Friday, March 26, 2010

apaara keerthi - vijayanagarada veeraputhra

ಚಿತ್ರ: ವಿಜಯನಗರದ ವೀರಪುತ್ರ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ವಿಶ್ವನಾಥ್ - ರಾಮಮೂರ್ತಿ
ಗಾಯನ : ಪಿ.ಬಿ.ಶ್ರೀನಿವಾಸ್

ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ
ಆಗಸದೆ ತೇಲುತಿದೆ ಮೋಡ
ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ
ಹಸಿ ಹಸಿರು ವನರಾಜಿ ನೋಡ....

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...

ಮಾತೆ ತುಂಗಭದ್ರೆ ಹರಿಯುತಿಹಳು ಇಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ

ದೇವ ವಿರೂಪಾಕ್ಷ ಈವ ನಮಗೆ ರಕ್ಷ
ಜೀವಿಗೆ ತಾ ನೀಡುವನು ಧರ್ಮದ ದೀಕ್ಷ
ಜೀವಿಗೆ ತಾ ನೀಡುವನು ಧರ್ಮದ ದೀಕ್ಷ

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...

ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ
ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ
ಹಕ್ಕಬುಕ್ಕರಾಳಿ ಭವ್ಯತೆಯನು ತಾಳಿ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...

taayiya tandeya - madhura sangama

ಚಿತ್ರ: ಮಧುರ ಸಂಗಮ
ಸಾಹಿತ್ಯ:ಆರ್.ಎನ್.ಜಯಗೋಪಾಲ್
ಸಂಗೀತ:ರಾಜನ್-ನಾಗೇಂದ್ರ
ಗಾಯನ:ಎಸ್.ಜಾನಕಿ

ತಾಯಿಯಾ ತಂದೆಯಾ ಮಮತೆ ವಾತ್ಸಲ್ಯ
ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ....ತಾಯಿಯಾ...

ಸೃಷ್ಟಿ ಮಾಡುವ ಬ್ರಹ್ಮದೇವ
ಭಕ್ತ ಬಾಂಧವ ಮಹಾ ವಿಷ್ಣು
ಶರಣ ಪಾಲಕ ಮಹಾದೇವ
ಹೆತ್ತ ಕರುಳನು ಕಾಣದೇ..೨..
ಶಿಲೆಗಳಾದರು ಲೋಕದಿ....ತಾಯಿಯಾ...

ಧನವ ನೀಡುವ ಧರ್ಮದಾತ
ವಿದ್ಯೆ ಕಲಿಸುವ ಪಾಠಶಾಲೆ
ನೀತಿ ಹೇಳುವ ಈ ಸಮಾಜ
ತಂದೆ ಪ್ರೀತಿಯ ತೋರ್ವರೇ..೨..
ತಾಯಿ ಮಮತೆಯ ಕೊಡುವರೆ....ತಾಯಿಯಾ...

raaja muddu raaja - sampattige savaal

ಚಿತ್ರ: ಸಂಪತ್ತಿಗೆ ಸವಾಲ್ (೧೯೭೪)
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಜಿ.ಕೆ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನೀವಾಸ್ ಮತು ಎಸ್. ಜಾನಕಿ
ನಟರು: ಡಾ ರಾಜಕುಮಾರ್, ಮಂಜುಳ

ರಾಜಾ ಮುದ್ದು ರಾಜಾ, ನೂಕುವಂತ ಕೋಪ ನನ್ನಲೇಕೆ
ಸರಸದ ವೇಳೆ ದೂರ ನಿಲ್ಲಬೇಕೆ
ಕೋಪವೇಕೆ
ನಿನಗಾಗಿ ಬಂದೆ ಒಲವನ್ನು ತಂದೆ, ನನದೆಲ್ಲ ನಿಂದೇ,

ರಾಜಾ ನನ್ನ ರಾಜಾ...
ಮುದ್ದು ರಾಜಾ

ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜ ನನ್ನ ರಾಜ
ಆಸೆ ಬಾರದೇನು, ನಾನಂದವಿಲ್ಲವೇನು, ಮನಸಿನ್ನು ಕಲ್ಲೇನು
ರಾಜ ಬೇಡ ರಾಜಾ, ನೂಕುವಂತ ಕೋಪ ನನ್ನಲೇಕೆ, ಮುದ್ದು ರಾಜಾ...

ಹಣದ ಸೊಕ್ಕಿನಿಂದ, ಮೆರೆದಾಡೋ ನಿನ್ನ ಚೆಂದ, ಬಲ್ಲೇ... ನಾ ಬಲ್ಲೇ.....
ಬೆಂಕಿಯಂತೆ ನಾನು, ತಣ್ಣೀರಿನಂತೆ ನೀನು, ನೀ ನನ್ನ ಜೊತೆಯೇನು ನಿಲ್ಲೇ, ದೂರ ನಿಲ್ಲೇ
ಗಂಡು ಬೀರಿಯಲ್ಲ, ನಾ ಹಿಂದಿನಂತೆ ಇಲ್ಲ ನಲ್ಲಾ ನನ್ನ ನಲ್ಲ...
ತಂದೆ ಮಾತ ತಳ್ಳಿ, ನಾ ಓಡಿ ಬಂದೆನಲ್ಲ, ನಿನ್ನಾಣೆ ಸುಳ್ಳಲ್ಲ ರಾಜಾ
ಮುದ್ದು ರಾಜಾ

raagake swaravaagi - hrudaya pallavi

ಚಿತ್ರ: ಹೃದಯ ಪಲ್ಲವಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಎಂ.ರಂಗರಾವ್
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ

ಸ ಸರಿಗಮ ಪ.. ಮಪಮಪ ಗ..
ಪ ಮದಪಮ ಗ.. ರಿಗರಿಸ

ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ
ನಿನ್ನ ಕಣ್ಣಾಗಿ - (೨)

ಸಾಆಆಆ
ಸ ನಿ ದ ಸ ನಿ ದ ಸ ನಿ ದ
ದ ಗ ರಿ ಸ ದ ಪ ದ ಪ
ತನನಂ ತನನಂ ತನನಂ ತನನಂ
ತನನಂ ತನನಂ ತನ ತನನ
ಸ ಸ ದ ಸ ಸ ದ
ಸ ಸ ದ ಸ ಸ ದ
ಸ ಸ ದ ಸ ಸ ದ
ಪ ದ ಗ ರಿ

ಮುಂಜಾನೆಯ ಎಳೆಬಿಸಿಲಲ್ಲಿ
ಮುತ್ತಿನ ಹನಿಗಳ ಕಂಪು
ಸಾಗರದ ಈ ಅಲೆಗಳಲ್ಲಿ
ಪ್ರಕೃತಿಯ ಶಕ್ತಿಯ ಇಂಪು

ಕಡಲಲಿ ನದಿಯ ಸಂಗಮವು
ದೇವನ ಸೃಶ್ಟಿಯ ರೀತಿ
ಗಂಡು ಹೆಣ್ಣಿನ ಹೃದಯ ಸಂಗಮ
ಇದರ ಹೆಸರೆ ಪ್ರೀತಿ

ರಾಗಕ್ಕೆ ಸ್ವರವಾಗಿ ಸ್ವರಕ್ಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ
ನಿನ್ನ ಕಣ್ಣಾಗಿ

ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಸ ರಿ ಗ ಪ ದ ಪ
ಸ ರಿ ಗ ಪ ದ ಪ
ರಿ ಗ ಪ ದ ಸ ದ
ರಿ ಗ ಪ ದ ಸ ದ
ಸ ರಿ ಗ ರಿ ಗ ರಿ ಗ
ದ ಪ ದ ಪ ದ ಪ ದ
ಸ ರಿ ರಿ ಪ
ಸ ರಿ ರಿ ಪ
ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಪ ದ ಸ ರಿ ಗ

nee meetida nenapellavu - nee bareda kaadambari

ಚಿತ್ರ: ನೀ ಬರೆದ ಕಾದಂಬರಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ವಿಜಯಾನಂದ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ

ಬಾಳಲ್ಲಿ ನೀ ಬರೆದೆ ಕಣ್ಣೀರ ಕಾದಂಬರಿ
ಕಲ್ಲಾದ ಹೃದಯಕ್ಕೆ ಏಕಾದೆ ನೀ ಮಾದರಿ
ಉಸಿರಾಗುವೆ ಎಂದ ಮಾತೆಲ್ಲಿದೆ
ಸಿಹಿ ಪ್ರೇಮವೆ ಇಂದು ವಿಷವಾಗಿದೆ
ಹುಸಿ ಪ್ರೀತಿಯ ನಾ ನಂಬಿದೆ
ಮಳೆ ಬಿಲ್ಲಿಗೆ ಕೈ ಚಾಚಿದೆ
ಒಲವೆ ಚೆಲುವೆ ನನ್ನ ಮರೆತು ನಗುವೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ

ಹಗಲೇನು ಇರುಳೇನು ಮನದಾಸೆ ಮರೆಯಾಗಿದೆ
ಸಾವೇನು ಬದುಕೇನು ಏಕಾಂಗಿ ನಾನಾಗಿರೆ
ನಾ ಬಾಳುವೆ ಕಂದ ನಿನಗಾಗಿಯೆ
ಈ ಜೀವನ ನಿನ್ನ ಸುಖಕಾಗಿಯೆ
ನನ್ನಾಸೆಯ ಹೂವಂತೆ ನೀ
ಇರುಳಲ್ಲಿಯೂ ಬೆಳಕಂತೆ ನೀ
ನಗುತ ಇರು ನೀ ನನ್ನ ಪ್ರೀತಿ ಮಗುವೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ

olavina uDugore koDalenu - olavina uDugore

ಚಿತ್ರ: ಒಲವಿನ ಉಡುಗೊರೆ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಎಂ.ರಂಗರಾವ್
ಗಾಯನ: ಪಿ.ಜಯಚಂದ್ರನ್
ನಟರು: ಅಂಬರೀಶ್, ಮಂಜುಳ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಪ್ರೇಮ ದೈವದ ಗುಡಿಯಂತೆ
ಪ್ರೇಮ ಜೀವನ ಸುಧೆಯಂತೆ
ಅಂತ್ಯ ಕಾಣದು ಅನುರಾಗ
ಎಂದು ನುಡಿವುದು ಹೊಸ ರಾಗ

ಒಲವು ಸಿಹಿ ನೆನಪು ಸಿಹಿ
ಹೃದಯಗಳ ಮಿಲನ ಸಿಹಿ
ಪ್ರೇಮವೇ ಕವನಾ ಮರೆಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

ತಾಜಮಹಲಿನ ಚೆಲುವಲ್ಲಿ
ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿಕಾವ್ಯ
ಪ್ರೇಮ ಸಾಕ್ಷಿಯು ನಿಜದಲ್ಲಿ

ಕವಿತೆ ಇದಾ ಬರೆದಿರುವೆ
ಹೃದಯವನೆ ಕಳಿಸಿರುವೆ
ಕೋಮಲಾ ಇದು ನೀ ಎಸಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

karpoorada gombe naanu - naagara haavu

ಚಿತ್ರ: ನಾಗರ ಹಾವು
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ.ಸುಶೀಲ
ನಟರು: ವಿಷ್ಣು ವರ್ಧನ್, ಆರತಿ, ಅಶ್ವಥ್

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ನಿನ್ನ ಪ್ರೇಮ ಜ್ವಾಲೆ ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು

ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ದೇಹದಿ ಪ್ರಾಣವು ಕಲೆತಿಹ ರೀತಿ
ನಿನ್ನಲೇ ಬೆರೆತೆ ನನ್ನನೇ ಮರೆತೆ

ಕರ್ಪೂರದ ಗೊಂಬೆ ನಾನು

ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ಒಲವನು ಅರಿತ ಹೃದಯವೇ ಧನ್ಯ
ನಿನ್ನನಾ ಪಡೆದೆ ಧನ್ಯ ನಾ ನಿಜದಿ

ಕರ್ಪೂರದ ಗೊಂಬೆ

karpoorada gombe naanu
minchante baLi bande neenu
ninna prema jwaale soki nanna mele
karagi karagi neeraade naanu

hoovali bereta gandhada reeti
shrutiyali kaleta naadada reeti
dehadi praaNavu kaletiha reeti
ninnale berete nannane marete

karpoorada gombe naanu

devana serida hoovadu dhanya
poojeya maaDida kaigaLe dhanya
olavanu arita hrudayave dhanya
ninnanaa paDede dhanya naa nijadi

karpoorada gombe naanu

muddina hudugi chanda - raayaru bandaru maavana manege

ಚಿತ್ರ: ರಾಯರು ಬಂದರು ಮಾವನ ಮನೆಗೆ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರಾಜ್ ಕೋಟಿ
ಗಾಯನ: ಎಸ್. ಪಿ. ಬಾಲಸುಭ್ರಮಣ್ಯಂ
ನಟರು: ಡಾ ವಿಷ್ಣು ವರ್ಧನ್, ಡಾಲಿ, ಬಿಂದಿಯ

ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಓ ಚಿನ್ನ ಅಂದು ನೋಡಿದೆ ನಿನ್ನನು
ಓ ರನ್ನ ಸೆರೆ ಮಾಡಿದೆ ನನ್ನನು
ಅರಿಯದೆ ಹೇಗೊ ನಾ ಬೆರೆತೆ ನಿನ್ನಲಿ
ತನು ಮನವೆಲ್ಲ ತುಂಬಿ ನಿಂತೆ ನನ್ನಲಿ
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ

ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಯಾವುದೋ ಜನುಮಾಂತರ ಬಂಧನ,
ಬೆರೆಸಿತು ಅದು ನಮ್ಮನು ಆ ದಿನ
ತಾಳದು ಜೀವ ನೀ ನಿಮಿಷ ನೊಂದರು,
ಒಂದೆ ಒಂದು ಹನಿಯ ಕಣ್ಣೀರು ಬಂದರು,
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ಮುದ್ದಿನ ಹುಡುಗ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ee bandhana - bandhana

ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಎಂ.ರಂಗರಾವ್
ಗಾಯನ : ಡಾ.ಕೆ.ಜೆ.ಯೇಸುದಾಸ್ ಮತ್ತು ಎಸ್.ಜಾನಕಿ

ಈ ಬಂಧನ ಜನುಮ ಜನುಮದ ಅನುಬಂಧನ
ಈ ಬಂಧನ ಜನುಮ ಜನುಮದ ಅನುಬಂಧನ
ಈ ಪ್ರೇಮ ಸಂಗೀತ ಸಂತೋಷ ಸಂಕೇತ

ಈ ಬಂಧನ ಜನುಮ ಜನುಮದ ಅನುಬಂಧನ
ಈ ಬಂಧನ ಜನುಮ ಜನುಮದ ಅನುಬಂಧನ
ಈ ಪ್ರೇಮ ಸಂಗೀತ ಸಂತೋಷ ಸಂಕೇತ

ಈ ಬಂಧನ ನನ್ನ ನಿನ್ನ ಮಿಲನ ತಂದ ಹೊಸ ಜೀವನ
ಈ ಬಂಧನ ಎದೆಯ ತುಂಬಿ ಬಂದ ಒಂದು ಸುಖ ಭಾವನ

ನಿನ್ನಾ
ಮಡಿಲಲ್ಲಿ

ನಾನೂ
ಮಗುವಾದೇ

ನಿನ್ನಾ
ಉಸಿರಲ್ಲಿ

ನಾನೂ
ಉಸಿರಾದೆ

ಪ್ರೇಮದಾ ಸೌರಭ ಚೆಲ್ಲುವ ಚಂದನ

ಈ ಬಂಧನ ಜನುಮ ಜನುಮದ ಅನುಬಂಧನ

ಈ ದಾರಿಯೂ ಹೂವ ರಾಶಿ ಹಾಸಿ ನಮಗೆ ಶುಭ ಕೋರಿದೆ
ಆ ದೂರಾದ ಒಲವ ಮನೆಯು ಕೈಯ್ಯಾ ಬೀಸಿ ಬಾ ಎಂದಿದೆ

ಹೆಜ್ಜೆ ಜೊತೆಯಾಗಿ
ನಿನ್ನಾನೆರಳಾಗಿ

ಪ್ರೀತಿ ಬೆಳಕಾಗಿ
ದಾರಿ ಹಾಯಾಗಿ

ಸೇರುವಾ ಸುಂದರ ಪ್ರೇಮದಾ ಮಂದಿರ

ಈ ಬಂಧನ ಜನುಮ ಜನುಮದ ಅನುಬಂಧನ

ee bandhana januma janumada anubandhana
ee bandhana januma janumada anubandhana
ee prema sangeeta santosha sanketa                    x 2

ee bandhana nanna ninna milana tanda hosa jeevana
ee bandhana edeya tumbi banda ondu sukha bhaavana

ninna maDilalli
naanu maguvaade
ninna usiralli
naanu usiraade

premada sourabha chelluva chandana

ee bandhana januma janumada anubandhana

ee daariyu hoova raashi haasi namage shubha koride
aa dooraada olava maneyu kaiyaa beesi baa endide

hejje joteyaagi
ninna neraLaagi

preeti beLakaagi
daari haayaagi
seruvaa sundaraa premadaa mandira

ee bandhana januma janumada anubandhana


entha soundarya nodu - maatu tappada maga

ಚಿತ್ರ: ಮಾತು ತಪ್ಪದ ಮಗ (೧೯೭೮)
ಸಂಗೀತ: ಇಳೆಯರಾಜ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಹಾಡಿದವರು: ಎಸ್.ಪಿ.ಬಾಲಸುಬ್ರಹ್ಮಣ್ಯಂ


ಹೆಯ್...ಹೆಯ್ ಹೆಯ್, ಹಾ..ಹಾಹಾಹಾ
ಎ ಹೆಯ್ ಹೆಯ್, ಎ ಹೆಯ್ ಹೆಯ್
ಎ ಹೆಯ್ ಹೆಯ್ ಹೆಯ್ ಹೆಯ್...

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ ನಾಡಿದು ಚಿನ್ನದಾ ಮಣ್ಣಿದು

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ
ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ
ಭರತ ಮಾತೆಯಾ ಈ ತನುಜಾತೆಯ ಚೆಲುವನು ನೋಡುತ ನಲಿಯುತ ಮೆರೆಯುವೆನಾ..

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಎಲ್ಲೇ ಇರಲಿ, ಹೇಗೇ ಇರಲಿ, ನಮ್ಮೂರ ಸವಿನೋಟ ಚಂದ,
ಸಾವಿರ ಭಾಷೆಯ, ಕಲಿತರು ಮನಕೇ, ಕನ್ನಡ ನುಡಿಮುತ್ತೆ ಅಂದ,
ಪೂರ್ವದ ಪುಣ್ಯವೊ, ಪಡೆದಿಹ ಭಾಗ್ಯವೊ, ಹುಟ್ಟಿದೆ ಪಾವನ ಕನ್ನಡ ಮಣ್ಣಲಿನಾ..

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ, ನಾಡಿದು, ಚಿನ್ನದಾ, ಮಣ್ಣಿದು

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಲಾ ಲಾ ಲಾ ಲಾ ಲಾ, ಲಾ ಲಾ ಲಾ ಲಾ ಲಾ

entha soundarya noDu, namma karunaaDa beeDu
gandhada gooDidu kalegaLa touridu
kannaDa naaDidu chinnadaa maNNidu

entha soundarya noDu, namma karunaaDa beeDu

hariyuva neeru, hasurina pairu, elleDe aa taaya siriye
hoogaLa kampu, maragaLa sompu, ellu aa taaya nageye   x 2
bharata maateyaa ee tanujaateya cheluvanu noDuta naliyuta mereyuvenaa

entha soundarya noDu, namma karunaaDa beeDu

elle irali, hege irali, nammoora savinoTa chanda,
saavira bhaasheya, kalitaru manake, kannaDa nuDimutte anda,
poorvada puNyavo, paDediha bhaagyavo, huTTide paavana kannaDa maNNalinaa

entha soundarya.......

nagu nagutha nali nali - bangarada manushya

ಚಿತ್ರ: ಬಂಗಾರದ ಮನುಷ್ಯ
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ

ಸಂಗೀತ : ಜಿ.ಕೆ.ವಂಕಟೇಶ್
ಗಾಯನ : ಪಿ.ಬಿ.ಶ್ರೀನಿವಾಸ್
ನಟರು: ರಾಜ್ ಕುಮಾರ್, ಭಾರತಿ

ಆಹಹಾ.. ಆಹ.ಹಾ.ಆಹ.ಹ..ಹಹಾ

ನಗು ನಗುತಾ ನಲಿ ನಲಿ
ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ
ಅದರಿ೦ದ ನೀ ಕಲಿ

