Saturday, October 10, 2009

onde samane - gaaLipaTa

ಚಿತ್ರ: ಗಾಳಿಪಟ 
ಹಾಡಿದವರು: ಸೋನು ನಿಗಮ್
ನಟರು: ಗಣೇಶ್, ಡೈಸಿ ಮತ್ತು ಇತರರು...

ಒಂದೇ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವು
ಕೊನೆಯಿರದ ಏಕಾಂತವೆ ಒಲವೆ......

ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ
ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ  
ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು ಕಣ್ಣ ಹನಿ ಸುಮ್ಮನೆ ಒಣಗಿ
ಅವಳನ್ನೇ ಜಪಿಸುವುದೆ ಒಲವೆ........

ನಾಲ್ಕು ಪದದ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೆ
ಮೂರು ಸ್ವರದ ಹಾಡಿನಲ್ಲಿ ಹೃದಯವನು ಹರಿಬಿಡಬಹುದೆ
ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೆ..........

nadheem dheentana - gaaLipata

ಚಿತ್ರ: ಗಾಳಿಪಟ
ಹಾಡಿದವರು: ಚಿತ್ರ ಕೆ ಎಸ್
ನಟರು: ಗಣೇಶ, ಡೈಸಿ ಮತ್ತು ಇತರರು

ನಧೀಂ ಧೀಂತನ ನಧೀಂ ಧೀಂತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ಮೊದಲ ಹೆಜ್ಜೆಗೆ ಏನೋ ಕಂಪನ ಏನೀ ರೋಮಾಂಚನ
ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದಂಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ 
ಈ ಕಣ್ಣಿನ ಕವನ ಓದೋ ಓ ಹುಡುಗ......

ಪ್ರೇಮದ ಸರಿಗಮ ಸ್ವರ ತಾಳದ ಕೊಳದಲ್ಲಿ
ಹಾಡುತ ತೇಲಾಡುತ ಜ್ವರವೇರಿಸೋ ಮಳೆಯಲ್ಲಿ
ಒಂದೂರಲ್ಲಿ ರಾಜ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ
ದುಂಡು ಮುಖದ ರಾಜಕುಮಾರ ಕೋಟೆ ದಾಟಿ ಬಂದ ಕಥೆಗೆ
ನಾಯಕ ನೀನೆ......ಆ ಚಂದಾಮಾಮ ಕಥೆಗೆ ನಾಯಕಿ ನಾ......

ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು
ಸೋಲುವೆ ಪ್ರತಿ ಕ್ಷಣ ನನ್ನ ಮನದಲೆ ನಾನು
ನಿದ್ದೆ ಬರದ ಕಣ್ಣ ಮೇಲೆ ಕೈಯ ಮುಗಿವೆ ಚುಂಬಿಸು ಒಮ್ಮೆ
ನಾನು ನಾಚಿ ನಡುಗೋ ವೇಳೆ ಮಲ್ಲೆ ಹೂವ ಮುಡಿಸೋ ಒಮ್ಮೆ
ನಾನು ಭೂಮಿ....ಆವರಿಸು ಸುರಿವ ಮಳೆಯಂತೆ ನನ್ನ.....

Friday, October 9, 2009

aakasha bhoomi - mussanje maatu

ಚಿತ್ರ: ಮುಸ್ಸಂಜೆ ಮಾತು
ಹಾಡಿದವರು: ಶ್ರೇಯ ಘೋಶಾಲ್
ನಟರು: ಸುದೀಪ್, ರಮ್ಯ

ಆಕಾಶ ಭೂಮಿ ಇಂದು ಒಂದಾದ ಹಾಗಿದೆ
ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
ತಂದಾನೋ ತಂದಾನೋ ತನುವೆಲ್ಲ ತಂದಾನೋ
ಚಂದಾನೋ ಚಂದಾನೋ ಜಗವೆಲ್ಲ ಚಂದಾನೋ
ಮನಸೆಲ್ಲ something something ಉಯ್ಯಾಲೆ ತೂಗಿದೆ

ನಾ ಬರುವ ದಾರಿಯಲ್ಲಿ ಹೂ ಬಳುಕುತಾವ ನೋಡಾ
ನಾಚಿ ನಿಂತೆ ನಾನು ಅವು ಹಾಡಿತೊಂದು ಹಾಡ
ಹಾಡಲು ನಾನು ಜೊತೆಜೊತೆಗೆ ಅರಳಿತು ಮನವು ಒಳಗೊಳಗೇ
ನದಿಯಂತೆ ಹರಿಯುವೆನು ಮಂಜಂತೆ ಮುಸುಕುವೆನು
ತಿರುತಿರುಗೋ ಭೂಮಿಯ ನೋಡಲು ಚಂದ್ರಮಕೆ ಹಾರುವೆನು
ಮನದಲ್ಲೇ ಮುಗಿಲನು ಸೇರಿ ಭುವಿಗೆ ಕೈ ಚಾಚುವೆನು......

