹಾಡ್ನಾಗೆ ವಸಿ ದಂ ಇರ್ಲಿ ರಿದಂ ಇರ್ಲಿ!!
ಸಿಸ್ಯ ಎರ್ಡೆಟ್ ಹಾಕಲೇ

ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು

ರೋಡಿಗಿಳಿ ರಾಧಿಕ...ಅರೆ....ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ

ಇದು ಹಾರ್ಟು ಕರಿಯೋ ಗ್ಯಾಂಗು ನೀ ಆಗಬೇಡ ರಾಂಗು
ಡೈಲಿ ಡವ್ ಹೊಡಿ ಅನ್ನುವ ಪೋಕರಿಗಳಿಗೆ ಸ್ಮೈಲನ್ನು ಬಿಸಾಕು
16 ಆಗಿದ್ರು ಸಾಕು ಲವ್ ಸಿಂಬಲ್ಗೆ ವೋಟು ಹಾಕು
ಇದು ಹೋಲಿ ಡೇ ಹಾಲಿಡೆ ಜಾಲಿಡೆ ಲವ್ ಮಾಡೇ ಗೋಳನ್ನು ಬಿಟ್ಟಾಕು

ಲವು ಗಿವು ಅಂತ ಅಂದರೆ ಹೋ ಮೂತಿಗೆಟ್ಟು ಹೋಗೋ ತೊಂದರೆ
ಲೈಕು ಮಾಡುತೀವಿ ಲೈನು ಹಾಕುತೀವಿ ಲೈಫು ನೀಡುತೀವಿ ಬಾರಮ್ಮ
ಲವು ಗಿವು ಅಂತ ಅಂದರೆ ಹೋ ಮೂತಿಗೆಟ್ಟು ಹೋಗೋ ತೊಂದರೆ
ಲೈಕು ಮಾಡುತೀವಿ ಲೈನು ಹಾಕುತೀವಿ ಲೈಫು ನೀಡುತೀವಿ ಬಾ

ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು

ರೋಡಿಗಿಳಿ ರಾಧಿಕ...ಅರೆ....ಚಿಂದಿ ಮಾಡೇ ಚಂದ್ರಿಕಾ

ಟಪಾನ್ಗುಚಿ ಆಡು ಬಾರೆ

ನೀನ್ ಕೋಟಿ ಬಣ್ಣದ ಚಿಟ್ಟೆ ನಿನ್ ಕಣ್ಣಿನ ನೋಟಕ್ಕೆ ಕೆಟ್ಟೆ
ನಮ್ಮ ನಿದ್ದೆ ಕೆಡಿಸಿ ತಣ್ಣೀರ್ ಕುಡಿಸೋ ಬಿಂಕದ ವೈಯಾರಿ
ಇದು ಟಾರು ಇರುವ ರೋಡು ಉಳ್ಕೊಲ್ಲ ಸೊಂಟ ಆಡು
ನಿನ್ನ ಚಮಕ್ಕು ಗಿಮಿಕ್ಕು ಎಲ್ಲಾರು ನೋಡಲಿ ಚಂದಿರ ಚಕೋರಿ!!

ಊರ ಮೇಲೆ ಊರು ಬಿದ್ದರು ನಾನ್ ಕುಣಿಯಲಾರೆ ಕೋಟಿ ಕೊಟ್ಟರು
ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತಿವಿ ಒಂದು ಸ್ಟೆಪ್ಪು ಹಾಕು ಬಾರಮ್ಮ
ಊರ ಮೇಲೆ ಊರು ಬಿದ್ದರು ನಾನ್ ಕುಣಿಯಲಾರೆ ಕೋಟಿ ಕೊಟ್ಟರು
ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತಿವಿ ಒಂದು ಸ್ಟೆಪ್ಪು ಹಾಕು ಬಾ

ಬಾ ಬಾರೆ....ಲೇಯ್ ಅದ್ ನನ್ ಡವ್ವೋ

ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು

ರೋಡಿಗಿಳಿ ರಾಧಿಕ...ಅರೆ....ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ

raaga anuraaga - sanaadi appanna

ಚಿತ್ರ: ಸನಾದಿ ಅಪ್ಪಣ್ಣ
ಹಾಡಿದವರು: ರಾಜಕುಮಾರ್, ಎಸ್ ಜಾನಕಿ
ನಟರು: ರಾಜಕುಮಾರ್, ಜಯಪ್ರದ

ರಾಗ ಅನುರಾಗ ಶುಭಯೋಗ ಸೇರಿದೆ  
ತಂದ ಅನುಬಂಧ ಆನಂದ ತಂದಿದೆ....ರಾಗ.....