ನಗು ನಗುತಾ ನಲಿ ನಲಿ ಏನೇ ಆಗಲಿ

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲು ರಸದೌತಣ
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ

ನಗು ನಗುತಾ ನಲಿ ನಲಿ ಏನೇ ಆಗಲಿ

ತಾಯಿ ಒಡಲಿನ ಕುಡಿಯಾಗಿ ಜೀವನ
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ

ನಗು ನಗುತಾ ನಲಿ ನಲಿ ಏನೇ ಆಗಲಿ

ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಮು೦ದೆ ಯೌವ್ವನ ಮದುವೆ ಬ೦ಧನ
ಎಲ್ಲೆಲ್ಲೂ ಹೊಸ ಜೀವನ ಅಹ ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಜೊತೆಯದು ದೊರೆತಾಗ ಮೈಮನ ಮರೆತಾಗ

ನಗು ನಗುತಾ ನಲಿ ನಲಿ ಏನೇ ಆಗಲಿ

ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಅದರೊಳು ಹೊಸದಾದ ರುಚಿ ಇದೆ ಸವಿ ನೋಡ

ನಗು ನಗುತಾ ನಲೀ ನಲೀ ಏನೇ ಆಗಲಿ

nagu naguta nali nali ene aagali
ella devana kale ende nee tiLi
adarinda nee kali......

nagu naguta nali nali ene aagali

jagavidu jaaNa cheluvina taaNa
ellellu rasadoutaNa ninagellellu rasadoutaNa
lategaLu kuNidaaga hoogaLu biridaaga................nagu naguta nali nali

taayi oDalina kuDiyaagi jeevana x2
mooDi bandu chetana taaLalendu anudina x2
avaLede anuraaga kuDiyuta beLedaaga...............nagu naguta nali nali

geLeyara joteyali kuNi kuNidu
beLeyuva sogasina kaalavidu x2
munde youvana maduve bandhana
ellellu hosa jeevana aha ellellu hosa jeevana
joteyadu doretaaga x2
maimana maretaaga............................................nagu naguta nali nali

eruperina gatiyalli jeevana x2
saagi maagi hiritana tanditayya muditana x2
adaroLu hosadaada ruchi ide savi noDa..............nagu naguta nali nali

tanu ninnadu - ibbani karagitu

ಚಿತ್ರ: ಇಬ್ಬನಿ ಕರಗಿತು (೧೯೮೩)
ಹಾಡಿದವರು: ಎಸ್. ಜಾನಕಿ.
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ರಾಜನ್ - ನಾಗೇಂದ್ರ
----------------------------------
ತನು ನಿನ್ನದು ಈ ಮನ ನಿನ್ನದು...
ತನು ನಿನ್ನದು ಈ ಮನ ನಿನ್ನದು...
ನನಗಾಗಿ ಇನ್ನೇನಿದೆ... ಏ...
ಈ ಜೀವ ಎಂದೆಂದೂ ನಿನದಾಗಿದೆ...

ತನು ನಿನ್ನದು ಈ ಮನ ನಿನ್ನದು...
ಹೃದಯವೀಣೆಯ ವೈಣಿಕ ತಾನೇ ತಂತಿಯ ಮೀಟುವುದು... ಸ್ವರಗಳ ನುಡಿಸುವುದು...
ಹೃದಯವೀಣೆಯ ವೈಣಿಕ ತಾನೇ ತಂತಿಯ ಮೀಟುವುದು... ಸ್ವರಗಳ ನುಡಿಸುವುದು...
ಬಯಸಿದ ರಾಗ..., ನುಡಿಸುವ ವೇಗ...
ಬಯಸಿದ ರಾಗ..., ನುಡಿಸುವ ವೇಗ... ನಿನ್ನಲೇ ಸೇರಿದೆ...
ನಿನಗಾಗಿ ಬಾಳೆಲ್ಲ ನಾ ಹಾಡುವೆ...

ತನು ನಿನ್ನದು ಈ ಮನ ನಿನ್ನದು...

ಒಲಿದರೂ ನೀನೆ, ಮುನಿದರೂ ನೀನೇ... ಕಾಣೆನು ಬೇರೇನೂ... ಚಿಂತೆಯೂ ಇನ್ನೇನೂ...
ಒಲಿದರೂ ನೀನೆ, ಮುನಿದರೂ ನೀನೇ... ಕಾಣೆನು ಬೇರೇನೂ... ಚಿಂತೆಯೂ ಇನ್ನೇನೂ...
ಅಮೃತವ ನೀಡು..., ವಿಷವನೇ ನೀಡು...
ಅಮೃತವ ನೀಡು..., ವಿಷವನೇ ನೀಡು... ಎನೂ ಮಾತಾಡೇನೂ....ಊ...
ನಿನ್ನಿಂದ ದೂರಾಗಿ ನಾ ಬಾಳೆನು...

ತನು ನಿನ್ನದು ಈ ಮನ ನಿನ್ನದು...

song courtesy: Vinay.  Thank u!!

tanu ninnadu ee mana ninnadu
tanu ninnadu ee mana ninnadu
nanagaagi innenide....ae....
ee jeeva endenduu ninadaagide

tanu ninnadu ee mana ninnadu
hrudaya veeNeya vaiNika taane tantiya meeTuvudu....swaragaLa nuDisuvudu   x 2
bayasida raaga nuDisuva vega
bayasida raaga nuDisuva vega ninnale seride
ninagaagi baaLella naa haaDuve

tanu ninnadu ee mana ninnadu

olidaruu neene, munidaru neene...kaaNenu berenuu....chinteyu innenuu    x 2
amruthava neeDu vishavane neeDu
amruthava neeDu vishavane neeDu enu maataaDenuuu....
ninninda dooraagi naa baaLenu

tanu ninnadu ee mana ninnadu


Wednesday, March 24, 2010

mareyada nenapanu - saahasasimha

ಚಿತ್ರ: ಸಾಹಸ ಸಿಂಹ
ಹಾಡಿರುವರು: ಎಸ್. ಪಿ. ಬಾಲಸುಬ್ರಮಣ್ಯಮ್.
ಸಾಹಿತ್ಯ: ಅರ್. ಎನ್. ಜಯಗೋಪಾಲ್

ಉಹ್... ಹು... ಹು....
ಲ..ಲ..ಲಾ...
ಲಲಲಾ... ಲಲ...

ಮರೆಯದ ನೆನಪನು ಎದೆಯಲ್ಲಿ ತಂದೆ ನೀನು...
ಮರೆಯದ ನೆನಪನು ಎದೆಯಲ್ಲಿ ತಂದೆ ನೀನು...
ನಿನಗಾಗಿ ಅರಸಿ ಬಂದೆ..ಏ...ನಿನಗಾಗಿ ಅರಸಿ ಬಂದೆ...
ನಿನೆಲ್ಲೋ ಅಲ್ಲೇ ನಾನು...

