Monday, October 12, 2009

jote joteyali preeti joteyali - vamshi

ಚಿತ್ರ: ವಂಶಿ
ಗಾಯನ: ಪುನೀತ್ ರಾಜಕುಮಾರ್, ಶ್ರೇಯ ಗೋಶಲ್
ನಟರು: ಪುನೀತ್ ರಾಜಕುಮಾರ್, ನಿಕಿತ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು ಸ ಸ ರಿ ರಿ ಗ ಗ ಮ ಮ

ದಿನ ದಿನ ದಿನ ಏನಾದರು ಚಿನ್ನ ಕರಗದು ಈ ಪ್ರೇಮ
ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ ಸಹಿಸದು ಈ ಪ್ರೇಮ
ಆ ಬಾನಿಗಾದರೆ ಮಿನುಗು ತಾರೆ
ಈ ಬಾಳಿಗಾಸರೆ ನೀನೆ ಬಾರೆ
ನಾವಾಡೋ ಒಲವಿನ ಮಾತು ಕೇಳಿ
ಹಾರಾಡೋ ಗಿಳಿಗಳ ಗಾನ ಸ ಸ ರಿ ರಿ ಗ ಗ ಮ ಮ ......

ಕಣ ಕಣ ಕಣ ಹೊಸ ಹುರುಪಿನ ಚಿಲುಮೆಯು ಈ ಪ್ರೇಮ
ಮಿಣ ಮಿಣ ಮಿಣ ಹೊಸ ಬೆಳಕಿನ ಹೊಳಪಿದು ಈ ಪ್ರೇಮ
ಏಳೇಳು ಜನುಮದಾ ಜೋಡಿಯಾಗಿ
ಹೀಗೇನೆ ಬಾಳುವೆ ಪ್ರೇಮಿಯಾಗಿ
ಈ ನಮ್ಮ ಪ್ರೀತಿಯ ನೋಡಿ ನೋಡಿ
ಲೋಕವೇ ಹಾಡಿದೆ ಹಾಡು ಸ ಸ ರಿ ರಿ ಗ ಗ ಮ ಮ ......

2 comments:

  1. ನಮಸ್ಕಾರ,
    ಮುತ್ತಿನಂತಹ ನಿಮ್ಮ ಕನ್ನಡ ನುಡಿಗಳಿಗೆ ನನ್ನ ನಮನ.

    ಕನ್ನಡ ಲಿಪಿಯಲ್ಲಿ ಈ ಹಾಡು ಇದ್ರೆ ಹಚ್ಚಿಯಲ್ಲ. .

    ಮನಸ್ಸೇ ಓ ಮನಸ್ಸೇ
    "ಚಂದ್ರ ಮುಖಿ ಪ್ರಾಣ ಸಖಿ ಸಿನಿಮಾದ್ದು".
    subbu-7899746623

    ReplyDelete
  2. ನಮಸ್ಕಾರ,
    ಮುತ್ತಿನಂತಹ ನಿಮ್ಮ ಕನ್ನಡ ನುಡಿಗಳಿಗೆ ನನ್ನ ನಮನ.

    ಕನ್ನಡ ಲಿಪಿಯಲ್ಲಿ ಈ ಹಾಡು ಇದ್ರೆ ಹಚ್ಚಿಯಲ್ಲ. .

    ಮನಸ್ಸೇ ಓ ಮನಸ್ಸೇ
    "ಚಂದ್ರ ಮುಖಿ ಪ್ರಾಣ ಸಖಿ ಸಿನಿಮಾದ್ದು".
    subbu-7899746623

    ReplyDelete