ಸೌಂದರ್ಯ ರಾಗ ಲಹರಿ ಬಂತೆನ್ನ ಮನಕೆ ಮರಳಿ
ತಲೆದೂಗುವಂತ ನಾದ ತಂಗಾಳಿ ಬೀಸೊ ರವಳಿ
ಅಲೆ ಅಲೆ ಮೇಲೆ ಮೇಲೆ ಬರುತಿರೋ ಹಾಗೆ
ಸುಖ ದುಃಖವೆರಡು ಜೀವನ ಧಾರೆ
ಮುಸ್ಸಂಜೆ ಮಾತಲ್ಲಿ ಈ ಜೀವ ಹಗುರಾಯ್ತು
ಕೋಗಿಲೆಯ ಹಾಡಂತೆ ಆ ಮಾತು ಇಂಪಾಯ್ತು
ಭಾವಗಳ ಸರಿಗಮ ಸೇರಿ ಸೊಗಸಾದ ಹಾಡಾಯ್ತು.....

keLade nimageega - geeta

ಚಿತ್ರ: ಗೀತ
ಹಾಡಿದವರು: ಎಸ್ ಪಿ ಬಾಲು
ನಟರು: ಶಂಕರ್ ನಾಗ್

ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ
ಒಂದು ಹೆಣ್ಣಿನ... ಓ..... ನೊಂದ ವಿರಹ ಗೀತೆ

ಸಂಪಿಗೆ ಒಂದೂರು ಮಲ್ಲಿಗೆ ಒಂದೂರು, ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು, ಸೇತುವೆಯು ಅಲ್ಲೊಂದು
ಈ ಊರ ಚೆಲುವೆ ಆ ಊರ ಚೆಲುವ, ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ

ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ
ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಲವಿಂದಲಿ ಒಂದಾದರು ಆಗ........

ಚೆಲುವೆಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿ
ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ
ಹಲ್ಲನ್ನು ಮಸೆದ ಸೇತುವೆಯ ಕಡಿದ
ಆ ಜೋಡಿಯ ಕತೆಯಂದಿಗೆ ಕೊನೆಯಾಯಿತು ಹೀಗೆ........


keLade nimageega dooradalli yaaro haaDu heLidante
ondu heNNina...o.....nonda viraha geete

sampige ondooru mallige ondooru, naDuvalli nadiyondu
haggada uyyaale tooguva haagondu, setuveyu allondu
ee oora cheluve aa oora cheluva, nadiyanchali oDaaDuta eduraadaru omme

cheluveya kanDaaga cheluvana manadalli nooraase bandaaga
cheluveya kaNNalli cheluvanu mane maaDi shileyante nintaaga
hoovaagi manasu nooraaru kanasu beragaadaru olavindali ondaadaru aaga.....

cheluveya maavayya olavina kate keLi huliyante egaraaDi
setuve baLi bandaaga premigaLa kanDaaga roshadali koogaaDi
hallannu maseda setuveya kaDida
aa joDiya kateyandige koneyaayitu heege........

joteyali jote joteyali - Geeta

ಚಿತ್ರ: ಗೀತ
ಹಾಡಿದವರು: ಎಸ್ ಪಿ ಬಾಲು, ಎಸ್ ಜಾನಕಿ
ನಟರು: ಶಂಕರ್ ನಾಗ್

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಓ....ಎಂತ ಮಾತಾಡಿದೆ ಇಂದು ನೀ
ಎಂತ ಮಾತಾಡಿದೆ, ನನ್ನ ಮನಸಿನ ಭಾವನೆ ನೀನೆ ಹೇಳಿದೆ

ಪ್ರೀತಿಯೆಂದರೇನು ಎಂದು ಈಗ ಅರಿತೆನು
ಸವಿನುಡಿಯಲಿ ತನು ಅರಳಿತು ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ.....