ರಾಗ ತಾಳ ಮಿಲನ ಸಂಗೀತವಾಗಿದೆ
ನಾದ ಲಾಸ್ಯ ಮಿಲನ ಹೊಸ ಭಾವ ಮೂಡಿದೆ
ಹೊಸ ಗೀತೆ ಹಾಡಿದೆ
ಹೂವು ಗಂಧದಂತೆ ನಮ್ಮ ಜೀವ ಜೀವ ಸೇರಿ
ಉಯ್ಯಾಲೆಯಾಡಿದೆ

ಹೃದಯ ವೀಣೆ ಮೀಟಿ ಹೊಸ ತಾನ ನುಡಿಸಿದೆ
ಗಾನ ಗಂಗೆಯಲ್ಲಿ ತೇಲಾಡಿದಂತಿದೆ
ಸುರಲೋಕ ಕಂಡಿದೆ
ಗಂಗ ಶಿವನ ವರಿಸಿ ಶಿಲವೇರಿದಂತೆ
ನನ್ನ ಬಾಳಿಂದು ಆಗಿದೆ  

ಬಾಳನದಿಯು ಇಂದು ಹೊಸ ಹಾದಿ ಹಿಡಿದಿದೆ
ಪ್ರಣಯವೆಂಬ ವನವ ಹಾಯಾಗಿ ಬಳಸಿದೆ
ಆ....ಪ್ರಣಯವೆಂಬ ವನವ ಹಾಯಾಗಿ ಬಳಸಿದೆ  
ಉಲ್ಲಾಸ ತಂದಿದೆ
ಹರುಷವೆಂಬ ಕಡಲ ಅಲೆಅಲೆಯು ತೇಲಿ ಬಂದು
ಈ ನದಿಯ ಸೇರಿದೆ  

ರಾಗ.....

bidalaare endu ninna - premada kaaNike

ಚಿತ್ರ: ಪ್ರೇಮದ ಕಾಣಿಕೆ
ಹಾಡಿದವರು: ರಾಜಕುಮಾರ್, ವಾಣಿ ಜಯರಾಂ
ನಟರು: ರಾಜಕುಮಾರ್, ಆರತಿ

ನಾ ಬಿಡಲಾರೆ ಎಂದು ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದೂ ಬಾಳೆನು
ಓ... ನಾ ಸೂರ್ಯಕಾಂತಿಯಂತೆ
ನೀ ಸೂರ್ಯ ದೇವನಂತೆ
ನಾ ನಿನ್ನ ಬಾಳ ಜೋಡಿ
ನೀನೆ ನನ್ನ ಜೀವ ನಾಡಿ

ನಾನೇ ರಾಗ ನೀನೆ ಭಾವ ಎಂದೆಂದೂ
ನಾನೇ ದೇಹ ನೀನೆ ಪ್ರಾಣ ಇನ್ನೆಂದು
ನಾನೇ ಕಣ್ಣು ನೀನೆ ನೋಟ ಎಂದೆಂದೂ
ನಾನೇ ಜ್ಯೋತಿ ನೀನೆ ಕಾಂತಿ ಇನ್ನೆಂದು
ಬಾಳೆಂಬ ದೋಣಿಯೇರಿ ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮ ಲೋಕ ಸೇರುವ

ಆಹಾ ಮೈ ಮಾಟವು ಈ ಸವಿ ನೋಟವು
ಜೀವ ಕವಲಾಗಿ ಮೈ ತುಂಬೋ ಈ ಅಂದವು
ಬಂತು ಇಂಥ ಅಂದ ಚಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೋ ಕಂದ ಜನ್ಮ 
ಇನ್ನು ನೀ ತಂದ ಸುಖಕ್ಕಿಂತ ಬೇರೆ ಭಾಗ್ಯ ಕಾಣೆ ನಲ್ಲ 

