Saturday, October 10, 2009

nadheem dheentana - gaaLipata

ಚಿತ್ರ: ಗಾಳಿಪಟ
ಹಾಡಿದವರು: ಚಿತ್ರ ಕೆ ಎಸ್
ನಟರು: ಗಣೇಶ, ಡೈಸಿ ಮತ್ತು ಇತರರು

ನಧೀಂ ಧೀಂತನ ನಧೀಂ ಧೀಂತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ಮೊದಲ ಹೆಜ್ಜೆಗೆ ಏನೋ ಕಂಪನ ಏನೀ ರೋಮಾಂಚನ
ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದಂಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ 
ಈ ಕಣ್ಣಿನ ಕವನ ಓದೋ ಓ ಹುಡುಗ......

ಪ್ರೇಮದ ಸರಿಗಮ ಸ್ವರ ತಾಳದ ಕೊಳದಲ್ಲಿ
ಹಾಡುತ ತೇಲಾಡುತ ಜ್ವರವೇರಿಸೋ ಮಳೆಯಲ್ಲಿ
ಒಂದೂರಲ್ಲಿ ರಾಜ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ
ದುಂಡು ಮುಖದ ರಾಜಕುಮಾರ ಕೋಟೆ ದಾಟಿ ಬಂದ ಕಥೆಗೆ
ನಾಯಕ ನೀನೆ......ಆ ಚಂದಾಮಾಮ ಕಥೆಗೆ ನಾಯಕಿ ನಾ......

ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು
ಸೋಲುವೆ ಪ್ರತಿ ಕ್ಷಣ ನನ್ನ ಮನದಲೆ ನಾನು
ನಿದ್ದೆ ಬರದ ಕಣ್ಣ ಮೇಲೆ ಕೈಯ ಮುಗಿವೆ ಚುಂಬಿಸು ಒಮ್ಮೆ
ನಾನು ನಾಚಿ ನಡುಗೋ ವೇಳೆ ಮಲ್ಲೆ ಹೂವ ಮುಡಿಸೋ ಒಮ್ಮೆ
ನಾನು ಭೂಮಿ....ಆವರಿಸು ಸುರಿವ ಮಳೆಯಂತೆ ನನ್ನ.....

1 comment:

Unknown said...

ನಮಸ್ಕಾರ,
ಮುತ್ತಿನಂತಹ ನಿಮ್ಮ ಕನ್ನಡ ನುಡಿಗಳಿಗೆ ನನ್ನ ನಮನ.

ಕನ್ನಡ ಲಿಪಿಯಲ್ಲಿ ಈ ಹಾಡು ಇದ್ರೆ ಹಚ್ಚಿಯಲ್ಲ. .

ಮನಸ್ಸೇ ಓ ಮನಸ್ಸೇ
"ಚಂದ್ರ ಮುಖಿ ಪ್ರಾಣ ಸಖಿ ಸಿನಿಮಾದ್ದು".
subbu-7899746623