Friday, January 8, 2010

ondonde - inti ninna preetiya

ಚಿತ್ರ: ಇಂತಿ ನಿನ್ನ ಪ್ರೀತಿಯ
ನಟರು: ಶ್ರೀನಗರ ಕಿಟ್ಟಿ, ಸೋನು, ಭಾವನ
ಹಾಡಿದವರು: ಚಿತ್ರ, ರಾಜೇಶ್ ಕೃಷ್ಣನ್

ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೋ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ
ಮಾತಾಡು ಹೇ ಹೇ ಹೇ ......

ಸುಳ್ಳು ಸುಳ್ಳೇ ಮುನಿಸು ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮತ್ತಲ್ಲಿ ಮುತ್ತಿಟೋರ್ಯಾರು
ಕೆನ್ನೆ ನಿಂದ ಮುತ್ತು ನಂದ? :-)
ಬಗೆ ಹರಿಯದ ಒಗಟು ಇದು....

ಹೋ...ಮೊದಲು ಅಪ್ಪಿಕೊಂಡ ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು
ಈ ವಿರಹದಲಿ ಅಡಗಿದೆಯೋ ಸನಿಹ
ಸನಿಹದಲಿ ಯಾಕಿದೆ ವಿರಹ ಹೇಳುವೆಯ?

ಸಣ್ಣ ತಪ್ಪಿಗಾಗಿ ಮಾತು ಸತ್ತುಹೋಗಿ
ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ಯಾರು?
ತಪ್ಪು ನಿಂದ ತಪ್ಪು ನಂದ ಕೊನೆಗಾಣದ ಒಗಟು ಇದು

ಮುಂಜಾನೆ ನಿದ್ರೇಲಿ ನಾ ಹೇಳಲಾರದ ಕನಸ
ನೀ ಸಿಕ್ಕಾಗ ಮಾತಾಡೋ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೇ ಕನಸು
ಅದನ್ಯಾಕೆ ಬಯಸಿದೆ ಮನಸು ಹೇಳುವೆಯ?

o nalmeya - junglee

ಚಿತ್ರ: ಜಂಗ್ಲೀ
ನಟರು: ವಿಜಯ್, ಐನ್ದ್ರಿತ
ಹಾಡಿದವರು: ಎಂ ಡಿ ಪಲ್ಲವಿ

ಓ ನಲ್ಮೆಯ ನಾವಿಕನೆ ಎಂದು ನಿನ್ನ ಆಗಮನ
ನೀ ಎಲ್ಲಿಯೇ ಅಡಗಿದರು ಅಲ್ಲೇ ನನ್ನ ಈ ಗಮನ
ಈ ಪ್ರೀತಿಯ ಪರಿಣಾಮ ನಿನಗೂ ಕೂಡ ಹೀಗೆನಾ

ಕರೆದುಬಿಡು ನನ್ನ ನೀ ಬೇಗ
ಬರೆದುಕೊಡು ಎಲ್ಲ ಆವೇಗ
ಮಿರುಗುತಿದೆ ಜೀವ ನೋಡೀಗ ಏನು ಕಾರಣ
ನನ್ನ ಪಾಡಿಗಿಲ್ಲಿ ನಾನು ನಿನ್ನ ಹಾಡು ಹಾಡಲೇನು 
ನಿನ್ನ ಊರಿನಿಂದ ಬಂದ ತಾರೆಯನ್ನೇ ನೋಡಲೇನು
ಹಚ್ಚಿಕೊಂಡ ಹುಚ್ಚಿ ನಾನು ನೀನು ಹೀಗೆನಾ? 