nenapugaLa maatu madhura - chandramukhi praaNasakhi

ಚಿತ್ರ: ಚಂದ್ರಮುಖಿ ಪ್ರಾಣಸಖಿ
ಹಾಡಿದವರು: ಎಸ್ ಪಿ ಬಿ, ಚಿತ್ರ
ನಟರು: ರಮೇಶ್, ಪ್ರೇಮ, ಭಾವನ

ನೆನಪುಗಳ ಮಾತು ಮಧುರ
ಮೌನಗಳ ಹಾಡು ಮಧುರ
ಕನಸೇ ಇರಲಿ ನನಸೆ ಇರಲಿ
ಪ್ರೀತಿ ಕೊಡುವ ಕನಸೇ ಮಧುರ

ಸಾವಿರ ಹೂಗಳ ಹುಡುಕಿದರೂ
ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೆ 
ಸಾವಿರ ಹೃದಯವ ಹುಡುಕಿದರೂ 
ಅಳತೆ ಬೇರೆ ಸೆಳೆತ ಬೇರೆ ಪ್ರೀತಿಯೊಂದೆ
ತಿಂಗಳ ಬೆಳಕನು ಹಿಡಿದು ಗಾಳಿಗೆ ಸವರೋ ಪ್ರೀತಿ
ಗಾಳಿಯ ಗಂಧವ ಕಡೆದು ಅಂದವ ಹೆಣೆಯೋ ಪ್ರೀತಿ
ಸಂಖ್ಯೆ ಇರದೇ ಗುಣಿಸೋ ಪ್ರೀತಿ
ನಿದ್ದೆ ನುಂಗಿ ಕುಣಿಸೋ ಪ್ರೀತಿ 
ಶಬ್ದವಿರಲಿ ಶಬ್ದವಿರಲಿ ಪ್ರೀತಿ ಕೊಡುವ ಶಬ್ದ ಮಧುರ 

ಸಾವಿರ ಹಾಡನು ಹುಡುಕಿದರೂ
ತಾಳ ಬೇರೆ ಮೇಳ ಬೇರೆ ಸ್ವರಗಳೊಂದೆ   
ಸಾವಿರ ಪ್ರೇಮಿಯ ಹುಡುಕಿದರೂ
ತವಕ ಬೇರೆ ಪುಳಕ ಬೇರೆ ಪ್ರೀತಿಯೊಂದೆ
ನದಿಗಳ ಕಲರವಗಳಲಿ ಅಲೆಗಳು ತೊಯೋ ಪ್ರೀತಿ
ಅಲೆಗಳ ಹೊಸತನ ಕಡೆದು ಕಲೆಗಳ ಹೆಣೆಯೋ ಪ್ರೀತಿ
ಚಿಲುಮೆಯಂತೆ ಚಿಮ್ಮೋ ಪ್ರೀತಿ
ಒಲುಮೆಯೊಳಗೆ ಕಾಯ್ಸೋ ಪ್ರೀತಿ
ಸ್ವಾರ್ಥವಿರಲಿ ಸ್ವಾರ್ಥವಿರಲಿ ಪ್ರೀತಿ ಕೊಡುವ ಸ್ವಾರ್ಥ ಮಧುರ     

Thursday, November 12, 2009

hey dinakara - om

ಚಿತ್ರ: ಓಂ
ಹಾಡಿದವರು: ಡಾ. ರಾಜಕುಮಾರ್
ನಟರು: ಶಿವ್ ರಾಜಕುಮಾರ್, ಪ್ರೇಮ

ಓಂ.....ಓಂ......
ಓಂ..ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ
ಓಂ..ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ ಅಹಂ
ಮಾನಸ ಮಂದಿರ ತುಂಬು ಓಂಕಾರ ನಾದವೊಂ ಓಂ.....

ನಗುವ ಮನಸೆ ಸಾಕು ನಮಗೆ ಹಗಲುಗನಸೆ ಬೇಡ
ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ
ತಂದೆ ತಾಯೆ ದೈವ ಗುರುವೇ ನಮ್ಮ ಜೀವ
ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು......
ಹೇ ದಿನಕರ......

ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು
ದಯೆ ತೋರೋ ಧರಣಿಯಂತ ಮನೋಧರ್ಮ ನೀಡು
ನೊಂದ ಎಲ್ಲ ಜೀವ ನನ್ನದೆಂಬ ಭಾವ
ಬಾಳಿನಲ್ಲಿ ತುಂಬೋ ವಿದ್ಯೆ ವಿನಯ ಕರುಣಿಸೋ
ಆ.........
ಹೇ ದಿನಕರ......

om....om......
om....brahmaananda omkaara aatmaananda saakaara
om....vedaantarya jhenkaara aadhyaatmaabhi madhusaara

hey dinakara shubhakara dharege baa
ee dharaNiya degula beLagu baa
neegisu baaLina aham aham aham
maanasa mandira tumbu omkara naadavom om......

naguva manase saaku namage hagaluganase beDa
maneya tumba preeti saaku beLLi chinna beDa
tande taayi daiva guruve namma jeeva
emba divya mantra namma hrudaya tumbisu.....
hey dinakara.....

satya heLo kannaDiyante antaranga maaDu
daye toro dharaNiyante manodharma neeDu
nonda ella jeeva nannademba bhaava
baaLinalli tumbo vidye vinaya karuNiso
aa......

hey dinakara.........

aralu hunnime - chandramukhi praaNasakhi

ಚಿತ್ರ: ಚಂದ್ರಮುಖಿ ಪ್ರಾಣಸಖಿ
ಹಾಡಿದವರು: ಎಸ್ ಪಿ ಬಿ
ನಟರು: ರಮೇಶ್, ಪ್ರೇಮ, ಭಾವನ


ಆ...............