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ.....

geeta sangeeta - Geeta

ಚಿತ್ರ: ಗೀತ
ಹಾಡಿದವರು: ಎಸ್ ಪಿ ಬಾಲು
ನಟರು: ಶಂಕರ್ ನಾಗ್

ಗೀತ ಸಂಗೀತ ಏಕೆ ಹೀಗೆ ದೂರವಾದೆ....ಎಲ್ಲಿ ಹೋದೆ
ನಯನವ ಸೆಳೆದ ಗೀತ ನನ್ನ ಕನಸಲಿ ಕುಣಿದ ಗೀತ
ನನ್ನ ಮನವನು ಅರಿತ ಗೀತ ನನ್ನ ಉಸಿರಲಿ ಬೆರೆತ ಗೀತ.....

ನಗಲು ನೀನು ಹೂವಂತೆ ನುಡಿವ ಮಾತು ಹಾಡಂತೆ
ಬಳಿಗೆ ಬಂದೆ ಮಿಂಚಂತೆ ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ ಒಲವಿನ ಭಾವವೇನೋ
ಪ್ರಣಯದ ಕವಿತೆ ಏನೋ ಕಲಿಸಿದೆ ಬಂದು ನೀನು....ಗೀತ

ಹರುಷ ಕಂಡೆ ಕಣ್ಣಲ್ಲಿ ಸರಸ ಕಂಡೆ ಮಾತಲ್ಲಿ
ಸೊಗಸ ಕಂಡೆ ನಿನ್ನಲ್ಲಿ ಸುಖವ ತಂದೆ ಬಾಳಲ್ಲಿ
ಬೀಸುವ ಗಾಳಿಯಂತೆ ಓಡಿದೆ ನಿಲ್ಲದಂತೆ 
ನೆನಪಲಿ ನೀನು ನಿಂತು ಆದೆಯ ವಿರಹ ಗೀತೆ.....ಗೀತ

baare baare kalyana mantapake

ಚಿತ್ರ: ಅಪ್ಪು
ಹಾಡಿದವರು: ಉದಿತ್ ನಾರಾಯಣ್, ಚಿತ್ರ
ನಟರು: ಪುನೀತ್ ರಾಜಕುಮಾರ್, ರಕ್ಷಿತ

ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ

ಬಾರೋ ಬಾರೋ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ

ನೀನನ್ನ ಬ್ಯೂಟಿ ಏನ್ಜಲು
ಲವ್ವೊಂದೆ ನಮ್ಮ ಬೈಬಲ್ಲು 
ಮದುವೆಯ ಬೆಲ್ಲು ಮೊಳಗಿರಲು ಬೆರಳಿಗೆ ರಿಂಗು ತೊಡಿಸಿರಲು

ಮುತ್ತಂಥ ಜೋಡಿ ನಮ್ಮದು 
ಈ ಪ್ರೀತಿ ಎಂದು ಸೋಲದು
ಎಲ್ಲಿ ಹೇಗೆ ಇದ್ದರು ನಾನು ನೀನು ಇಬ್ಬರು made for each otherಉ

ಲೈಫಲ್ಲಿ ಲವ್ವೇ ಅಮೃತ 
ಜೀವನ್ಮೆ ಪ್ಯಾರೆ ಶಾಶ್ವತ 
ಹೃದಯದ ಭಾವ ಬೆರೆತಿರಲು ಒಲವಿನ ಜ್ಯೋತಿ ಬೆಳಗಿರಲು 

ಪ್ರೇಮಕ್ಕೆ ಮೇರೆ ಇಲ್ಲವೊ 
ಪ್ರೀತಿಯೇ ಸೃಷ್ಟಿ ಮೂಲವೋ 
ಭಾಷೆ ಬೇರೆಯಾದರು ಜಾತಿಯೇನೆ ಇದ್ದರು ಪ್ರೇಮವು ಒಂದೇ.....    

ninnanta appa illa

Movie: Devata manushya
Singers: Rajkumar, B R Chaya
Actors: Rajkumar, Geetha, Sudha Rani

ninnanta appa illa, ondondu maatu bella
neene nanna jeeva neene nanna praaNa
yaava deva tanda varavo innu naanu ariyenu....

ninnanta magaLu illa, baaLalli neene yella
ninna kaNDa mele beLaka kaNDe baale
yaava deva tanda varavo innu naanu ariyenu....

nee heege naDeyalu naDu heege kuNiyalu
hadinentu vayasina huDugana haagide
nee heege nagutire jotheyaagi barutire
aananda tarutire huDugane endigu...

rampam rapampa rampapampa rampapampa
rampam rapampa rampapampa rampapam...

maatina moDide ninnaaNe naanu becchide....

santoshavendare ullaasavendare
sangeetavendare nina jothe naDedare
muddaada maatale hitavaada raagadi
dinavella haaDalu hege nee ariteyo....

rampam rapampa rampapampa rampapampa
rampam rapampa rampapampa rampapam...

nanna ee aragiNi maataaDe noDi kaliteno....

naavaaDuva nuDiye kannaDa nuDi.....

