Friday, October 16, 2009

namma naadu - psycho

ಚಿತ್ರ: ಸೈಕೋ
ಹಾಡಿದವರು: ರಘು ದೀಕ್ಷಿತ್ 

ನಟರು: ಧನುಶ್, ಅನಿತ

ಪ್ರೀತಿಯ ಮನಶಾಂತಿಯ ಸಿರಿಹೊನ್ನಿನ ನಾಡಿದು
ಹಸಿರು ವನಗಳ ತಂಪು ನದಿಗಳ ಸುಂದರ ಬೀಡಿದು
ಲೋಕವೇ ಒಂದಾಗುವ ಸಂಗಮ
ಭೇದವೇ ಇಲ್ಲದ ಹಿರಿತನ
ನಾಳಿನ ಹೊಸ ಆಶಾ ಕಿರಣ
ನಮ್ಮ ನಾಡು ಕರುನಾಡು ನಮ್ಮ ನಾಡು ಕರುನಾಡು

ಕಡಲಿನ ಮಲೆ ಮಡಿಲಿನ ಬಿಸಿ ಬಯಲಿನ ತವರಿದು
ಬೆವರ ಹನಿಗಳು ವಿವಿಧ ದನಿಗಳು ಎಳೆಯುವ ತೇರಿದು
ಜ್ಞಾನದ ಪರಿಕಾನದ ಹಂಬಲ ಚಿಗುರಿಗೆ ಬೇರಿನ ಬೆಂಬಲ
ಮಮತೆಯ ಸಮತೆಯ ಅಂಗಳ
ನಮ್ಮ ನಾಡು ಕರುನಾಡು ನಮ್ಮ ನಾಡು ಕರುನಾಡು

ಕನ್ನಡ ಸತ್ಯ....ನಮ್ಮ ನಾಡು
ಕನ್ನಡ ನಿತ್ಯ....ಕರುನಾಡು

eno ide - psycho

ಚಿತ್ರ: ಸೈಕೋ
ಹಾಡಿದವರು: ರಘು ದೀಕ್ಷಿತ್
ನಟರು: ಧನುಶ್, ಅನಿತ

ಏನೋ ಇದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನಿದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ
ಬಾಳಿನ ದೀಪವೆ ಇಂದು ಆರಿ ಹೋಗಿದೆ
ನನ್ನಯ ನೆರಳೆ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ ಕಲ್ಲೋಲವಾಗಿದೆ
ಕರೆಯುವ ಕೊರಳೆ ಮೌನ ತಾಳಿದೆ

ಏನಿದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ

ಓ ತನ್ನ ರಾಗವನ್ನೇ ಹಾಡು ತೊರೆದಂತೆ
ಭಾವದಲ್ಲಿ ಬರೆದ ಚಿತ್ರ ಹರಿದಂತೆ
ಕನ್ನ ಹಾಕಿ ಹೃದಯವನ್ನೇ ಕೊರೆದಂತೆ
ನನ್ನ ಶೋಕ ಗೀತೆ ನಾನೇ ಬರೆದಂತೆ
ಬರಿ ತಾಪವೇ ಪ್ರೀತಿಯ ಫಲವೇ
ಸರಿ ಉತ್ತರ ನೀಡು ಒಲವೆ.....
ಬೆಳದಿಂಗಳೇ ಮರೆಯಾಗಿದೆ ಮರೆಯಾಗಿದೆ

ಆಕಾಶವೇ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ
ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ

ಕಾಡುವಂತ ನೂರು ನೋವು ಇರುಳಲ್ಲಿ
ನಾಟಿದಂತೆ ಬಾಣ ಒಂದು ಎದೆಯಲ್ಲಿ
ನೀನೆ ಬೇಕು ಎಂಬ ನನ್ನ ಛಲದಲ್ಲಿ
ಲೂಟಿಯಾಗಿ ಹೋದೆನಲ್ಲ ಒಲವಲ್ಲಿ
ಇದು ಎಚ್ಚರವಿಲ್ಲದ ಕನಸೇ ಅಥವಾ ಇದು ಸಾವಿನ ತಿನಿಸೇ
ನಿಜ ಬಣ್ಣವೇ ಬಯಲಾಗಿದೆ ಬಯಲಾಗಿದೆ

ಆಕಾಶವೇ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ


ಬಾಳಿನ ದೀಪವೆ........   

