ರಚನೆ: ಕನಕ ದಾಸರು
ಗಾಯನ: ರಾಜ್ ಕುಮಾರ್
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ
ಬಿಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು ಕೂಲಿಗಳ ಮಾಡುವುದು ಹೊಟ್ಟೆಗಾಗಿ
ನಾಲ್ಕು ವೇದ ಪುರಾಣ ಪಂಚಾಗ ಹೇಳಿಕೊಂಡು ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ....
ಬಡಿದು ಬಡಿದು ಕಬ್ಬಿಣವ ಕಾಸಿ ತೂಪಾಕಿ ಮಾಡಿ ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ
ಚಂಡ ಭಂಡರೆಲ್ಲ ಮುಂದೆ ಕತ್ತಿ ಹರಿಗೆಯ ಪಿಡಿದು ಖಂಡ ತುಂಡ ಮಾಡುವುದು ಹೊಟ್ಟೆಗಾಗಿ
ದೊಡ್ಡ ದೊಡ್ಡ ಕುದುರೆ ಏರಿ ನೆಜೆ ಹೊತ್ತು ರಾಹುತನಾಗಿ ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ
ಕುಂಟೆ ಪೂರಿಗೆಯಿಂದ ಹೆಣತೆ ಮಣ್ಣ ಹದ ಮಾಡಿ ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ
ಕೆಟ್ಟತನದಿಂದ ಕಳ್ಳತನವನ್ನೇ ಮಾಡಿ ಕಟ್ಟಿ ಹೊಡಿಸಿಕೊಳ್ಳುವುದು ಹೊಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮುಂಡ ಬೈರಾಗಿ ನಾನಾ ವೇಷ ಬೊಂಬುವುದು ಹೊಟ್ಟೆಗಾಗಿ
ಉನ್ನತ ಕಾಗಿನೆಲೆ ಆದಿಕೇಶವನ ಅನುದಿನ ನೆನೆವುದು ಭಕ್ತಿಗಾಗಿ ಪರ ಮುಕ್ತಿಗಾಗಿ....
ನಾವೆಲ್ಲಾರು ಮಾಡುವುದು
3 comments:
Thanks for the lyrics.
Good work.
Good one thanks.
ನಮಸ್ಕಾರ,
ಮುತ್ತಿನಂತಹ ನಿಮ್ಮ ಕನ್ನಡ ನುಡಿಗಳಿಗೆ ನನ್ನ ನಮನ.
ಕನ್ನಡ ಲಿಪಿಯಲ್ಲಿ ಈ ಹಾಡು ಇದ್ರೆ ಹಚ್ಚಿಯಲ್ಲ. .
ಮನಸ್ಸೇ ಓ ಮನಸ್ಸೇ
"ಚಂದ್ರ ಮುಖಿ ಪ್ರಾಣ ಸಖಿ ಸಿನಿಮಾದ್ದು".
subbu-7899746623
Post a Comment