ಮರೆಯದ ನೆನಪನು ಎದೆಯಲ್ಲಿ...

ಕನಸಲ್ಲೂ ನಿನ್ನ ರೂಪ...
ಈ ಮನದಲ್ಲಿ ತರಲು ತಾಪ....ಆ...ಅ...
ಕಣ್ಣಲ್ಲಿ ಮುಚ್ಚಿ ನಿನ್ನಾ... ನಾ ಕರೆದೊಯ್ವ ಆಸೆ ಚಿನ್ನಾ...ಆ..ಅ...
ನಗುವೆಂಬ ಬಲೆಯ ಬೀಸಿ..., ನಾ ನುಡಿಯಲ್ಲಿ ಜೇನಾ ಸೂಸಿ...
ಸೆರೆಹಿಡಿದೆ ಬಿಡೆನು ನಿನ್ನಾ...ಆ..ಅ...

ಮರೆಯದ ನೆನಪನು ಎದೆಯಲ್ಲಿ...

ಮಿಂಚಂತೆ ಸುಳಿದು ನೀನು.. ಮರೆಯಾಗಿ ಹೋದರೇನು...ಊ..ಊ...
ಸುಳಿವನ್ನು ತಿಳಿಯಬಲ್ಲ... ಹೊಸ ಮೋಡಿ ಬಲ್ಲೆ ನಾನು...ಊ..ಉ..
ಬಾಳಲ್ಲಿ ಬಿಡಿಸದಂತಹಾ...ಆ..ಅ... ಎಂದೆಂದೂ ಮುರಿಯದಂತಹ...
ಬಂಧನದಿ ಹಿಡಿವೆ ನಿನ್ನಾ...ಆ..ಅ...

ಮರೆಯದ ನೆನಪನು ಎದೆಯಲ್ಲಿ...

aa moda baanalli telaaDutha - dhruva taare

ಚಿತ್ರ: ಧ್ರುವ ತಾರೆ
ಹಾಡಿರುವರು: ಡಾ ರಾಜ್ ಕುಮಾರ್, ವಾಣಿ ಜಯರಾಮ್, ಬೆಂಗಳೂರು ಲತಾ
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

ಓಹ್...ಹೋ...ಒ...ಹೋ...ಹೋ....
ಅಹ...ಹ...ಹ....ಲ..ಲ..ಲಾ.....

ಆ ಮೋಡ ಬಾನಲ್ಲಿ ತೇಲಾಡುತಾ...
ನಿನಗಾಗಿ ನಾ ಬಂದೆ ನೋಡೆನ್ನುತಾ...
ನಲ್ಲ ನಿನ್ನ ಸಂದೇಶವಾ...
ನನಗೆ ಹೇಳಿದೆ....

ಆ ಮೋಡ ಬಾನಲ್ಲಿ...

ನನ್ನ ನೋಡುವ ಚಿಂತೆ...
ನಿನ್ನ ಕಾಡಿದೆಯಂತೆ...
ನನ್ನ ಪ್ರೀತಿಗೆ ಸೋತೆ...
ಎಂದೂ ಹೇಳಿದೆಯಂತೆ...
ನೀನೇ ನನ್ನ ಪ್ರಾಣವೆಂದೂ, ನೀನು ಅಂದ ಮಾತನಿಂದು  ...
ನಲ್ಲ ಹೇಳಿದೆ....

ಆ ಮೋಡ ಬಾನಲ್ಲಿ...

ನೂರು ಜನ್ಮವೂ ಕಂಡ...
ನಮ್ಮ ಈ ಅನುಬಂಧ...
ಸ್ನೇಹ ಪ್ರೀತಿಯೂ ತಂದಾ...
ಇಂತಹ ಮಹದಾನಂದ...
ಎಂತ ಚಂದ, ಎಂತಹ ಚಂದ...
ಎಂದ ನಿನ್ನ ಮಾತಾ ಚಿನ್ನಾ... ಇಂದು ಹೇಳಿದೆ....

ಆ ಮೋಡ ಬಾನಲ್ಲಿ...

ನಿನ್ನ ಸ್ನೇಹವೇ ಚೆನ್ನ, ನಿನ್ನ ಪ್ರೇಮವೇ ಚೆನ್ನ...
ನಿನ್ನ ನೆನಪಲ್ಲಿ ಚಿನ್ನ, ನೊಂದು ಬೆಂದರೂ ಚೆನ್ನ...
ಕಲಹ ಚೆನ್ನ, ವಿರಸ ಚೆನ್ನ,
ಸನಿಹ ನನ್ನ ಎಂದೂ ನಿನ್ನಾ.... ಮಾತನ್ನು ಹೇಳಿದೆ...

ಆ ಮೋಡ ಬಾನಲ್ಲಿ...

Friday, March 19, 2010

aakashave beeLali mele - nyaayave devaru

ಚಿತ್ರ: ನ್ಯಾಯವೇ ದೇವರು
ಗಾಯಕರು: ಪಿ.ಬಿ. ಶ್ರೀನಿವಾಸ್
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ನಟರು: ಡಾ ರಾಜಕುಮಾರ್, ಬಿ ಸರೋಜಾದೇವಿ

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ
ಈ ಜೀವ ನಿನಗಾಗಿ

ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ
ನೀನಡಿಯ ಇಡುವೆಡೆಯೇ ಒಲವಿನ ಹೂಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯ ಚೆಲ್ಲು ಚೆಲುವೆ

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು

ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆರಂಗು ಆರತಿಯಾಯ್ತು
ಇನ್ನ್ನೀಗ ಎರಡೂ ಜೀವ ಬೆರೆತು ಸ್ವರ್ಗವಾಯ್ತು

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು

yaava kaviyu bareyalaara - bhaagyada lakshmi baaramma

ಚಿತ್ರ : ಭಾಗ್ಯದ ಲಕ್ಷ್ಮೀ ಬಾರಮ್ಮ
ಸಂಗೀತ : ಸಿಂಗೀತಂ ಶ್ರೀನಿವಾಸರಾವ್
ರಚನೆ : ಚಿ. ಉದಯಶಂಕರ್
ಗಾಯಕರು : ಡಾ. ರಾಜಕುಮಾರ್
ನಟರು: ಡಾ. ರಾಜಕುಮಾರ್, ಮಾಧವಿ

ಯಾವ ಕವಿಯು ಬರೆಯಲಾರ‌
ಒಲವಿನಿಂದ, ಕಣ್ಣೋಟದಿಂದ‌
ಹೃದಯದಲ್ಲಿ ನೀ ಬರೆದ‌
ಈ ಪ್ರೇಮ ಗೀತೆಯ..

ಯಾವ ಕವಿಯು ಬರೆಯಲಾರ...

