Thursday, October 22, 2009

aakaasha neene - ambaari

ಚಿತ್ರ: ಅಂಬಾರಿ
ಹಾಡಿದವರು: ಸೋನು ನಿಗಮ್
ನಟರು: ಯೋಗೀಶ್

ಆಕಾಶ ನೀನೆ ನೀಡೊಂದು ಗೂಡು ಬಂತೀಗ ಪ್ರೀತಿ ಹಾರಿ
ತಂಗಾಳಿ ನೀನೆ ನೀಡೊಂದು ಹಾಡು ಕಂಡಿತು ಕಾಲು ದಾರಿ
ಒಂದಾದ ಜೀವ ಹೂವಾಗುವಂತೆ ಎಂದು ಕಾಪಾಡಲಿ
ಪ್ರೀತಿಯ ಅಂಬಾರಿ

ಕಣ್ಣಿನಲ್ಲಿ ಕಣ್ಣಿರೆ ಲೋಕವೆಲ್ಲಾ ಹೂ ಹಂದರ
ಭಾವವೊಂದೇ ಆಗಿರೆ ಬೇಕೇ ಬೇರೆ ಭಾಷಾಂತರ
ಎದೆಯಿಂದ ಹೊರ ಹೋಗೋ ಉಸಿರೆಲ್ಲ ಕನಸಾಗಲಿ
ಈ ಪ್ರೀತಿ ಜೊತೆಯಲ್ಲಿ ಒಂದೊಂದು ನನಸಾಗಲಿ
ಕೊನೆಯಿಲ್ಲದ ಕುಶಲೋಪರಿ ಪ್ರೀತಿಯ ಅಂಬಾರಿ 

ಕಾಣದಂತ ಹೊಸ್ತಿಲು ದೂರದಿಂದ ಬಾ ಎಂದಿದೆ
ಪೆದ್ದು ಮುದ್ದು ಜೋಡಿಗೆ ಸಿಕ್ಕ ಪ್ರೀತಿ ಸೊಗಸಾಗಿದೆ
ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನ
ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನ
ಮುಂದರಿಯುವ ಕಾದಂಬರಿ ಪ್ರೀತಿಯ ಅಂಬಾರಿ

4 comments:

subbhu said...

I need english lyrics for hey paro kannada songs please

Anonymous said...

I need English script lyrics of Aakasha neene song from Ambari movie. Kindly post it as early as!

jayashree shreedhara said...

good work anu thank you go on doing

jayashree shreedhara said...

good work anu thank you keep doing