ಅರಳು ಹುಣ್ಣಿಮೆ ಹರಳು ಹುಣ್ಣಿಮೆ
ನೀ ಅರುಳು ಮರುಳು ಮಾಡೋ ಹುಣ್ಣಿಮೆ
ಅರಳು ಹುಣ್ಣಿಮೆ ಹರಳು ಹುಣ್ಣಿಮೆ
ನೀ ಕನಸು ಹೀರಿ ಹಾಡೋ ಹುಣ್ಣಿಮೆ
ಯೌವ್ವನ ನಿನ್ನ ನೆರಳಿನಲ್ಲಿದೆ
ಆಕರ್ಷಣೆ ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೊನ್ನೆ ಹುಣ್ಣಿಮೆ


ಓ.... ಈ ಕಣ್ಣಿಗೆ ಸರಿದೂಗೋ ಕಣ್ಣುಗಳಿಲ್ಲ
ಈ ಹೊಳಪಿಗೆ ಸರಿದೂಗೋ ಬೆಳಕುಗಳಿಲ್ಲ
ನಿನ್ನ ಕಾಂತಿ ಪ್ರಕೃತಿಗೆ ಮೈಕಾಂತಿ
ಈ ನಗುವ ಕಲೆ ಹಾಕೋ ಕೈಗಳು ಇಲ್ಲ
ವೈಯಾರಕೆ ತಲೆ ಹಾಕೋ ನಾಲಿಗೆಯಿಲ್ಲ
ನಿನ್ನ ಸೊಗಸೇ ಈ ವೊಗಸಿಗೆ ಮನಶಾಂತಿ 
ನಿನ್ನ ಭಂಗಿಯ ಆ..... ಪ್ರಫುಲ್ಲ ಲಲ್ಲೆಯ ಓ.... 
ತಾಕೋದೆ ಸಾಹಿತ್ಯ ತೂಗೋದೆ ಸಂಗೀತ


ಓ...ಈ ಒನಪನು ಮರೆಮಾಚೋ ರೇಶಿಮೆಯಿಲ್ಲ
ಈ ತಂಪನು ತುಸು ಮಾಸುವ ಮಾಸಗಳಿಲ್ಲ 
ನಿನ ಸ್ಪರ್ಶ ಹೂಗಳಲಿ ಮೃದುವಾಸ 
ಈ ನಡಿಗೆಯ ಕದಲಿಸೋ ನರ್ತನವಿಲ್ಲ
ಈ ಸ್ಫೂರ್ತಿಯ ಬದಲಿಸೋ ಶಕ್ತಿಗಳಿಲ್ಲ 
ನಿನ್ನ ಇರುವಿಕೆ ಹೆಣ್ಗಳಿಗೆ ಉಪವಾಸ 
ಸುಮ್ಮನೇತಕೆ...ಆ...ಸುಳ್ಳು ಹೋಲಿಕೆ....ಓ... 
ನೀನಿರುವ ಸುಳ್ಳಲ್ಲು  ನಾನಿರುವೆ ನಿಜವಾಗಲೂ   

mussanje rangalli - psycho

ಚಿತ್ರ: ಸೈಕೋ
ಹಾಡಿದವರು: ಸೈಂಧವಿ

ಮುಸ್ಸಂಜೆ ರಂಗಲ್ಲಿ ನಿನ್ನ ಪ್ರೀತಿ ರಂಗಲ್ಲಿ ತೇಲಿ ಹೋದೆ
ನೀ ಯಾರೋ ಯಾವೂರೋ ಕಾಣೆ ಹೇಗೋ ನನ್ನಲ್ಲಿ ಸೇರಿ ಹೋದೆ
ಹೃದಯವೇ ನೀ ಬಾ ಬೇಗ, ನಮದಾಗಲಿ ಪ್ರೇಮ ಸಂಯೋಗ