ನಿನ್ನ ಕವಿತೆ ಎಂಥ ಕವಿತೆ
ರಸಿಕರಾಡೊ ನುಡಿಗಳಂತೆ
ಮಲ್ಲೆ ಹೂವು ಅರಳಿದಂತೆ
ಚಂದ್ರಕಾಂತಿ ಚೆಲ್ಲಿದಂತೆ
ಜೀವ ಜೀವ ಅರಿತು ಬೆರೆತು
ಸುಖವ ಕಾಣುವಂತೆ...

ಯಾವ ಕವಿಯು

ಪ್ರೇಮ ಸುಮವು ಅರಳುವಂತೆ
ಪ್ರಣಯ ಗಂಧ ಚೆಲ್ಲುವಂತೆ
ಕಂಗಳೆರಡು ದುಂಬಿಯಾಗಿ
ಭ್ರಮರಗೀತೆ ಹಾಡುವಂತೆ
ಜೇನಿಗಾಗಿ ತುಟಿಗಳೆರಡು
ಸನಿಹ ಸೇರುವಂತೆ ...

ಯಾವ ಕವಿಯು

aaraamaagi idde naanu - gokula

ಚಿತ್ರ : ಗೋಕುಲ

ಸಂಗೀತ: ಮನೋಮೂರ್ತಿ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಗಾಯಕರು : ಸೋನು ನಿಗಮ್, ಶ್ರೇಯಾ ಘೋಷಾಲ್
ನಟರು: ಪೂಜಾ ಗಾಂಧಿ

ಆರಾಮಾಗೆ ಇದ್ದೆ ನಾನು
ನಿನ್ನ ಕ‍ಂಡು, ಅರೆ ಏನಾಯಿತು
ಅರೆ ಏನಾಯಿತು, ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೆ, ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು...

ಆರಾಮಾಗೆ

ನೆನೆಯುತ, ಬರೆದೆ ನೆನೆಯುತ‌
ಮನ ಇನ್ನೂನು ಭಾವುಕವಾಯಿತು..
ಬಯಸುತ, ಒಲವ ಬಯಸುತ‌
ಕ್ಷಣ ಒಂದೊಂದು ರೋಚಕವಾಯಿತು..
ನಾನು ನೀನು ಕೂತುಕೊಂಡ ಜಾಗ‌
ನಮ್ಮ ಮಾತೆ .. ಆಡುತಾವೆ ಈಗ..
ಪಿಸುಮಾತಾಡುತ, ಅರೆ ಏನಾಯಿತು
ಸವಿ ಕನಸೊಂದು ಜೀವಂತವಾಯಿತು...

ಆರಾಮಾಗೆ

ಮರೆಯಿತು, ಹೆಸರೆ ಮರೆಯಿತು
ಈ ಮುದ್ದಾದ ಮೋರೆಯ ನೋಡುತ..
ಹೊರಟಿತು, ಹೃದಯ ಹೊರಟಿತು
ನೀನಿದ್ದಲ್ಲೇ ಡೇರೆಯ ಹೂಡುತ..
ಕಾಣದಂತೆ ಓಡಿಬಂದೆಯೇನು
ಕಾಡಿದಷ್ಟು ಪ್ರೀತಿ ಚೆಂದವೇನು
ಜೊತೆ ಒಡಾಡುತ, ಅರೆ ಏನಾಯಿತು
ಈ ಬಡಜೀವ ಶ್ರೀಮಂತವಾಯಿತು...

ಆರಾಮಾಗೆ

madhuvana karedare - inti ninna preetiya

ಚಿತ್ರ: ಇಂತಿ ನಿನ್ನ ಪ್ರೀತಿಯ
ಗಾಯನ: ಚಿನ್ಮಯಿ
ನಟರು: ಶ್ರೀನಗರ ಕಿಟ್ಟಿ, ಭಾವನ
ಸಾಹಿತ್ಯ: ಜಯಂತ್ ಕೈಕಿಣಿ

ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೆ ...

ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ ಮುರಿದು
ಬಾ ಬಳಿಗೆ ಎಂದಿದೇ
ಶರಣಾಗು ಆದರೆ
ಸೆರೆ ಆಗು ಆದರೆ

ಮಧುವನ ...

ಕಂಗಳಲಿ  ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ.......
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೆ

ಮಧುವನ ...

ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ.....
ಎದುರಿದ್ದು ಕರೆಯುವೆ ಏಕೆ
ಜೊತೆಯಿದ್ದು ಮರೆಯುವೆ ಏಕೆ
ನಿನ್ನೊಲವು ನಿಜವೆ ಆದರೆ.....

ninna kaNgaLa bisiya hanigaLu - baDavara bandhu

ಸಾಹಿತ್ಯ: ಚಿ.ಉದಯಶಂಕರ್

ಸಂಗೀತ: ಎಮ್.ರಂಗರಾವ್
ಗಾಯನ: ಡಾ.ರಾಜ್ ಕುಮಾರ್
ನಟರು: ಡಾ. ರಾಜಕುಮಾರ್

ನಿನ್ನ ಕಂಗಳ ಬಿಸಿಯ ಹನಿಗಳು
ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ
ನೂರು ನೆನಪು ಮೂಡಿವೆ....ನಿನ್ನ ಕಂಗಳ..

ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ
ಬಿಸುಲು ಮಳೆಗೆ ನರಳದಂತೆ ನಿನ್ನ ನೆರಳಲಿ ಸಲಹಿದೆ
ಆ ಪ್ರೀತಿಯ ಮನ ಮರೆವುದೆ....ನಿನ್ನ ಕಂಗಳ....

ಬಳ್ಳಿಯಂತೆ ಹಬ್ಬಿ ನಿನ್ನಾ ಆಸರೆಯಲಿ ಬೆಳೆದೆನು
ಆ.....ಆ.....ಆ....ಆ....
ನನ್ನ ತಾಯಿಯ ಪಾದದಾಣೆ ಬೇರೆ ಏನನೂ ಅರಿಯೆನು
ನೀನೆ ನನ್ನ ದೇವನು....ನಿನ್ನ ಕಂಗಳ...

