Friday, November 13, 2009

raaga anuraaga - sanaadi appanna

ಚಿತ್ರ: ಸನಾದಿ ಅಪ್ಪಣ್ಣ
ಹಾಡಿದವರು: ರಾಜಕುಮಾರ್, ಎಸ್ ಜಾನಕಿ
ನಟರು: ರಾಜಕುಮಾರ್, ಜಯಪ್ರದ

ರಾಗ ಅನುರಾಗ ಶುಭಯೋಗ ಸೇರಿದೆ  
ತಂದ ಅನುಬಂಧ ಆನಂದ ತಂದಿದೆ....ರಾಗ.....

ರಾಗ ತಾಳ ಮಿಲನ ಸಂಗೀತವಾಗಿದೆ
ನಾದ ಲಾಸ್ಯ ಮಿಲನ ಹೊಸ ಭಾವ ಮೂಡಿದೆ
ಹೊಸ ಗೀತೆ ಹಾಡಿದೆ
ಹೂವು ಗಂಧದಂತೆ ನಮ್ಮ ಜೀವ ಜೀವ ಸೇರಿ
ಉಯ್ಯಾಲೆಯಾಡಿದೆ

ಹೃದಯ ವೀಣೆ ಮೀಟಿ ಹೊಸ ತಾನ ನುಡಿಸಿದೆ
ಗಾನ ಗಂಗೆಯಲ್ಲಿ ತೇಲಾಡಿದಂತಿದೆ
ಸುರಲೋಕ ಕಂಡಿದೆ
ಗಂಗ ಶಿವನ ವರಿಸಿ ಶಿಲವೇರಿದಂತೆ
ನನ್ನ ಬಾಳಿಂದು ಆಗಿದೆ  

ಬಾಳನದಿಯು ಇಂದು ಹೊಸ ಹಾದಿ ಹಿಡಿದಿದೆ
ಪ್ರಣಯವೆಂಬ ವನವ ಹಾಯಾಗಿ ಬಳಸಿದೆ
ಆ....ಪ್ರಣಯವೆಂಬ ವನವ ಹಾಯಾಗಿ ಬಳಸಿದೆ  
ಉಲ್ಲಾಸ ತಂದಿದೆ
ಹರುಷವೆಂಬ ಕಡಲ ಅಲೆಅಲೆಯು ತೇಲಿ ಬಂದು
ಈ ನದಿಯ ಸೇರಿದೆ  

ರಾಗ.....

No comments: