Monday, October 12, 2009

moDada oLage - payaNa

ಚಿತ್ರ: ಪಯಣ
ಗಾಯನ: ಸೋನು ನಿಗಮ್
ನಟರು: ರವಿಶಂಕರ್, ರಮನಿತು ಚೌದರಿ

ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ.....

ನಿಂತಲಿ ನಾ ನಿಲಲಾರೆ ಎಲ್ಲರು ಹೀಗನುತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೊ
ನಾನೆ ಪ್ರೀತಿ ಬಲೆಯೊಳಗೊ
ಕಾಡಿದೆ  ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ

ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ......

2 comments:

  1. hey tx much for d lyrics, that too in kannada.

    ReplyDelete
  2. ನಮಸ್ಕಾರ,
    ಮುತ್ತಿನಂತಹ ನಿಮ್ಮ ಕನ್ನಡ ನುಡಿಗಳಿಗೆ ನನ್ನ ನಮನ.

    ಕನ್ನಡ ಲಿಪಿಯಲ್ಲಿ ಈ ಹಾಡು ಇದ್ರೆ ಹಚ್ಚಿಯಲ್ಲ. .

    ಮನಸ್ಸೇ ಓ ಮನಸ್ಸೇ
    "ಚಂದ್ರ ಮುಖಿ ಪ್ರಾಣ ಸಖಿ ಸಿನಿಮಾದ್ದು".
    subbu-7899746623

    Adbhuta

    ReplyDelete