ನೀನು ನಕ್ಕರೆ ನಾನು ನಗುವೇ ಅತ್ತರೇ ನಾ ಅಳುವೆನು
ನಿನ್ನ ಉಸಿರಲಿ ಉಸಿರು ಬೆರೆತಿರೆ ನಿನ್ನಲೊಂದಾಗಿರುವೆನು
ನಾ ನಿನ್ನ ಕಾಣದೇ ಬದುಕೆನು....ನಿನ್ನ ಕಂಗಳ....

chaamunDi taayi aaNe - aaptarakshaka

ಚಿತ್ರ: ಆಪ್ತರಕ್ಷಕ
ಗಾಯನ: ಎಸ್ ಪಿ ಬಿ
ನಟರು: ಸಾಹಸ ಸಿಂಹ ವಿಷ್ಣು ವರ್ಧನ್, ಲಕ್ಷ್ಮಿ ಗೋಪಾಲಸ್ವಾಮಿ 
ಸಾಹಿತ್ಯ - ಕವಿರಾಜ್
ಸಂಗೀತ - ಗುರುಕಿರಣ್

ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ
ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ
ಪ್ರೀತ್ಸೋದು ಎಂದೂ ನಿಮ್ಮನ್ನೇ

ಯಾರನ್ನೂ ನೋಯಿಸಬೇಡ , ಮೋಸವಾ ಮಾಡಲೇಬೇಡ
ನಿನ್ನಾಗ ಕಾಯುತ್ತಾನೆ ತಾನೇ ಭಗವಂತ
ಬಿಟ್ಟರೆ ನಿನ್ನ ಸ್ವಾರ್ಥ , ಎಲ್ಲರೂ ನಿಂಗೆ ಸ್ವಂತ
ಒಂದಾಗಿ ಬಾಳು ಎಂದೂ ಹಂಚಿ ತಿನ್ನುತಾ
ಉಪ್ಪನ್ನು ತಿಂದ ಮೇಲೆ ನೀರನ್ನ ಕುಡಿಲೇಬೇಕು
ತಪ್ಪನ್ನ ಮಾಡೋರೆಲ್ಲಾ ದಂಡಾನಾ ತೆರಲೇಬೇಕು

ಭೂಮಿಯೇ ಒಂದು ಊರು , ಎಲ್ಲಕೂ ಬಾನೇ ಸೂರು
ನಡುವಲ್ಲಿ ಬಾಳೋ ಮಂದಿ , ಎಲ್ಲಾ ನಮ್ಮೋರು
ಎತ್ತರಾ ಎಷ್ಟೇ ಏರು , ಮಣ್ಣಲ್ಲಿ ಇರಲಿ ಬೇರು
ನೋಡದೆ ಅವರು ಇವರು , ವಿನಯವ ನೀ ತೋರು
ಈ ಬಾಳು ಬೇವು ಬೆಲ್ಲಾ , ಎಲ್ಲಾನೂ ನೀ ಸವಿಬೇಕು
ಅಂದಂತೆ ಆಗೋದಿಲ್ಲಾ ಬಂದಂತೇ ನೀನಿರಬೇಕು

yaava shilpi kanda kanaso - januma janumada anubandha

ಚಿತ್ರಃ ಜನ್ಮ ಜನ್ಮದ ಅನುಬಂಧ..(೧೯೮೦)
ಸಾಹಿತ್ಯಃ ಚಿ॥ ಉದಯಶಂಕರ್
ಹಾಡಿರುವರುಃ ಎಸ್.ಪಿ.ಬಾಲಸುಬ್ರಮಣ್ಯಮ್, ಎಸ್.ಜಾನಕಿ

ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸು ನೀನು...
ಯಾವ ಕವಿಯ ಪ್ರೇಮಗೀತೆ ನೀನು...
ಇಂಥ ಅಂದವನ್ನು.., (ಹೇ..ಎ..ಎ..) ಎಂದು ಕಾಣೆ ನಾನು...
ಇಂಥ ಅಂದವನ್ನು.., (ಹೇ..ಎ..ಎ..) ಎಂದು ಕಾಣೆ ನಾನು...
ಇನ್ನು ಎಂದು ಬಿಡೆನು ನಿನ್ನನೂ... ಊ..... ॥ಪಾಬಪ್ ಪಬಬಬಾ..ಯಾವ ಶಿಲ್ಪಿ ಕಂಡ ಕನಸು ನೀನು...॥

ನನಗಾಗಿ ಬಂತು ತಾವರೆ.., ಹೆಣ್ಣಾಗಿ.. (ಅರೆ..ರೆ..ರೆ)
ಸೊಗಸಾದ ಜೋಡಿ ನೈದಿಲೆ.., ಕಣ್ಣಾಗಿ..(ಅರೆ..ರೆ..ರೆ)
ನಡೆಯೂ ಸೊಗಸು..., ನುಡಿಯೂ ಸೊಗಸು...
ಬಯಕೆ ತುಂಬಿದೆ, ಮನವಾ ಸೇರಿದೆ...
ನಿನ್ನ ಮಾತು ಕೇಳಿ ಸೋತೆ...ಪಾಬಪ್ ಪಬಬಬಾ..ಆ...ಆ....

ಪಾಬಪ್ ಪಬಬಬಾ..ಆ...
ನೂರು ಜನ್ಮ ಬಂದರೇನು ನನಗೆ...
ನೀನೇ ನನ್ನ ಬಾಳ ಗೆಳೆಯ ಕೊನೆಗೆ...
ನನ್ನ ಜೀವ ನೀನು.., (ಹೇ..ಎ..ಎ..) ನಿನ್ನ ಪ್ರಾಣ ನಾನು...
ದೇವರಾಣೆ ನಂಬು ನನ್ನನೂ...ಊ.....

ಆ...ಆ...ನಿನ್ನಂದ ನಲ್ಲ ಹುಣ್ಣಿಮೆ ಶಶಿಯಂತೆ...(ಅರೆ..ರೆ..ರೆ)
ನೀನಾಡೋ ಮಾತು ಜೇನಿನ ಸವಿಯಂತೆ... (ಅರೆ..ರೆ..ರೆ)
ಒಲವಾ ಸುರಿವಾ ನಿನ್ನಾ ನುಡಿಗೆ...
ಕರಗಿ ಹೋದೆನು.., ಒಲಿದು ಬಂದೆನು...
ಸಾಕು ಇನ್ನು ನನಗೆ ನಲ್ಲೆ.... ಪಾಬಪ್ ಪಬಬಬಾ.. ಆ... ॥ಪಾಬಪ್ ಪಬಬಬಾ..ಯಾವ ಶಿಲ್ಪಿ ಕಂಡ ಕನಸು ನೀನು...॥

Monday, March 15, 2010

premavide manade - antha

ಚಿತ್ರ: ಅಂತ (೧೯೮೧)
ಹಾಡು: ಪ್ರೇಮವಿದೆ ಮನದೆ ...
ಸಂಗೀತ: ಜಿ.ಕೆ.ವೆಂಕಟೇಶ್
ಸಾಹಿತ್ಯ: ಗೀತಪ್ರಿಯ
ಹಾಡಿದವರು: ಎಸ್.ಜಾನಕಿ

ಪ್ರೇಮವಿದೆ ಮನದೆ ನಗುತ ನಲಿವ ಹೂವಾಗಿ
ಬಂದೆ ಇಲ್ಲಿಗೆ..ನಾ ಸಂಜೆ ಮಲ್ಲಿಗೆ..ನಾ ಸಂಜೆ ಮಲ್ಲಿಗೆ... || ಪ್ರೇಮವಿದೆ ಮನದೆ...||