ಬಾನಲ್ಲಿ ಸಂತೋಷದಿ ಹಾರಿದ್ದ ಬೆಳ್ಳಕ್ಕಿ ನಾ
ಇರಲಿಲ್ಲ ನನಗ್ಯಾವ ಬೇನೆ
ನೀ ಪ್ರೀತಿ ಮಾತಾಡುತ ಬಲೆ ಬೀಸೆ ನಾ ಸಿಕ್ಕಿದೆ
ಹೊಸ ಪ್ರೇಮ ಸವಿಜಾಲದಲ್ಲಿ
ರವಿ ನಿಂತು ಮುಗಿಲ ಮರೆಯಲ್ಲಿ ನಗುವಂತೆ ನೋಡಿ ಧರೆಯನ್ನು
ನಿನ್ನಾಟ ತಂದ ತಾಪ ನನ್ನ ಮನಸ ತಾಕದೇನೋ 
ಬರಿ ಕಣ್ಣು ಕಾಣದ ತಂಗಾಳಿ, ತಂದಂತೆ ಕಂಪಿನ ರಂಗೋಲಿ
ನೀನಿಂತೆಯೋ ಈ ಹೆಣ್ಣಲ್ಲಿ, ನಿಜ ಬಂಧಿಯು ನೀನು ನನ್ನಲ್ಲಿ 

ನರನಾಡಿಯ ವೀಣೆಯು ಮಿಡಿದಂತ ಸ್ವರ ಹೇಳಿದೆ
ಇವನೇನೆ ಆ ನಿನ್ನ ಪ್ರೇಮಿ
ಆ ಪ್ರೀತಿ ಮಳೆ ಬೀಳಲು ನೂರಾಸೆ ಹೂವಾಗಿದೆ
ನವ ಚೈತ್ರ ಕಂಡಂತ ಭೂಮಿ
ಅಲೆ ನೂರು ಆಸೆ ಕಡಲಲ್ಲಿ, ಹುಚ್ಚೆದ್ದು ಕುಣಿಯುತಿದೆ ಇಲ್ಲಿ
ಇದ ತಂದ ಚಂದ್ರ ಎಲ್ಲಿ, ಹೋದೆ ಯಾವ ದಿಕ್ಕಿನಲ್ಲಿ
ಸಾಕಿನ್ನು ಮಾತಿನ ಸಂದೇಶ, ಎದುರಲ್ಲಿ ಬಾ ಪ್ರಿಯ ಸಂತೋಷ
ನೀ ನಾಯಕ ಈ ಕಾವ್ಯಕ್ಕೆ, ಆ ಬ್ರಹ್ಮನು ತಂದ ಬಂಧಕ್ಕೆ

  

eke heegaaitho - anjada gandu

ಚಿತ್ರ: ಅಂಜದ ಗಂಡು
ಹಾಡಿದವರು: ಎಸ್ ಪಿ ಬಿ, ಛಾಯ
ನಟರು: ರವಿಚಂದ್ರನ್, ಖುಷ್ಬೂ

ಏಕೆ ಹೀಗಾಯ್ತೋ ನಾನು ಕಾಣೆನೋ
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ

ಏಕೆ ಹೀಗಾಯ್ತೋ ನಾನು ಕಾಣೆನೋ
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ
ಆ ನೋಟದಲಿ ಅದು ಏನಿದೆಯೋ
ತುಟಿ ಅಂಚಿನಲಿ ಸವಿ ಜೇನಿದೆಯೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ

ನೀ ನಗುವಾಗ ಜರತಾರಿ ಹೊಸ ಸೀರೆಯುಟ್ಟು ಬಳುಕಾಡಿ ಬಂದೆ
ನೀ ನುಡಿದಾಗ ಮೊಳದುದ್ದ ಜಡೆ ತುಂಬ ಮಲ್ಲೆ ಮುಡಿದೆನ್ನ ಸೆಳೆದೆ
ಉಸಿರಾಟ ಮರೆತು ಹೋಯಿತು ಬೇರೇನು ಕಾಣದಾಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು

ಏಕೆ ಹೀಗಾಯ್ತೋ......

ಈ ಹೊಸದಾದ ಆನಂದ ತಂದಂತ ಮತ್ತಿನ ಮುತ್ತನ್ನ ತಂದೆ
ಆ ನೆನಪಲ್ಲೇ ಹೊಸದಾದ ಅನುರಾಗ ನನ್ನ ಎದೆಯಲ್ಲಿ ತಂದೆ
ಈ ನಾಡಿ ನಿಂತು ಹೋಯಿತು ನಾ ಯಾರೋ ಮರೆತು ಹೋಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು

ಏಕೆ ಹೀಗಾಯ್ತೋ......

preetiyalli iro sukha - anjada gandu

ಚಿತ್ರ: ಅಂಜದ ಗಂಡು
ಹಾಡಿದವರು: ಎಸ್ ಪಿ ಬಿ, ಮಂಜುಳ ಗುರುರಾಜ್
ನಟರು: ರವಿಚಂದ್ರನ್, ಖುಷ್ಬೂ

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ
ಹೂ ಅಂತಿಯ ಉಹು ಅಂತಿಯ
ಬಾ ಅಂತಿಯ ತಾ ಅಂತಿಯ
ಹೇಳುವೆ ಬಳಿ ಬಂದರೆ ತುಟಿಗಳ ಸಿಹಿ ಅಂಚಲಿ