neene beku - psycho

ಚಿತ್ರ: ಸೈಕೋ
ಹಾಡಿದವರು: ರಘು ದೀಕ್ಷಿತ್
ನಟರು: ಧನುಶ್, ಅನಿತಾ

ಈ ತನುವು ನಿನ್ನದೇ ನಿನ್ನಾಣೆ
ಈ ಮನವು ನಿನ್ನದೇ ನಿನ್ನಾಣೆ
ಈ ಒಲವು ನಿನ್ನದೇ ನಿನ್ನಾಣೆ
ಈ ಉಸಿರು ನಿನ್ನದೇ ನಿನ್ನಾಣೆ

ನೀನೇನೆ ಅಂದರು ನೀ ನನ್ನ ಕೊಂದರು
ಈ ಜೀವ ಹೋದರು ಪ್ರೇಮಿ ನೀನೆ
ನೀನೆ ಬೇಕು.....ನೀನೆ ಬೇಕು......
ನೀನಿಲ್ಲದೆ ಏನೀ ಬದುಕು
ನೀನೆ ಬೇಕು.....ನೀನೆ ಬೇಕು.....
ಈ ಬಾಳಿಗೆ ನೀನೆ ಬೆಳಕು

ಈ ತನುವು ನಿನ್ನದೇ ನನ್ನಾಣೆ
ಈ ಮನವು ನಿನ್ನದೇ ನನ್ನಾಣೆ
ಈ ಹೃದಯ ನಿನ್ನದೇ ನಿನ್ನಾಣೆ
ಈ ಜನುಮ ನಿನ್ನದೇ ನಿನ್ನಾಣೆ

ನೀ ಶಾಪ ಕೊಟ್ಟರು ನಾ ನಾಶವಾದರು
ನೂರಾರು ಜನ್ಮಕು ಪ್ರೇಮಿ ನೀನೆ
ನೀನೆ ಬೇಕು ನೀನೆ ಬೇಕು
ನೀನಿಲ್ಲದೆ ಏನೀ ಬದುಕು
ನೀನೆ ಬೇಕು ನೀನೆ ಬೇಕು
ನೀನಿಲ್ಲದೆ ಯಾಕಿ ಬದುಕು

ನಾ ನಿನ್ನನು ಮೆಚ್ಚಿದ ಕೂಡಲೆ ಈ ಪ್ರೇಮವು ಮೂಡಿದೆ
ನೀ ನನ್ನನು ಪ್ರೀತಿಯ ಮಾಡದೆ ಈ ಜೀವವು ನಿಲ್ಲದೆ
ಈ ನೆತ್ತರ ಕಣಕಣದೆ ನೀ ಬೆರೆತು ಹೋಗಿಹೆ
ನನ್ನಾಣೆಗೂ ಎಂದಿಗೂ ಪ್ರೇಮಿ ನೀನೆ
ನೀನೆ ಬೇಕು ನೀನೆ ಬೇಕು ನೀನಿಲ್ಲದೆ ಏನೀ ಬದುಕು
ನೀನೆ  ಬೇಕು ನೀನೆ ಬೇಕು ನೀನಿಲ್ಲದೆ ಏನೀ ಬದುಕು

beladingalanthe minu minuguta - psycho

ಚಿತ್ರ: ಸೈಕೋ
ಹಾಡಿದವರು: ಹರಿಚರಣ್, ಸೈಂಧವಿ
ನಟರು: ಧನುಶ್, ಅನಿತಾ

ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು
ಅನುರಾಗದಲ್ಲಿ ಅಲೆ ಅಲೆಯುತ ನಸು ನಾಚಿ ನಿಂದಿರಲು ನೀನು
ಮರುಳಾದೆ ದಿವ್ಯ ಸಖಿ ನಿನಗೆ ಪ್ರಣಾಮ
ಅಪರೂಪ ರೂಪಸಿಯೇ ನಿನಗೆ ಪ್ರಣಾಮ

ತಂಗಾಳಿಯಂತೆ ಸುಳಿ ಸುಳಿಯುತ ಆವರಿಸಿಕೊಂಡಿರಲು ನೀನು
ಕುಡಿನೋಟದಲ್ಲೇ ನುಡಿ ನುಡಿಯುತ ನೇವರಿಸಿ ನಿಂದಿರಲು ನೀನು
ಮನಸೋತೆ ಮೊಹಿತನೆ ನಿನಗೆ ಪ್ರಣಾಮ
ಹಿತವಾದ ಸ್ನೇಹಿತನೇ ನಿನಗೆ ಪ್ರಣಾಮ

ಕನಸಲ್ಲೂ ಹುಚ್ಚನಂತೆ ನಿನಗಾಗಿ ಓಡುವೆ
ಮೈಮರೆತು ಸಂತೆಯಲ್ಲೂ ನಿನ್ನನ್ನೇ ಕೂಗುವೆ
ಒರಗಿರಲು ನಿನ್ನ ಮಡಿಲಲಿ 
ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ
ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಝೀಕುವೆ
ನೀನಿರಲು ನನ್ನ ಕತೆಯಲಿ
ನಾನಿರುವೆ ನಿನ್ನ ಜೊತೆಯಲಿ.......