ನಡೆಯುತಿರುವಾಗ ಜೊತೆ ನೀನು
ಹಿಡಿದುಕೊಳಲೇನು ಕೈಯನ್ನು
ತಡೆಯದಿರು ಯಾವ ಮಾತನ್ನು ನೀನು ಈ ದಿನ
ಬೇರೆ ಏನು ಕಾಣಲಾರೆ ಒಮ್ಮೆ ನೀನು ಕಂಡ ಮೇಲೆ
ಬಾಕಿ ನೂರು ಮಾತನೆಲ್ಲ ಮೌನದಲ್ಲೇ ಅಂದಮೇಲೆ 
ಮೋಹದಲ್ಲಿ ಮೂಕಿ ನಾನು ನೀನು ಹೀಗೆನಾ? 

neenendare - junglee

ಚಿತ್ರ: ಜಂಗ್ಲೀ
ನಟರು: ವಿಜಯ್, ಐನ್ದ್ರಿತ
ಹಾಡಿದವರು: ಸೋನು ನಿಗಮ್

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ
ಓ ಜೀವವೇ ಹೇಳಿಬಿಡು ನಿನಗೂ ಕೂಡ ಹೀಗೆನಾ?

ತಂದೆನು ಪಿಸುಮಾತು ಜೇಬಲ್ಲಿ
ಕಂಡೆನು ಹಸಿ ಮಿಂಚು ಕಣ್ಣಲ್ಲಿ
ಬಂದೆನು ತುಸು ದೂರ ಜೊತೆಯಲ್ಲಿ ಮರೆತು ಮೈಮನ
ನಿನ್ನ ಬೆರಳು ಹಿಡಿದು ನಾನು ನೀರ ಮೇಲೆ ಬರೆಯಲೇನು
ನಿನ್ನ ನೆರಳು ಸುಳಿಯುವಲ್ಲು ಹೂವ ತಂದು ಸುರಿಯಲೇನು
ನಂಬಿ ಕೂತ ಹುಂಬ ನಾನು ನೀನು ಹೀಗೆನಾ?

ಹೂವಿನ ಮಳೆ ನೀನು ಕನಸಲ್ಲಿ
ಮೋಹದ ಸೆಲೆ ನೀನು ಮನಸಲ್ಲಿ
ಮಾಯದ ಕಲೆ ನೀನು ಎದೆಯಲ್ಲಿ ಒಲಿದ ಈ ಕ್ಷಣ
ನಿನ್ನ ಗುಂಗಿನಿಂದ ನನ್ನ ಬಂದು ಪಾರು ಮಾಡು ನೀನು
ಒಂದೆ ಕನಸು ಕಾಣುವಾಗ ನಾನು ನೀನು ಬೇರೆಯೇನು
ಶರಣು ಬಂದ ಚೋರ ನಾನು ನೀನು ಹೀಗೆನಾ?

matte matte ninna nenapene - shivani

ಚಿತ್ರ: ಶಿವಾನಿ
ನಟರು: ಸೂರಜ್
ಗಾಯನ: ಸೋನು ನಿಗಮ್

ಮತ್ತೆ ಮತ್ತೆ ನಿನ್ನ ನೆನಪೇನೆ
ಕಾಡಿ ಕಾಡಿ ನನ್ನ ಕೊಲ್ಲುತಿದೆ
ಏನನು ಹೇಳಲಾಗದೆ ಹಾಗೆ ಸುಮ್ಮನೆ ಇರಲಾಗದೆ 
ಓ.....

ಕಣ್ಣು ಮುಚ್ಚಿಕೊಂಡರೂನು, ಕಾಣಿಸುವೆ ಯಾಕೆ ನೀನು
ಛೇಡಿಸಿ ನಗುತ ನನ್ನೇ
ಮಾತು ಬಂದು ಮೂಕ ನಾನು, ಕೈಯ ಜಾರಿ ಹೋದೆ ನೀನು
ನಾನಿದ ಸಹಿಸುವೆನೇ
ಇತಿಹಾಸದಲ್ಲಿ ಮುಗ್ದರು ಪ್ರೀತಿಗೆ ಪ್ರಾಣ ತೆತ್ತರು
ತ್ಯಾಗಿಗೆ ಪ್ರೇಮಿ ಎನ್ನಬೇಕ?