ಹೊಸದು ತೀರ ಹೊಸದು ಒಲವ ಮಿಡಿತ ಹೊಸದು
ಸುಖದ ಅರ್ಥ ತಿಳಿದೆ ಬಾರೆನ್ನ ರಾಜ ಅದರ ಸೊಗಸು ಸವಿದೆ
ಮನಸು ಆಡಿದೆ ಹಾಡಿದೆ ನಿನ್ನನ್ನು ಕೇಳಿದೆ ಎಂದು ಕಲ್ಯಾಣ
ಕನಸು ಕಣ್ಣಲಿ ತುಂಬಿದೆ ಮೆಲ್ಲಗೆ ಹೇಳಿದೆ ಇಂದೇ ಆಗೋಣ
ಓ ಮೈ ಲವ್ .....ಓ ಮೈ ಲವ್.......

ಮೌನದಲ್ಲಿ ಕರೆದೆ ಕರೆದು ಹೆಸರ ಬರೆದೆ
ನೀನು ಬರೆದ ಕವನ ನನ್ನಾಣೆ ಚಿನ್ನ ಓದಿ ಓದಿ ನಲಿದೆ
ಪ್ರೇಮದ ಅ ಆ ಇ ಈ ಬರೆಯಿಸಿ ಪಾಠವ ಕಲಿಸಿದೆ ನೀನೆ ಕಣ್ಣಲ್ಲಿ
ನಿನಗೆ ಪಾಠವ ಹೇಳುವ ಸಾಹಸ ಧೈರ್ಯವ ತಂದೆ ನನ್ನಲ್ಲಿ
ಐ ಲವ್ ಯು.....ಐ ಲವ್ ಯು.......

mooru kaasina kudure - anjada gandu

ಚಿತ್ರ: ಅಂಜದ ಗಂಡು
ಹಾಡಿದವರು: ರಮೇಶ್
ನಟರು: ರವಿಚಂದ್ರನ್, ಖುಷ್ಬೂ

ರಂಭಾ ಬೇಡ ಜಂಬ
ಜಂಬ ಗಿಂಬ ಬೇಡ ರಂಭಾ

ಮೂರು ಕಾಸಿನ ಕುದುರೆ
ಏರಿ ಬಂದಳೋ ಚದುರೆ
ಜಂಬ ಮಾಡಬೇಡಮ್ಮ
ಭೂಮಿ ಮೇಲೆ ನಡೆಯಮ್ಮ
ಆ ಸೂರ್ಯ ಹುಟ್ಟೋದು ಕೋಳಿ ಕೂಗಿನಿಂದಲ್ಲ
ಲೋಕ ದೀಪ ಹಚ್ಚೋದು ಅಜ್ಜಿ ಬೆಂಕಿಯಿಂದಲ್ಲ
ಇದು ಯಾಕೋ ರಂಭೆಗೆ ಇನ್ನು ಗೊತ್ತೇ ಆಗಿಲ್ಲ

ಕಿಲಾಡಿ ಹೆಣ್ಣು ಓ ಚಕೋತಿ ಹಣ್ಣು
ಅಯ್ಯಯ್ಯೋ ಯಾಕೋ ತಿನ್ನೋಕೆ ಮಾತ್ರ ಹುಳಿಯಮ್ಮೋ
ಭಲಾರೆ ಹೆಣ್ಣು ಚಕೋರಿ ಕಣ್ಣು
ಅಯ್ಯಯ್ಯೋ ಬೇಡ ಈ ನಿನ್ನ ನೋಟ ವಿಷವಮ್ಮೋ

ಆರಂಭ ಹೆಣ್ಣಿಂದಲೇ  ಆನಂದ ಹೆಣ್ಣಿಂದಲೇ ಅಪಾಯ ಹೆಣ್ಣಿಂದಲೇ ಕೇಳೆ
ವೀರಾಧಿವೀರರೆಲ್ಲ ಮಣ್ಣಾಗಿ ಹೋದದ್ದೆಲ್ಲ ನಿನ್ನಂತ ಹೆಣ್ಣಿಂದಲೇ ಕೇಳೆ
ಜಡೆ ಹಾಕು ಸುಂದರವಾಗಿ ಓ ಕನಕಾಂಗಿ 
ಬದಲಾಗು ನೀನು ಹಳ್ಳಿಯ ಮುದ್ದಿನ ಹೆಣ್ಣಾಗಿ 

ಮೂರು ಕಾಸಿನ ಕುದುರೆ.....