ಕಣ್ತುಂಬ ನಿನ್ನ ಅಂದ ಸವಿಯುತ್ತ ಕೂರಲೆ
ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೇ
ನೀನಿರಲು ನನ್ನ ತೋಳಲಿ
ನಾನೆಂದೂ ನೋಡದಂತ ಬೆಳಕೊಂದು ಮೂಡಿದೆ
ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ
ಕೈಯಿರಲು ನಿನ್ನ ಕೈಯಲಿ
ನಾನಿರುವೆ ನಿನ್ನ ಬಾಳಲಿ.....  

koorakukkralli kere - nenapirali

ಚಿತ್ರ: ನೆನಪಿರಲಿ
ಹಾಡಿದವರು: ಎಸ್ ಪಿ ಬಾಲು
ನಟರು: ಪ್ರೇಮ್, ವಿದ್ಯಾ

ಅರೆ ಯಾರ್ರಿ ಹೆದರ್ಕೊಳ್ಳೋರು ಬೆದರ್ಕೊಳ್ಳೋರು
ಪೇಚಾಡೋರು ಪರದಾಡೋರು
ಮರಗಳ್ ಮರೆನಲ್ ಮಾತಾಡೋರು
morning show ನಲ್ ಪಿಸುಗುಟ್ಟೋರು
ಮೈಸೂರಂತ ಜಿಲ್ಲೇಲಿದ್ದು ಕಣ್ಣಿಗ್ ಬೇಕಾದ್ ನೋಟ ಇದ್ದು
ಹಳೆ ರಾಜರು ಅಪ್ಪಣೆ ಇದ್ದು
ಪ್ರೀತಿ ಮಾಡೋಕ್ ಜಾಗ್ಗಳಿದ್ದು
ಕದ್ದು ಮುಚ್ಚಿ ಓಡಾಡ್ತಿರಲ್ರಿ ಬನ್ರಿ ನೋಡ್ರಿ ನಾನ್ ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ

ಕೂರಕ್ ಕುಕ್ಕ್ರಳ್ಳಿ ಕೆರೆ..... ವಾ ವಾ
ತೇಲ  ಕಾರಂಜಿ ಕೆರೆ .....ವಾ ವಾ
ಕೂರಕ್ ಕುಕ್ಕ್ರಳ್ಳಿ ಕೆರೆ ತೇಲ ಕಾರಂಜಿ ಕೆರೆ ಲವ್ವಿಗೆ ಈ ಲವ್ವಿಗೆ
ಚಾಮುಂಡಿ ಬೆಟ್ಟ ಇದೆ ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಮ್ ಲವ್ವಿಗೆ
ಈ ಭಯ ಬಿಸಾಕಿ......ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬಾಕಿ.....ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

ಬಲ್ಮುರಿಲಿ ಪೂಜೆ ನೆಪ....ವಾ ವಾ
ಎಡ್ಮುರಿಲಿ ಜಪ ತಪ.....ವಾ ವಾ
ಬಲ್ಮುರಿಲಿ ಪೂಜೆ ನೆಪ ಎಡ್ಮುರಿಲಿ ಜಪ ತಪ ಲವ್ವಿಗೆ ನಿರ್ವಿಘ್ನ ಲವ್ವಿಗೆ
ನಾರ್ತಿನಲ್ಲಿ ಶ್ರೀರಂಗ್ ಪಟ್ನ ಸೌತಿನಲ್ಲಿ ನಂಜನ್ಗೂಡು ಪೂಜೆಗೆ ಲವ್ ಪೂಜೆಗೆ
ಈ ಭಯ ಬಿಸಾಕಿ......ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬಾಕಿ.....ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

ಗಲಾಟೆನೇ ಇಲ್ಲ ಬನ್ರಿ ಗಂಗೋತ್ರಿಯಲ್ಲಿ
ಮನಸು ಬಿಚ್ ಕೊಳ್ರಿ ಮರ ಮರ ಮರದ ಮರೇಲಿ
ಅರಮನೇಲಿ ಅಡ್ಡಾಡುತ ಮೂಡು ತೊಗೊಳ್ರಿ
ರಾಜನ್ ಥರಾನೆ ಲವ್ವಲ್ ದರ್ಬಾರ್ ಮಾಡ್ಬಿಡ್ರಿ