ಚಿತ್ರ: ಗಂಧದ ಗುಡಿ
ಹಾಡಿದವರು: ಪಿ ಬಿ ಶ್ರೀನಿವಾಸ್
ನಟರು: ರಾಜ್ ಕುಮಾರ್, ವಿಷ್ಣು ವರ್ಧನ್, ಕಲ್ಪನಾ

ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೇ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ

ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೇ ಗಂಧದ ಗುಡಿ ಅಂದದ ಗುಡಿ ಗಂಧದ ಗುಡಿ ಚಂದದ ಗುಡಿ ಶ್ರೀಗಂಧದ ಗುಡಿ...ಅಹಹ ಅಹಹ ಅಹಹ.....

ಹಸಿರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ
ಚೆಲುವಿನ ಬಲೆಯ ಬೀಸಿದಳೋ ಈ ಗಂಧದ ಗುಡಿಯಲಿ ನೆಲೆಸಿಹಳೋ
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ....ಅಹಹಹ ಓ.....

ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳು
ಮುಗಿಲನು ಚುಂಬಿಸೋ ಆಸೆಯಲಿ ತೂಗಾಡುತ ನಿಂತ ಮರಗಳಲಿ
ಹಾಡುತಿರೆ ಬಾನಾಡಿಗಳು ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ.....ಅಹಹಹ ಓ..... 

neene neene - akash

ಚಿತ್ರ: ಆಕಾಶ್
ಹಾಡಿದವರು: ಕುನಾಲ್ ಗಾಂಜಾವಾಲ
ನಟರು: ಪುನೀತ್ ರಾಜ್ಕುಮಾರ್, ರಮ್ಯ

ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೇ ಜಾಣೆ

ಮಳೆಯಲ್ಲುನಾ ಬಿಸಿಲಲ್ಲುನಾ ಚಳಿಯಲ್ಲುನಾ ಜೊತೆ ನಡೆಯುವೆ
ಹಸಿವಲ್ಲುನಾ ನೋವಲ್ಲುನಾ ಸಾವಲ್ಲುನಾ ಜೊತೆ ನಿಲ್ಲುವೆ
ನಾನಾದೇಶ ನಾನಾವೇಷ ಯಾವುದಾದರೇನು
ಒಪ್ಪಿಕೊಂಡ ಈ ಮನಸುಗಳೆರಡು ಎಂದು ಹಾಲು ಜೇನು....  

ಕ್ಷಣವಾಗಲಿ ದಿನವಾಗಲಿ ಯುಗವಾಗಲಿ ನಾ ಕಾಯುವೆ
ಕಲ್ಲಾಗಲಿ ಮುಳ್ಳಾಗಲಿ ನಿನ್ನ ಬದುಕಲಿ ಬೆಳಕಾಗುವೆ
ಏನೇ ಆಗಲಿ ಪ್ರಾಣ ಹೋಗಲಿ ನನಗೆ ನೀನೆ ಬೇಕು
ನಿನ್ನ ನನ್ನ ಈ ಪ್ರೀತಿಯ ಕಂಡು ಲೋಕ ಮೆಚ್ಚಬೇಕು.....

bhale bhale chendada chendulli heNNu neenu - amruthavarshini

ಚಿತ್ರ: ಅಮೃತ ವರ್ಷಿಣಿ
ಹಾಡಿದವರು: ಎಸ್ ಪಿ ಬಾಲಸುಬ್ರಮಣ್ಯಂ
ನಟರು: ರಮೇಶ್, ಸುಹಾಸಿನಿ, ಶರತ್ ಬಾಬು
   
ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆಯಿದೆ
ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ.....

