ಚಿತ್ರ: ಅಮೃತ ವರ್ಷಿಣಿ
ಹಾಡಿದವರು: ಎಸ್ ಪಿ ಬಾಲಸುಬ್ರಮಣ್ಯಂ
ನಟರು: ರಮೇಶ್, ಸುಹಾಸಿನಿ, ಶರತ್ ಬಾಬು
ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆಯಿದೆ
ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ.....
ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು
ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೆ
ನಿನ್ನ ಈ ಸರಿಗಮ ಕೇಳಿತು ಸಮಸಮ ಹಂಚಿತು
ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತು ನೋಡೋಕೆ ನಾ ಬಂದರೆ
ನಿನ್ನದೇ ಥಕಥೈ ಕಂಡಿತು ತಕದಿಮಿ ಹೆಚ್ಚಿತು
ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇವೆ
ಎಲ್ಲ ಸಾಲಲ್ಲು ಎಣುಕೋ ಅಕ್ಷರ ನಿಂದೇನ
ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ.....
ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರು
ಅಂದವ ಹೊಗಳಲು ಸಾಧ್ಯವೇ ನಿನ್ನ ಮುಂದೆ ಮೌನವೇ
ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ
ನಡುವೆ ಉಳುಕುತ್ತೆ ಅಲ್ಲವೇ ನಿನ್ನ ಬಿಟ್ಟರಿಲ್ಲವೆ
ಅಲ್ಲೊಂದು ರಾಜರ ಬೀದಿಯಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ಹೃದಯ ಕೋಟೆಯಿದೆ ಇಲ್ಲಿ ಎಂತೆಂಥ ಕನಸೋ ಕಾವಲಿದೆ
ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ
ಹತ್ತಿರ ಇದ್ದರು ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ......
6 comments:
lovely song. superb
ನಮಸ್ಕಾರ,
ಮುತ್ತಿನಂತಹ ನಿಮ್ಮ ಕನ್ನಡ ನುಡಿಗಳಿಗೆ ನನ್ನ ನಮನ.
ಕನ್ನಡ ಲಿಪಿಯಲ್ಲಿ ಈ ಹಾಡು ಇದ್ರೆ ಹಚ್ಚಿಯಲ್ಲ. .
ಮನಸ್ಸೇ ಓ ಮನಸ್ಸೇ
"ಚಂದ್ರ ಮುಖಿ ಪ್ರಾಣ ಸಖಿ ಸಿನಿಮಾದ್ದು".
subbu-7899746623
THANK YOU ANU GREAT JOB ...
Thank you so much for the lyrics of this song.... its precise.
Awesome. Thanks
Can you post CHeluvinali sati illa Lyrics please.
Post a Comment