Thursday, October 29, 2009

madhumaasa - sangama (one of my favourites)

ಚಿತ್ರ: ಸಂಗಮ
ಹಾಡಿದವರು: ಕಾರ್ತಿಕ್
ನಟರು: ಗಣೇಶ್, ವೇದಿಕಾ

ಹೇ ...ಮಧುಮಾಸ ಅವಳಿಗೆ ಖಾಸಾ
ಮಳೆಬಿಲ್ಲೆ ಅವಳ ನಿವಾಸ
ಇರಬೇಕು ಅಂತ ವಿಳಾಸ ನನ್ನ ಹುಡುಗೀಗೆ
ಹೋ..ಅವಳೆದುರು ಸೂರ್ಯನೇ ಮೋಸ
ಅವಳಿರಲು ಅಂತ ಉಲ್ಲಾಸ
ಆ ಚಂದಕೆ ಚಂದಿರ ದಾಸ ನನ್ನ ಹುಡುಗೀಗೆ

ನಕ್ಕರೆ ನೂರಾರು ತಾರೆ ಮಿಂಚಬೇಕು
ಅತ್ತರೆ ಕಣ್ಣಿಂದ ಮುತ್ತು ಸುರಿಯಬೇಕು
ಅವಳನ್ನೇ ನೋಡುತ್ತಾ ಭೂಮಿಯೇ ನಿಲಬೇಕು
ಅವಳಂದ್ರೆ.....
ಅವಳಂದ್ರೆ  ಬೆಳದಿಂಗಳ ಹುಣ್ಣಿಮೆ ಬಾಲೆ
ಅವಳ್ ಬಂದ್ರೆ ಸುರಿಬೇಕು ಹೂಮಳೆ ಅಲ್ಲೇ

ಎ....ಹೂವೆಲ್ಲ ಅವಳ ನೋಡಲು
ಹಾಗೆಯೇ ಅವಳ್ ಹಿಂದೆ ಹಿಂದೆ ಬರುತಿರಬೇಕು
ತೆಳ್ಳನೆ ಬಳುಕೋ ಮೈಯಲಿ
ಕೋಮಲ ಮಿಂಚೊಂದು ಮನೆಯ ಮಾಡಿರಬೇಕು
ಪಟ ಪಟ ಪಟ ಮಾತಿನ ಮಲ್ಲಿ
ಚಿಟ ಪಟ ಚಿಟ ಮಳೆಹನಿ ಚೆಲ್ಲಿ
ಮಟ ಮಟ ಮಟ ಬಿರುಬಿಸಿಲಲ್ಲಿ
ಮನಸು ತಣಿಸಿ ಬಿಡಬೇಕು
ಗಿಲಿ ಗಿಲಿ ಗಿಲಿ ಜಾದೂ ಆಕೆ 
ಬಿಳಿ ಬಿಳಿ ಬಿಳಿ ಬೆಳ್ಳಿ ಝುಮ್ಕೆ
ಜಿಗಿ ಜಿಗಿ ಜಿಗಿ ಜಿಗಿಯೋ ಜಿಂಕೆ
ಅವಳೆ ಅವಳೆ ಅವಳೆ ನನ್ನಾಕೆ 
ಅವಳಂದ್ರೆ ಬೆಳದಿಂಗಳ..................

ಹೊಯ್ ತಾಕಲು ಅವಳ ಕೈಗಳು
ಆಸೆಲೆ ತುಸು ಜೀವ ಬಂದು ಕಂಪಿಸಬೇಕು
ಸುಮ್ಮನೆ ಅವಳ ಸೋಕಲು
ಗಾಳಿಯು ಅವಳತ್ತ ಇತ್ತ ಸುತ್ತಿರಬೇಕು
ತರ ತರ ತರ ತರಲೆಯು ಬೇಕು
ಅರೆಘಳಿಗೆಯೇ ಮುನಿಸಿರಬೇಕು
ಮರುಘಳಿಗೆಯೇ ನಗುತಿರಬೇಕು
ಅಂತ ಹುಡುಗಿ ಸಿಗಬೇಕು
ಹದಿ ಹದಿ ಹದಿ ಹರೆಯದ ಬೆಣ್ಣೆ
ಪಳ ಪಳ ಪಳ ಹೊಳೆಯೋ ಕಣ್ಣೆ
ಮಿರ ಮಿರ ಮಿರ ಮಿನುಗೋ ಕೆನ್ನೆ
ಇರುವ ಚೆಲುವೆ ನನಗೆ ಸಿಗಬೇಕು
ಅವಳಂದ್ರೆ ಬೆಳದಿಂಗಳ............. 

3 comments:

Anoop Kumar said...

Hi,
Second stanza second line it should be ಆ ಶಿಲೆ ತುಸು ಜೀವ ಬಂದು ಕಂಪಿಸ ಬೇಕು

Anonymous said...

Hi,
The second line of second stanza should be
ಆ ಶಿಲೆ ತುಸು ಜೀವ ಬಂದು ಕಂಪಿಸ ಬೇಕು

Unknown said...

Thank You "Queen Bee" !!!