ಮಣ್ಣಲ್ಲಿ ಚಿನ್ನ ಅಕ್ಕಿಲಿ ಅನ್ನ 
ತಂದಿದ್ದು ನಾವು ತಿಂದಿದ್ದು ನೀವು ತಿಳಿಯಮ್ಮೋ 
ಈ ನಮ್ಮ ಬೆವರು ಶ್ರೀಮಂತರುಸಿರು 
ಅಳೆಯೋಕೆ ನಾವು ಆಳೋಕೆ ನೀವ ಬೇಡಮ್ಮೋ 

ಆಳೋನು ಆಳಾಗುವ ಅಳೆಯೋನು ಅರಸಾಗುವ
ಬಡವರ ಕಾಲವು ಬಂತು ಕೇಳೆ 
ದುಡಿಯೋನು ಮುನಿದೆದ್ದರೆ ಉಳುವವನು ಸಿಡಿದೆದ್ದರೆ
ಉಳಿಗಾಲ ಇಲ್ಲವೇ ನಿಮಗೆ ನಾಳೆ
ದಯ ತೋರು ಮಾನವಳಾಗಿ ಬಡವರಿಗಾಗಿ
ಬದಲಾಗು ನೀನು ಕನ್ನಡ ಮಣ್ಣಿನ ಹೆಣ್ಣಾಗಿ

ಮೂರು ಕಾಸಿನ ಕುದುರೆ......

Monday, November 9, 2009

yaare neenu sundara cheluve - raNadheera

ಚಿತ್ರ: ರಣಧೀರ
ಹಾಡಿದವರು: ಎಸ್ ಜಾನಕಿ
ನಟರು: ರವಿಚಂದ್ರನ್, ಖುಷ್ಬೂ

ಯಾರೇ ನೀನು ಸುಂದರ ಚೆಲುವೆ ಒಬ್ಬಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ
ಬಾ ಭೂಮಿಯೇ ನಿನ್ನೊಡಲಲ್ಲಿ ನಾನಾಡುವೆನು
ಬಾ ಪ್ರೇಮಿಯೇ ನಿನ್ನೆದೆಯಲ್ಲಿ ಓಲಾಡುವೆನು
ಈ ಅಂದ ಚೆಂದವೆಲ್ಲ ಯಾರಿಗಾಗಿ ಹೇಳೆಯ

ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ ಬಣ್ಣ
ಮಿಂಚಿದೆ ಮಿಂಚುತ ಮಿನುಗಿದೆ
ಸುಂದರ ಸರೋವರಗಳು ನಿನ್ನ ಎರಡು ಕಣ್ಣು
ಕಣ್ಣಲಿ ವಿರಹವೇ ತುಂಬಿದೆ
ಮಳೆಗಾಲ ಬಂದಾಗ ಮೈಮರೆವ ಓ ಸಿಂಗಾರಿ
ಛಳಿಗಾಲ ಬಂದಾಗ ಮುಸುಕೆಳೆವ ಓ ಚಿನ್ನಾರಿ
ಹೀಗೇಕೆ ಕಾದಿರುವೆ ಮನಸಿನ ಚಿಂತೆ ಹೇಳೆಯ

ವಾರೆವಾ ಈ  ಕಾಫಿ ತುಂಬ ಬೊಂಬಾಟಾಗಿದೆ
ಕಾಫಿ ಮಾಡೋ ಹುಡುಗಿ ಕೂಡ ಬೊಂಬಾಟಾಗಿದೆ
ಓ ಮನ್ಮಥ ಪುತ್ರರೆ ನನ್ನ ಹಾಡು ಕೇಳಿದಿರಾ
ಹೌದಮ್ಮ ರತಿ ಪುತ್ರಿ ನಿನ್ನ ಹಾಡು ಕೇಳಿದಿವಿ
ಮನಸಾರೆ ಮೆಚ್ಚಿದಿವಿ ಎಂಜಾಯ್ ಮಾಡಿದಿವಿ
ಎಲ್ಲಾನೂ ನೋಡಿದಿವಿ

ಇಲ್ಲಮ್ಮ ತಾಯಿ, ಮುಚ್ಚೋ ಬಾಯಿ
ಬೊಗಳೆ ದಾಸಯ್ಯ
ನಾನಿನ್ನ ತಾಯಿ ಅಲ್ಲ ಪುಟ್ಟ ತಂಗಿ ಅಣ್ಣಯ್ಯ

ಲ ಲ ಲ..........

ಈ ಪ್ರೀತಿ ಬರುವ ಮುಂಚೆ ಯಾರಿಗೂ ಹೇಳೋಲ್ಲ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ

ಎ ಸಂಜು.....