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ  ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು  ಕಾಲಡಿ ಹೂವಾಗಿ ಬರಬೇಕು

ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೆ
ನಿನ್ನ ಈ ಸರಿಗಮ ಕೇಳಿತು ಸಮಸಮ ಹಂಚಿತು
ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತು ನೋಡೋಕೆ ನಾ ಬಂದರೆ
ನಿನ್ನದೇ ಥಕಥೈ ಕಂಡಿತು ತಕದಿಮಿ ಹೆಚ್ಚಿತು
ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇವೆ
ಎಲ್ಲ ಸಾಲಲ್ಲು ಎಣುಕೋ ಅಕ್ಷರ ನಿಂದೇನ
ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ.....

ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರು 
ಅಂದವ ಹೊಗಳಲು ಸಾಧ್ಯವೇ ನಿನ್ನ ಮುಂದೆ ಮೌನವೇ
ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ
ನಡುವೆ ಉಳುಕುತ್ತೆ ಅಲ್ಲವೇ ನಿನ್ನ ಬಿಟ್ಟರಿಲ್ಲವೆ
ಅಲ್ಲೊಂದು ರಾಜರ ಬೀದಿಯಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ಹೃದಯ ಕೋಟೆಯಿದೆ ಇಲ್ಲಿ ಎಂತೆಂಥ ಕನಸೋ ಕಾವಲಿದೆ
ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ
ಹತ್ತಿರ ಇದ್ದರು ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ......

Thursday, October 8, 2009

haalallaadaru haaku neerallaadaru haaku....

ಚಿತ್ರ: ದೇವತಾ ಮನುಷ್ಯ
ಹಾಡಿದವರು: ರಾಜ್ ಕುಮಾರ್, ಬಿ ಆರ್ ಛಾಯ
ನಟರು: ರಾಜ್ ಕುಮಾರ್, ಸುಧಾ ರಾಣಿ, ಗೀತ

ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ

ಮುಳ್ಳಲ್ಲಾದರು ನೂಕು ಕಲ್ಲಲ್ಲಾದರು ನೂಕು ರಾಘವೇಂದ್ರ
ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ
ಬಿಸಿಲಲ್ಲೇ ಒಣಗಿಸು ನೆರಳಲ್ಲೇ ಮಲಗಿಸು ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ ನಗುನಗುತಾ ಇರುವೆ ರಾಘವೇಂದ್ರ

ಆ.....

ಸುಖವನ್ನೇ ನೀಡೆಂದು ಎಂದು ಕೇಳೆನು ನಾನು ರಾಘವೇಂದ್ರ....ಆ....
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ನೀನೆ ಹೇಳು ರಾಘವೇಂದ್ರ
ಎಲ್ಲಿದ್ದರೇನು ನಾ ಹೇಗಿದ್ದರೇನು ನಾ ರಾಘವೇಂದ್ರ
ನಿನ್ನಲ್ಲಿ ಶರಣಾಗಿ ನೀನನ್ನ ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ.....

yaavudo ee bombe yaavudo....

ಚಿತ್ರ: ಯುಗಪುರುಷ
ಹಾಡಿದವರು: ಎಸ್ ಪಿ ಬಾಲು
ನಟರು: ರವಿಚಂದ್ರನ್, ಖುಷ್ಬೂ

ನಿಸಗರಿಸ.........
ಈ ತಾಳ ಇದ್ದರೆ, ಹಾಡು ಬಾರದೆ
ಈ ಹಾಡು ಇದ್ದರೆ ನಿದ್ದೆ ಬಾರದೆ
ಈ ನಿದ್ದೆ ಬಂದರೆ, ಕನಸು ಬಾರದೆ
ಆ ಕನಸಿನಲ್ಲಿ ಈ ಬೊಂಬೆ ಕಾಣದೆ

ಯಾವುದೋ ಈ ಬೊಂಬೆ ಯಾವುದೋ
ಊರ್ವಶಿಯ ಕುಲವೋ ಮೇನಕೆಯ ಚೆಲುವೋ
ಯಾವುದೋ ಈ ಅಂದ ಯಾವುದೋ
ಬೇಲೂರಿನ ಶಿಲೆಯೋ ಶಾಂತಲೆಯ ಕಲೆಯೋ
ಕಾಳಿದಾಸನ ಪ್ರೇಮಗೀತೆಯೋ
ಕಾಳಿದಾಸನ ಪ್ರೇಮಗೀತೆಯೋ