ನನ್ನ  ನಿನ್ನ ಸ್ನೇಹವನ್ನು, ಕಂಡು ಯಾರ ಕೆಟ್ಟ ಕಣ್ಣು
ಈ ಥರ ಶಪಿಸಿಹುದೇ
ಹಚ್ಚ ಹಸಿರ ಹಾದಿಯೆಲ್ಲ ಬತ್ತಿ ಬರಡು ಆಯಿತಲ್ಲ
ನನ್ನೆದೆ ಸುಡುತಲಿದೆ
ಈ ಬೆಂಕಿ ಎಂದು ಆರದು, ಈ ನೋವು ಎಂದು ತೀರದು
ಬಾಳೆಲ್ಲ ಹೀಗೆ ಬಾಳಬೇಕ?

hoovina baaNadante - birugaaLi

ಚಿತ್ರ: ಬಿರುಗಾಳಿ
ನಟರು: ಚೇತನ್, ಸಿತಾರ, ತಾರ
ಗಾಯನ: ಶ್ರೇಯ ಗೋಶಲ್

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದೆ ನೀನು.....

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದಂತೆ ನೀನೆ ನೀನು
ನೂತನಳಾದಂತೆ ನಾನೇ ನಾನು
ನೀ ಬಂದ ಮೇಲೆ ಬಾಕಿ ಮಾತೇನು
ಆ......

ಸಾಲದು ಇಡಿ ದಿನ ಜರೂರಿ ಮಾತಿಗೆ
ಕಾದಿದೆ ಸದಾ ಮನ ಅಪಾರ ಪ್ರೀತಿಗೆ...ಓ
ಮಾಡಬೇಕಿಲ್ಲ ಆಣೆ ಗೀಣೆ
ಸಾಕು ನೀನೀಗ ಬಂದರೇನೆ
ಅಗೋಚರ....ಅಗೋಚರ
ನಾ ಕೇಳಬಲ್ಲೆ ನಿನ್ನ ಇಂಚರ....

ಪ್ರೀತಿಯ ನಿರೂಪಣೆ ಇದೀಗ ಮಾಡಿದೆ
ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ...ಓ...
ಸ್ವಪ್ನವ ತಂದ ನೌಕೆ ನೀನು
ಸುಪ್ತವಾದಂತ ತೀರ ನಾನು
ಅನಾಮಿಕ...... ಅನಾಮಿಕ....
ಈ ಯಾಣಕ್ಕೀಗ ನೀನೆ ನಾವಿಕ.....

hoovina baaNadante, yaarigu kaaNadante
haaDina saalinalli mooDuva praaNadante
sheetalavaade neenu......

aa.....

hoovina baaNadante, yaarigu kaaNadante
haaDina saalinalli mooDuva praaNadante
sheetalavaadante neene neenu
nootanaLaadante naane naanu
nee banda mele baaki maatenu.....

saaladu iDi dina zaroori maatige
kaadide sadaa mana apaara preetige
maadabekilla aaNe geeNe
saaku neeniga bandarene
agochara.....agochara...
naa keLaballe ninna inchara.....

preetiya niroopaNe ideega maaDide
kaayisi sataayise adeke kaaDide
swapnava tanda nauke neenu
suptavaadanta teera naanu
anaamika.....anaamika
ee yaaNakkeega neene naavika.....

Tuesday, January 5, 2010

madhura pisumaatige - birugaaLi

ಚಿತ್ರ: ಬಿರುಗಾಳಿ
ನಟರು: ಚೇತನ್, ಸಿತಾರ, ತಾರ 
ಗಾಯನ: ಮೋಹಿತ್, ಶಮಿತಾ ಮಲ್ನಾಡ್

ಮಧುರ ಪಿಸುಮಾತಿಗೆ ಅಧರ ತುಸು ಪ್ರೀತಿಗೆ
ಇರುವಲ್ಲಿಯು ಇರಲಾರದೆ ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ ಓ....
ಚೂರಾದೆ ಒಂದೆ ಭೇಟಿಗೆ

ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯನೆ ಬರಿ ನೋಡುವೆನು ನೀ ಕಾಣುವವರೆಗೆ
ನಿನ್ನದೇ ಪರಿಮಳ ನಿನ್ನಯ ನೆನಪಿಗೆ
ಏನಿದು ಕಾತರ ಬಾರಿ ಬಾರಿ ನಿನ್ನ ಭೇಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ....

ನೋಡಿದರೆ ಮಿತಿ ಮೀರುತಿದೆ ಮನಮೋಹಕ ಮಿಡಿತ
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ
ನಿನ್ನದೇ ಹೆಸರಿದೆ ಕನಸಿನ ಊರಿಗೆ 
ಕುಣಿಯುತ ಬಂದೆನು ಭಿನ್ನವಾದ ನಿನ್ನ ಧಾಟಿಗೆ....ಓ.... 
ಸೋತೆ ನಾನು ನಿನ್ನ ಪ್ರೀತಿಗೆ..... 

avanalli ivalilli - shhh

ಚಿತ್ರ: ಶ್ಹ್
ನಟರು: ಕುಮಾರ್ ಗೋವಿಂದ್, ಮೇಘ
ಗಾಯನ: ಎಲ್ ಏನ್ ಶಾಸ್ತ್ರಿ

ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ
ಎದುರೆದುರು ಬಂದಾಗ ಹೆದರೆದರಿ ನಿಂತಾಗ
ಅಲ್ಲೇ ಆರಂಭ ಪ್ರೇಮ

ನೋಡಿ ನೋಡಿ ಪ್ರೇಮವನು ಮಾಡೋದಲ್ಲ
ಮಾಡುತಲಿ ಹಾಡೋದಲ್ಲ
ಹಾಡಿನಲಿ ಹೇಳೋದಲ್ಲ ಹೇಳುವುದ ಕೇಳೋದಲ್ಲ
ಕೇಳುತಲಿ ಕಲಿಯೋದಲ್ಲ ಕಲಿತು ನೀ ಮಾಡೋದಲ್ಲ
ಮೌನವೇನೆ ಧ್ಯಾನವೇ ಪ್ರೇಮ

ನೀನೆ ಎಲ್ಲ ನೀನಿರದೆ ಬಾಳೆ ಇಲ್ಲ
ಅನ್ನುವುದು ಪ್ರೇಮ ಅಲ್ಲ
ಮರಗಳನು ಸುತ್ತೋದಲ್ಲ ಕವನಗಳ ಗೀಚೋದಲ್ಲ
ನೆತ್ತರಲಿ ಬರೆಯೋದಲ್ಲ ವಿಷವನು ಕುಡಿಯೋದಲ್ಲ
ಮೌನವೇನೆ ಧ್ಯಾನವೇ ಪ್ರೇಮ

baa maLeye baa - accident

ಚಿತ್ರ: ಆಕ್ಸಿಡೆಂಟ್
ನಟರು: ರಮೇಶ್, ರೇಖ ಮತ್ತು ಇತರರು
ಗಾಯನ: ಸೋನು ನಿಗಮ್

ಬಾ ಮಳೆಯೇ ಬಾ, ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾರದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿಸು ನೀ
ಹಿಂತಿರುಗಿ ಹೋಗದಂತೆ ಹಿಂತಿರುಗಿ ಹೋಗದಂತೆ
ಬಿಡದೆ ಬಿರುಸಾಗಿಸು ನೀ

ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಕಾದಿಹಳು ಅಬಿಸಾರಿಕೆ ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು ಒಮ್ಮತಕೆ ಸಡಿಲಾಗದಂತೆ

ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ, ಆರು ಬೇಗಲೇ ಆರು
ಶೃಂಗಾರ ಛಾಯೆಯಲ್ಲಿ ನಾಚಿ ನೀರಾಗದಂತೆ

ಬಾ ಮಳೆಯೇ ಬಾ.....    

yaako eno - abhay

ಚಿತ್ರ: ಅಭಯ್
ನಟರು: ದರ್ಶನ್, ಆರತಿ
ಗಾಯಕ: ಸೋನು ನಿಗಮ್

ಯಾಕೋ ಏನೋ ಯಾಕೋ ಏನೋ
ಜೊತೆಯಲೇ ಬೆರೆತೆವು ಜಗವನೆ ಮರೆತೆವು
ನನಗೆ ನೀನು ಇನ್ನು ನಿನಗೆ ನಾನು
ನನಗೆ ನೀನು ಇನ್ನು ನಿನಗೆ ನಾನು