ಏನೇ ಹೇಳು ಸಂಜು ಅವಳ ಹಾಡು ಕೇಳಿ
ಮನಸಿಗೆ ತಿಳಿಯದ ಮುಜುಗರ
ಕಾಡಲ್ಲಿದ್ದರು ಕೂಡ ಹಾಡಿ ನಲಿಯುತಾಳೆ 
ಅವಳದು ಎಂತದು ಸಡಗರ
ಇಂಪಾಗಿ  ಹಾಡ್ತಿಯಂತ ಹೇಳೋಕೆ ನಾ ಹೋದೆ
ಯಾಕೇಂತ ಗೊತ್ತಿಲ್ಲ ಮಾತಿಲ್ಲದಂತೆ ನಾನಾದೆ 
ಹೀಗೇಕೆ ನಾನಾದೆ ನಿನ್ನಾಣೆ ನನಗೇನೋ ಇದು ಹೊಸದು 

ಲ ಲ ಲ......

ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳಲ್ಲ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ......

lokave heLida maatidu - raNadheera

ಚಿತ್ರ: ರಣಧೀರ
ಹಾಡಿದವರು: ಎಸ್ ಪಿ ಬಿ, ಎಸ್ ಜಾನಕಿ
ನಟರು: ರವಿಚಂದ್ರನ್, ಖುಷ್ಬೂ


ಲೋಕವೇ ಹೇಳಿದ ಮಾತಿದು
ವೇದದ ಸಾರವೇ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು... ಮಾಡಿದರೆ
ಜಗಕೆ ಹೆದರಬಾರದು


ಅನಾರ್ಕಲಿ.....ಅನಾರ್ಕಲಿ


ಮರಳುಗಾಡೆ ಇರಲಿ ಭೂಮಿಗೆ ಸೂರ್ಯನಿಳಿದು ಬರಲಿ
ಪ್ರೀತಿಸೋ ಜೀವಗಳು ಬಾಡಲಾರದಂಥ  ಹೂವುಗಳು
ರಾಜಕೀಯವಿರಲಿ ಶಕುನಿಗಳ ನೂರು ತಂತ್ರವಿರಲಿ
ಪ್ರೇಮದ ರಾಜ್ಯದಲ್ಲಿ ಸಾವಿಗೆಂದು ಭಯ ಕಾಣದಿಲ್ಲಿ
ಲೋಕವ ಕಾಡುವ ಕೋಟಿ ರಾಕ್ಷಸರಿದ್ದರು ಭೂಮಿ ಕೇಳಲಿಲ್ಲ
ಬಾಯ್ ತೆರೆಯಲಿಲ್ಲ ಮಾತಾಡಲಿಲ್ಲ
ಪ್ರೇಮಿಗಳಿಬ್ಬರು ಇಲ್ಲಿ ಪ್ರೀತಿಸಿ ಬಾಳೋದು ನೀವು ಸಹಿಸಲಿಲ್ಲ
ಬಾಯ್ ಬಿಟ್ಟಿರಲ್ಲ ಹೂಳಿಟ್ಟಿರಲ್ಲ      


ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟಬಾರದು


ಓ ರೋಮಿಯೋ......ಓ ರೋಮಿಯೋ


ದ್ವೇಷವೆಂಬ ವಿಷವ ಸೇವಿಸುತ ಖಡ್ಗ ಮಸೆಯುತಿರುವ
ಅಂಧರ ಕಣ್ಣಿಗೆ ಈ ಪ್ರೀತಿಯ ಸ್ವರೂಪ ಕಾಣಿಸದು
ಮನಸು ಕಣ್ಣು ತೆರೆದು ನೋಡಿದರೆ ಎಲ್ಲ ಶೂನ್ಯವಿಹುದು
ಪ್ರೀತಿಯ ನಂಬಿದರೆ ಅಂಧಕಾರದಲ್ಲೂ ಕಾಣುವುದು
ರಾಜ್ಯಗಳಳಿದು ಕೋಟೆ ಕೊಟ್ಟಲು ಉರುಳಿದವು ಹೆಣ್ಣಿಗಾಗಿ
ಈ ಮಣ್ಣಿಗಾಗಿ ಈ ಹೊನ್ನಿಗಾಗಿ
ಜೀವದ ಆಸೆಯ ಬಿಟ್ಟು ವಿಷವ ಕುಡಿದರಿಲ್ಲಿ ಪ್ರೀತಿಗಾಗಿ
ಆನಂದವಾಗಿ ಆಶ್ಚರ್ಯವಾಗಿ


ಪ್ರೀತಿ  ಮಾಡಬಾರದು ಮಾಡಿದರೆ ವಿಷವ ಕುಡಿಯಬಾರದು.....


ಲೋಕವೇ ಹೇಳಿದ ಮಾತಿದು......