ನೂರಾರು ಹೂಗಳಿದ್ದರು ಈ ಅಂದ ಬೇರೆ
ಆ ತಾರೆ ಮಿನುಗುತಿದ್ದರು ಈ ಕಣ್ಣೆ ಬೇರೆ...ನೀನ್ಯಾರೆ
ನೀನಿಲ್ಲಿ ಸುಮ್ಮನಿದ್ದರು ಒಳಮಾತೆ ಬೇರೆ
ಹಾಡಲ್ಲೆ ನೀನು ಇದ್ದರು, ಎದುರಿರುವ ತಾರೆ....ಹಲೋ ನೀನ್ಯಾರೆ?
ನನ್ನ ಮನದ ಪ್ರೇಮ ರಾಗಕೆ ನಿನ್ನ ಎದೆಯ ತಾಳ ಇದ್ದರೆ
ನಾನು ಹಾಡೋ ನೂರು ಭಾವಕೆ ನೀನು ಒಮ್ಮೆ ನೋಡಿ ನಕ್ಕರೆ ಸಾಕು.....
ಲಲಲಲ.....

ನೀನ್ಯಾರೋ ತಿಳಿಯದಿದ್ದರೂ ನನಗೆ ನೀ ರಾಧೆ
ಕಲ್ಲಾಗಿ ನಾನು ನಿಂತರು ಕರಗಿ ನೀರಾದೆ...ಏಕಾದೆ
ಈ ಹಾಡು ನಿನ್ನದಾದರೂ ರಾಗ ನಾನಾದೆ
ಯಾರೇನು ಹೇಳದಿದ್ದರೂ ನನಗೆ ಜೊತೆಯಾದೆ...ಹೇಗಾದೆ
ಇಂದು ನೆನ್ನೆ ನಾಳೆ ಯಾವುದು ನನಗೆ ಈಗ ನೆನಪು ಬಾರದು
ನಿನ್ನ ಬಿಟ್ಟು ನನ್ನ ಮನಸಿದು ಬೇರೆ ಏನು ಕೇಳಲಾರದು ರಾಧೆ........ 
ಲಲಲಲಲ.......

Ee taaLa iddare haaDu baarade

Ee haaDu iddare nidde baarade
Ee nidde bandare, kanasu baarade
Aa kanasinalli ee bombe kaaNade

Yaavudo ee bombe yaavudo
Oorvashiya kulavo menakeya cheluvo
Yaavudo ee anda yaavudo
Beloorina shileyo shaantaleya kaleyo
kaaLidaasana premageeteyo x2

nooraaru hoogaLiddaru ee anda bere
aa taare minugutiddaru ee kaNNe bere...neenyaare?
neenilli summaniddaru oLamaate bere
haaDalle neenu iddaru eduriruva taare....hello neenyaare?
Nanna manada prema raagake ninna edeya taaLa iddare
Naanu haaDo nooru bhaavake neenu omme noDi nakkare saaku....

Lalalala..........

Neenyaaro tiLiyadiddaru nanage nee raadhe
Kallaagi naanu nintaru karagi neeraade....ekaade
Ee haaDu ninnadaadaru raaga naanade
Yaarenu heLadiddaru nanage joteyaade...hegaade
Indu nenne naaLe yaavudu nanage eega nenapu baaradu
Ninna biTTu nanna manasidu bere enu keLalaaradu raadhe.....

Lalalalala........

poojisalende hoogala tande.....

ಚಿತ್ರ: ಎರಡು ಕನಸು
ಹಾಡಿದವರು: ಎಸ್ ಜಾನಕಿ
ನಟರು: ರಾಜ್ ಕುಮಾರ್, ಕಲ್ಪನಾ, ಮಂಜುಳ

ಪೂಜಿಸಲೆಂದೆ ಹೂಗಳ ತಂದೆ
ದರುಶನ ಕೋರಿ ನಾನಿಂದೆ
ತೆರೆಯೋ ಬಾಗಿಲನು ರಾಮ....

ಮೋಡದ ಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರತಿ ಉಷೆ ತಂದಿಹಳು
ತಾಮಸವೇಕಿನ್ನು ಸ್ವಾಮೀ
ತೆರೆಯೋ ಬಾಗಿಲನು ರಾಮ.......

ಒಲಿದರು ಚೆನ್ನ ಮುನಿದರು ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರು ಚೆನ್ನ
ಸ್ವೀಕರಿಸು ನನ್ನ ಸ್ವಾಮೀ
ತೆರೆಯೋ ಬಾಗಿಲನು ರಾಮ.......

endendu ninnanu marethu....

