ಚಿತ್ರ: ರಣಧೀರ
ಹಾಡಿದವರು: ಎಸ್ ಪಿ ಬಾಲು, ಎಸ್ ಜಾನಕಿ
ನಟರು: ರವಿಚಂದ್ರನ್, ಖುಶ್ಬೂ
ಸ ರಿ ಗ ಮ ಪ....
ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ
ಓ ಹೂವಂತೆ ಪ್ರೀತಿ ಹೂವಂತೆ
ನೋಡಲೇನು ಇದು ಹೂವು ಬಿರಿದರೆ ಕೊಲುವ ಹಾವು
ಇತಿಹಾಸ ಇದರ ಹವ್ಯಾಸ
ಅಗ್ನಿಯೊಡನೆ ಸಹವಾಸ ಸಾವಿನ ಜೊತೆಗೆ ಸರಸ
ನಲಿದು ನಲಿಸುತ್ತಾ ತಂಪನೆರೆಯುತ್ತ
ಜಗವ ಕಾಯುತ್ತಲಿದೆ ಪ್ರೀತಿ
ಸುತ್ತಿ ನಮ ಸುತ್ತ ಎಲ್ಲ ಕುಣಿಸುತ್ತಾ
ತಾನು ನೋಡುತ್ತಲಿದೆ ಪ್ರೀತಿ
ಎಲ್ಲ ಅದರ ಕೈಲಿ ನಾವೆಲ್ಲಾ ನೆಪವು ಇಲ್ಲಿ
ನ್ಯಾಯ ಕೇಳುವ ಹೇಳಿ ನಡೆಸುವ ಶಕ್ತಿಯೊಂದೇ ಪ್ರೀತಿ
ಬಾ ಎಂದರೆ ಬಂದಿಳಿ ಯುವಪ್ರೀತಿ
ಆ ಜೀವಿಯ ದಿಗ್ವಿಜಯದ ರೀತಿ
ಹೇ....ಯೌವನವೇ ನೀನು ಭೀಕರವೇ
ನೀನು ಇರುವ ದೆಸೆ ಇಂದ ಈ ಘೋರ ನೋಡು ಕಣ್ಣಿಂದ
ಹೇ....ಜೀವನವೇ ನಿನಗೆ ಸಮ್ಮತವೇ
ಬಯಸಿದ ಸ್ವರ್ಗ ಎಲ್ಲಿ ನೀ ನಡೆಸಿದೆ ನರಕದಲ್ಲಿ
ಕಾಮ ಕ್ರೋಧ ಮದ ಲೋಬ ಮೋಹ ಮಾತ್ಸರ್ಯ ತುಂಬಿರುವ ಜಗದಲ್ಲಿ
ಜೀವ ಕಾರಣದ ಬಾಳ ತೋರಣದ ಪ್ರೀತಿಗೇನು ಬೆಲೆ ಸಿಗದಿಲ್ಲಿ
ಕರುಣೆಯಿರದ ವಿಧಿಯೇ ನಿನ್ನ ನೀತಿ ಎಲ್ಲಿ ಸರಿಯೇ
ಹಣೆಯ ಬರಹವಿದು ನಿಜವೇ ಇರಬಹುದು ಸಾವೇ ನಿನ್ನ ಗುರಿಯೇ.....
ಬಾ ಬಾರೋ ಬಾರೋ ರಣಧೀರ.....
1 comment:
ನಮಸ್ಕಾರ,
ಮುತ್ತಿನಂತಹ ನಿಮ್ಮ ಕನ್ನಡ ನುಡಿಗಳಿಗೆ ನನ್ನ ನಮನ.
ಕನ್ನಡ ಲಿಪಿಯಲ್ಲಿ ಈ ಹಾಡು ಇದ್ರೆ ಹಚ್ಚಿಯಲ್ಲ. .
ಮನಸ್ಸೇ ಓ ಮನಸ್ಸೇ
"ಚಂದ್ರ ಮುಖಿ ಪ್ರಾಣ ಸಖಿ ಸಿನಿಮಾದ್ದು".
subbu-7899746623
Post a Comment