ಕಣ್ಣಲ್ಲಿ ನಿನ್ನ..ನಾ ಕಂಡೆ ನನ್ನ...
ಕಣ್ಣಲ್ಲಿ ನಿನ್ನ..ನಾ ಕಂಡೆ ನನ್ನ...
ದಿನದಿನವ..ಎಣಿಸಿ.. ಮನದಿ ಗುಣಿಸಿ.. ಬಿಡುವ ಬಯಸಿ...
ಸೋಲು ಈ ದಿನ.. ಗೆಲುವು ಈ ದಿನ... ಎಂಥ ಬಂಧನ... || ಪ್ರೇಮವಿದೆ ಮನದೆ...||

ಹೊಂಗನಸ ಕಂಡೆ... ನನಗಾಗಿ ನೀನು..
ಹೊಂಗನಸ ಕಂಡೆ... ನನಗಾಗಿ ನೀನು..
ಬಗೆಬಗೆಯ ಆಸೆ.. ಮನದೆ ಇರಿಸಿ.. ನೆನಪ ಉಳಿಸಿ..
ದೂರ ಸಾಗದೆ... ದಾಹ ತೀರದೆ.. ತೀರ ಸೇರುವೆ.. || ಪ್ರೇಮವಿದೆ ಮನದೆ...||

Thursday, March 11, 2010

sukhada swapna gaana - mareyada haaDu

ಚಿತ್ರ: ಮರೆಯದ ಹಾಡು
ಗಾಯನ: ಎಸ್ ಜಾನಕಿ

ಸುಖದ ಸ್ವಪ್ನ ಗಾನ, ಎದೆಯ ಆಸೆ ತಾನ
ಒಲವ ಭಾವ ವೀಣಾ.....
ನೀ ಮಿಡಿಯೆ ನಾ ನುಡಿಯೇ ಅದುವೇ ಜೀವನ, ಅದುವೇ ಜೀವನ

ಸ್ವರವೇಳು ಕಲೆತ ರಾಗ, ಸಂಪೂರ್ಣ ಜೀವ ರಾಗ 
ಉಸಿರೆರೆಡು ಬೆರೆತ ವೇಗ, ಅನುರಾಗ ಭಾವಯೋಗ
ಜನುಮ ಜನುಮದ ಬಂಧ, ಅನುಬಂಧ ನಮ್ಮದು
ತಪಸಿನ ಫಲವಿದು, ದೈವದ ವರವಿದು.....
ಓ......ಆ....

ಸವಿ ಮುರಳಿ ಕರೆದ ವೇಳೆ, ಆ ರಾಧೆ ಓಡಿದಂತೆ
ಮಾಧವನ ನೆನಪಿನಲ್ಲಿ, ಆ ಮೀರಾ ಹಾಡಿದಂತೆ
ನಿನ್ನೊಲವಿನಲ್ಲಿ ಮಿಂದು, ನಾನಿಂದು ಹಾಡುವೆ
ನನ್ನನೆ ಮರೆಯುವೆ, ನಿನ್ನಲೆ ಬೆರೆಯುವೆ
ಆ .....

ಶ್ರುತಿ ಲಯದ ಮಿಲನದಲ್ಲಿ, ದೈವೀಕನಾದ ಲೀಲೆ
ಸತಿಪತಿಯ ಒಲವಿನಲ್ಲಿ, ಸಂಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೆ, ಹೂಮಾಲೆ
ಬಾಡದ ಹೂವಿದು, ಮುಗಿಯದ ಹಾಡಿದು......
ಆ......

ide raagadalli ide taaLadalli - shraavaNa bantu

ಚಿತ್ರ: ಶ್ರಾವಣ ಬಂತು
ಗಾಯನ: ರಾಜ್ ಕುಮಾರ್, ವಾಣಿ ಜಯರಾಂ
ನಟರು: ರಾಜ್ ಕುಮಾರ್, ಊರ್ವಶಿ, ಶ್ರೀನಾಥ್

ಆ...ದಪದಮ
ಆ....ರಿಸರಿದ
ಆ....ಮನಿಸದ ಮಪದ ಮಪಮರಿ

ಇದೆ ರಾಗದಲ್ಲಿ ಇದೆ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ

ಆ  ಯಮುನೆಯಲ್ಲಿ ಅಲೆಅಲೆಯು ಹೊಮ್ಮಿ
ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಆ  ಇರುಳಿನಲಿ ಆ ನೀರಹನಿ ಕಾಲ್ಗೆಜ್ಜೆ ದನಿ ಮಾಡಿರಲು
ಬೆರಗಾದ ಚಂದ್ರನು ಮೈಮರೆತ ಶ್ಯಾಮ

ಪ....ದಪದಮ ಮರಿಪಮಪದ ಸದರಿಸ
ಆ...ಪಮರಿಸಗರಿಸ ದದಪಮ ಪಸದ
ಪಮರಿಸದ ಸಸದಪಮ ಪಡಸ
ಸ, ರಿಮಪದಮಪದ x3

ಮಧುಮಾಸವೆಂದು ಮಾಮರವು ತೂಗಿ
ಕೊಳಲಂತೆ ಆಗ ಕೋಗಿಲೆಯು ಕೂಗಿ
ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ
ಕಾಲ ಮರೆತು ಹೋದವು ಭುವಿಗೆ ಜಾರಿ ಬಂದವು 

ಇದೆ ರಾಗದಲ್ಲಿ ಇದೆ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ

taayi taayi - hoovu haNNu

Film: Huvu Hannu / Vamshi
Singer: Dr. Rajkumar
Lyrics: Hamsalekha


ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ, ಹೆರುವಳು ತಾಯಿ ನೋವ
ತ್ಯಾಗಮಯಿ ಈ ತಾಯಿ ।।ತಾಯಿ।।

ಕರುಳ ಕುಡಿಯ ಸುಖ ಕೋರಿ ಗೂಡಿನಿಂದ ಹೊರ ಹಾರಿ
ಅಲೆವಳು ದಣಿವಳು ಅನುಕ್ಷಣಾ ಮಿಡಿವಳು
ಕಾಲಕೂಟವನ್ನು ಸಹಿಸಿ ಕಾಮಕೂಟವನ್ನು ಕ್ಷಮಿಸಿ
ಜಗವನೆ ಮಗುವಿನ ತೆರದಲಿ ತಿಳಿವಳು
ಅಳುವಳು ಅಬಲೆಯು ಎಂದೂ ದುಡಿವಳು
ಮಗುವಿಗೆ ಎಂದೂ ಪ್ರೇಮಮಯಿ ಈ ತಾಯಿ ।।ತಾಯಿ।।

ಗರ್ಭವೇ ತಾಯಿಯ ಸ್ವರ್ಗ ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ ವಹಿಸಿದಾ ತಾಯಿಗೆ ಬ್ರಹ್ಮ
ತೊರೆವಳು ಸುಖ ಸಹವಾಸ ಇರುವಳು ದಿನ ಉಪವಾಸ
ವೇದಮಯಿ ಈ ತಾಯಿ ।।ತಾಯಿ।।

NB: Thanks vinay for posting this lovely song :-)