Friday, October 9, 2009

naavaaDuva nuDiye kannaDa nuDi.....

ಚಿತ್ರ: ಗಂಧದ ಗುಡಿ
ಹಾಡಿದವರು: ಪಿ ಬಿ ಶ್ರೀನಿವಾಸ್
ನಟರು: ರಾಜ್ ಕುಮಾರ್, ವಿಷ್ಣು ವರ್ಧನ್, ಕಲ್ಪನಾ

ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೇ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ

ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೇ ಗಂಧದ ಗುಡಿ ಅಂದದ ಗುಡಿ ಗಂಧದ ಗುಡಿ ಚಂದದ ಗುಡಿ ಶ್ರೀಗಂಧದ ಗುಡಿ...ಅಹಹ ಅಹಹ ಅಹಹ.....

ಹಸಿರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ
ಚೆಲುವಿನ ಬಲೆಯ ಬೀಸಿದಳೋ ಈ ಗಂಧದ ಗುಡಿಯಲಿ ನೆಲೆಸಿಹಳೋ
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ....ಅಹಹಹ ಓ.....

ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳು
ಮುಗಿಲನು ಚುಂಬಿಸೋ ಆಸೆಯಲಿ ತೂಗಾಡುತ ನಿಂತ ಮರಗಳಲಿ
ಹಾಡುತಿರೆ ಬಾನಾಡಿಗಳು ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ.....ಅಹಹಹ ಓ..... 

1 comment:

ಡಾ. ಎಂ ಜೆ ಸುಬ್ರಮಣ್ಯಂ said...

one the most melodious and beautiful haunting song which glorifies the Karnataka State's resources. The lyrics demonstrate the excellent imagination of the poet about the richness of a forest. One can hear many times without getting bored, especially before going to be in the night. P B Srinivas has rendered the song in an exceptionally melodious and in a beautiful way.
M J SUBRAMANYAM, VIDYARANYA PURA, BANGALORE 560 097