ನೀನೆ...ಮೊದಲ ಹುಡುಗಿಯು ನೀನೆ
ಕೊನೆಯ ಸನಿಹವು ನೀನೆ
ಹಗಲುಗನಸಲು ನೀನೆ ಇರುಳು ನೆನಪಲು
ಅದೇನಾಯ್ತೋ ಕಾಣೆ ನಾನು
ಎದೆ ತುಂಬ ನಿನದೆ ಸುದ್ದಿ
ಕೇಳೆ ಜಾಣೆ ಪ್ರೀತಿ ಆಣೆ
ಅದೇ ನಾನು ನಿನ್ನ ಬಂಧಿ
ಜೊತೆಗೆ ನೀನು ಇರಲು ಬದುಕು ಜೇನು
ನನಗೆ ನೀನು ಇನ್ನು ನಿನಗೆ ನಾನು 

ಕಣ್ಣ ಕೊಳದ ಒಳಗಡೆ ನಿನ್ನ
ಅಡಗಿಸಿಡುವೆನು ಚಿನ್ನ
ಜನುಮಜನುಮಕು ನನ್ನ ಬದುಕು ಅರಳಿಸು
ನಾನೇ ನಿನ್ನ ಹೃದಯದ ಚೋರ
ನನ್ನಾಣೆ ಭಾಷೆ ನೇರ
ನೀನೆ ನನ್ನ ಪ್ರೇಮದ ಸಾರ
ನಿನ್ನ ಒಲವೆ ನನಗಾಧಾರ
ಮಿನುಗು ಬಾರೆ ನನ್ನ ಮಿನುಗುತಾರೆ
ನನಗೆ ನೀನು ಇನ್ನು ನಿನಗೆ ನಾನು

aakasha neene - ambaari

ಚಿತ್ರ: ಅಂಬಾರಿ
ನಟರು: ಯೋಗೀಶ್
ಗಾಯಕ: ಸೋನು ನಿಗಮ್

ಆಕಾಶ ನೀನೆ ನೀಡೊಂದು ಗೂಡು
ಬಂತೀಗ ಪ್ರೀತಿ ಹಾರಿ
ತಂಗಾಳಿ ನೀನೆ ನೀಡೊಂದು ಹಾಡು
ಕಂಡಿತು ಕಾಲು ದಾರಿ
ಒಂದಾದ ಜೀವ ಹೂವಾಗುವಂತೆ ಎಂದು ಕಾಪಾಡಲಿ
ಪ್ರೀತಿಯ ಅಂಬಾರಿ

ಕಣ್ಣಿನಲ್ಲಿ ಕಣ್ಣಿರೆ ಲೋಕವೆಲ್ಲ ಹೂ ಹಂದರ
ಭಾವವೊಂದೇ ಆಗಿರೆ ಬೇಕೇ ಬೇರೆ ಭಾಷಾಂತರ
ಎದೆಯಿಂದ ಹೊರ ಹೋಗೋ ಉಸಿರೆಲ್ಲ ಕನಸಾಗಲಿ
ಈ ಪ್ರೀತಿ ಜೊತೆಯಲ್ಲಿ ಒಂದೊಂದು ನನಸಾಗಲಿ
ಕೊನೆಯಿಲ್ಲದ ಕುಶಲೋಪರಿ ಪ್ರೀತಿಯ ಅಂಬಾರಿ

ಕಾಣದಂತ ಹೊಸ್ತಿಲು ದೂರದಿಂದ ಬಾ ಎಂದಿದೆ
ಪೆದ್ದು ಮುದ್ದು ಜೋಡಿಗೆ ಸಿಕ್ಕ ಪ್ರೀತಿ ಸೊಗಸಾಗಿದೆ
ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನ
ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನ
ಮುಂದರಿಯುವ ಕಾದಂಬರಿ ಪ್ರೀತಿಯ ಅಂಬಾರಿ