ಚಿತ್ರ: ಎರಡು ಕನಸು
ಹಾಡಿದವರು: ಪಿ ಬಿ ಶ್ರೀನಿವಾಸ್, ವಾಣಿ ಜಯರಾಂ
ನಟರು: ರಾಜ್ ಕುಮಾರ್, ಕಲ್ಪನಾ, ಮಂಜುಳ

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಓಹೋಹೋಹೋ...ನೀ ಕಡಲಾದರೆ ನಾ ನದಿಯಾಗುವೆ 
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ.....

ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ 
ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ.....

ಸಾವಿರ ಜನುಮವೇ ಬರಲಿ ಬೇಡುವುದೊಂದೇ
ನನ್ನವಳಾಗಿರು ನೀನು ಎನ್ನುವುದೊಂದೇ
ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ
ನಾನಿನ್ನ ಜೋಡಿಯಾಗಿ ಎಂದು ಬಾಳುವೆ ಬಾಳುವೆ ಬಾಳುವೆ.....

ellelli nodali - naa ninna mareyalaare

ಚಿತ್ರ: ನಾ ನಿನ್ನ ಮರೆಯಲಾರೆ
ಹಾಡಿದವರು: ರಾಜ್ ಕುಮಾರ್, ಜಾನಕಿ ಎಸ್
ನಟರು: ರಾಜ್ ಕುಮಾರ್, ಲಕ್ಷ್ಮಿ

ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ

ಆ ಕೆಂಪು ತಾವರೆ ಆ ನೀರಿಗಾದರೆ
ಈ ಹೊನ್ನ ತಾವರೆ ನನ್ನಾಸೆಯಾಸರೆ
ಆ.........
ಮಿಂಚೆಂಬ ಬಳ್ಳಿಗೆ ಮೇಘದ ಆಸರೆ
ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ
ಯುಗಗಳೇ ಜಾರಿ ಉರುಳಿದರೇನು
ನಾನೇ ನೀನು ನೀನೆ ನಾನು
ಆದಮೇಲೆ ಬೇರೆ ಏನಿದೆ.....

ರವಿಯನ್ನು ಕಾಣದೆ ಹಗಲೆಂದು ಆಗದು
ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು
ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ
ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ
ವಿರಹದ ನೋವ ಮರೆಯಲಿ ಜೀವ
ಹೂವು ಗಂಧ ಸೇರಿದಂತೆ 
ಪ್ರೇಮದಿಂದ ನಿನ್ನ ಸೇರುವೆ.....


ellelli noDali ninnanne kaaNuve
kannalli tumbiruve manadali mane maaDi aaDuve


aa kempu taavare aa neerigaadare
ee honna taavare nannaaseyaasare
aaa........
minchemba baLLige meghada aasare
ee heNNa baaLige ninna toLinaasare
yugagaLe jaari uruLidarenu
naane neenu neene naanu
aadamele bere enide........


raviyannu kaaNade hagalendu aagadu
ninnannu noDade ee praaNa nilladu
kaDalannu serada nadiyelli kaaNuve
ninnannu serade naa hege baaLuve
virahada nova mareyali jeeva
hoovu gandha seridante
premadinda ninna seruve.......

endu ninna noDuve - eraDu kanasu

ಚಿತ್ರ: ಎರಡು ಕನಸು
ಹಾಡಿದವರು: ಪಿ ಬಿ ಶ್ರೀನಿವಾಸ್
ನಟರು: ರಾಜ್ ಕುಮಾರ್, ಕಲ್ಪನಾ, ಮಂಜುಳ

ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ
ನಿಜ ಹೇಳಲೇನು ನನ್ನ ಜೀವ ನೀನು
ನೂರಾರು ಬಯಕೆ ಆತುರ ತಂದಿದೆ
ನೂರಾರು ಕನಸು ಕಾತರ ತುಂಬಿದೆ
ಮುಗಿಲಿಗಾಗಿ ಬಾನು ದುಂಬಿಗಾಗಿ ಜೇನು
ನನಗಾಗಿ ನೀನು ನಿನಗಾಗಿ ನಾನು

ತಣ್ಣನೆ ಗಾಳಿ ಹಿತ ತೋರದಲ್ಲ
ಕೋಗಿಲೆ ಗಾನ ಸುಖ ನೀಡದಲ್ಲ
ಕಾಮನ ಬಿಲ್ಲಿಗೂ ಮನ ಸೋಲಲಿಲ್ಲ
ನಿನ್ನಯ ನೆನಪಲ್ಲೇ ಸೋತೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು

ಕಂಗಳ ಕಾಂತಿ ನೀನಾಗಿರುವೆ
ಮೈಮನವೆಲ್ಲ ನೀ ತುಂಬಿರುವೆ
ನನ್ನೀ ಬಾಳಿಗೆ ಬೆಳಕಾಗಿರುವೆ
ಜನುಜನುಮದಾ ಜೋಡಿ ನೀನು
ನನಗಾಗಿ ನೀನು ನಿನಗಾಗಿ ನಾನು.....

ati madhura anuraaga - school master

ಚಿತ್ರ: ಸ್ಕೂಲ್ ಮಾಸ್ಟರ್
ಹಾಡಿದವರು: ಜಮುನ ರಾಣಿ, ಎ ಎಂ ರಾಜ
ನಟರು: ಬಿ ಆರ್ ಪಂತುಲು

ಅತಿ ಮಧುರ ಅನುರಾಗ
ಜೀವನ ಸಂಧ್ಯಾರಾಗ

ಸಮರಸದ ವೈಭೋಗ ಸಂಗ ಸಮಾಗಮ ರಾಗ

ನೀಲಿಯ ಬಾನಿನ ಬೆಳ್ಮುಗಿಲೆ
ನವಿಲಿನ ನಾಟ್ಯಕೆ ಕರೆಯೋಲೆ
ಜೇನಿನ ಹೊನಲೇ ಉಕ್ಕುವ ವೇಳೆ
ಒಲವೆ ಸುಖದ ಉಯ್ಯಾಲೆ.....

ಯೌವ್ವನ ಬಾಳಿನ ಹೊಂಬಾಳೆ
ಪ್ರೀತಿಯೇ ಬಾಡದ ಹೂಮಾಲೆ
ನಲ್ಮೆಯ ನೀಡೋ ಪ್ರೇಮದ ಲೀಲೆ
ಒಲವೆ ಸುಖದ ಉಯ್ಯಾಲೆ.....  

idu yaaru bareda katheyo

ಚಿತ್ರ: ಪ್ರೇಮದ ಕಾಣಿಕೆ
ಹಾಡಿದವರು: ರಾಜ್ ಕುಮಾರ್
ನಟರು: ರಾಜ್ ಕುಮಾರ್, ಆರತಿ

ಇದು ಯಾರು ಬರೆದ ಕಥೆಯೊ ನನಗಾಗಿ ಬಂದ ವ್ಯಥೆಯೊ
ಕೊನೆ ಹೇಗೋ ಅರಿಯಲಾರೆ ಮರೆಯಾಗಿ ಹೋಗಲಾರೆ

ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ
ಆಡಿಸಿದೆ ಕಾಡಿಸಿದೆ ಅಳಿಸಿ ನಗುತಿದೆ
ಬರಿ ಕನಸಾಯ್ತು ಸುಖ ಶಾಂತಿಯೆಲ್ಲ
ಇನ್ನು ಬದುಕೇಕೆ ಕಾಣೆನಲ್ಲ.....

ಹಾವ ಕಂಡ ಮೂಗನಂತೆ ಕೂಗಲಾರದೆ
ಕಾಡಿನೊಳು ನಿಂತಿಹೆ ದಾರಿ ಕಾಣದೆ
ಜೊತೆಯಾರಿಲ್ಲ ನಾ ಒಂಟಿಯಾದೆ
ನಗುವಿನ್ನೆಲ್ಲಿ ಸೋತುಹೋದೆ......
   

baanigondu elle ellide - premada kaaNike

ಚಿತ್ರ: ಪ್ರೇಮದ ಕಾಣಿಕೆ
ಹಾಡಿದವರು: ರಾಜ್ ಕುಮಾರ್
ನಟರು: ರಾಜ್ ಕುಮಾರ್, ಆರತಿ

ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ ನಿಧಾನಿಸು ನಿಧಾನಿಸು

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ ವಿನೋದವಾಗಲಿ ಅದೇನೇ ಆಗಲಿ ಅವನೇ ಕಾರಣ....

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ ನಿರಾಸೆ ಏತಕೆ ಅದೇನೇ ಬಂದರು ಅವನ ಕಾಣಿಕೆ......