ಎ ರಂಗನತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು
ಮುಡುಕು ತೊರೇಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು
ಕಾಳಿದಾಸನೆ ಇಲ್ ರಸ್ತೆ ಆಗವ್ನೆ
ಪ್ರೀತಿ ಮಾಡೋರ್ಗೆ ಸರಿ ದಾರಿ ತೋರ್ ತಾನೇ

ಕೆ ಆರ್ ಎಸ್ ಲಿ ಕೆಫೆ ಮಾಡಿ ಬ್ಲಫ್ಫಿನಲ್ಲಿ ಬಫೆ ಮಾಡಿ ಲವ್ವಿಗೆ ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್ ಇಲ್ದಿದ್ರೆ ಒಂಟಿ ಕೊಪ್ಪಲ್ ಲವ್ವಿಗೆ ಈ ಲವ್ವಿಗೆ
ಈ ಭಯ.............

ಜಾತಿ ಕೆಟ್ರು ಸುಖ ಪಡ್ಬೇಕ್ ಪ್ರೀತಿ ಮಾಡಮ್ಮ
ನಾಳೆ ಆಗೋದು ಇಂದೇ ಆಗೇ ಹೋಗ್ಲಮ್ಮ
ಕದ್ದು ಮುಚ್ಚಿ ಪ್ರೀತಿ ಮಾಡೋ ಕಳ್ಳ ಲವ್ವಮ್ಮ
ಸತ್ಯ ಹೇಳಮ್ಮ ನಿಜವಾದ್ ಪ್ರೀತಿ ಮಾಡಮ್ಮ

ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ ಕಣಮ್ಮ
ಮನುಜ ಮತ ವಿಶ್ವ ಪಥ ಅಂತ ಹೇಳಮ್ಮ
ತೀರ್ಥ ಹಳ್ಳಿಲಿ ಕುವೆಂಪು ಹುಟ್ಟಿದ್ರು
ವಿಶ್ವ ಪ್ರೇಮನ ಮೈಸೂರ್ಗೆ ತಂದ್ಕೊಟ್ರು

ಮೈಸೂರು ಕೂಲಾಗಿದೆ ಬೃಂದಾವನ ಗ್ರೀನಾಗಿದೆ ಲವ್ವಿಗೆ ಸ್ವೀಟ್ ಲವ್ವಿಗೆ
ನರಸಿಂಹಸ್ವಾಮಿ ಪದ್ಯ ಇದೆ ಅನಂತ್ ಸ್ವಾಮಿ ವಾದ್ಯ ಇದೆ ಸಾಂಗಿಗೆ ಲವ್ ಸಾಂಗಿಗೆ
ಈ ಭಯ ಬಿಸಾಕಿ.........

draupadi - nenapirali

ಚಿತ್ರ: ನೆನಪಿರಲಿ
ಹಾಡಿದವರು: ಸೌಮ್ಯ ರಾವ್, ಅನೂಪ್, ಅನುಪಮ
ನಟರು: ಪ್ರೇಮ್, ವಿದ್ಯಾ, ನವೀನ್ ಕೃಷ್ಣ, ವರ್ಷ

ದ್ರೌಪದಿ ದ್ರೌಪದಿ ಎಂದಿನದೆ ಈ ಕದನ
ಷಟ್ಪದಿ ಚೌಪದಿ ಯಾವುದರಲೀ ಈ ಕವನ  
ಮನಸೆ ಮಹಾ ಮರ್ಕಟ
ಆಯ್ಕೆ ಮಹಾ ಸಂಕಟ
ಚಿತ್ತ ಮಹಾ ಚಂಚಲ
ಆಸೆ ತಿಮಿಂಗಿಲ 

ಮಳೆಗೆ ಮನೆ ಮಣ್ಣಿನೊಳಗೆ
ಮಳೆ ಮನಸು ಇದೆ ಗಾಳಿಯೊಳಗೆ
ಸುಖದ ಬಹುಮಾನ ಓ ಚಿತ್ತ ಕೊಡುವಂತ
ಪಂಚ ಭೂತಗಳ ಜರಿವುದೆಂತೋ
ಪೂಜೆಗೆ ಹೂಗಳನು ಕಟ್ಟೋ ಕೈಗಳಿಗೆ
ಗಂಧ ಸೋಕಿದರೆ ಜರಿವುದೆಂತೋ

ಮನಸೆ ಮಹಾ ಮರ್ಕಟ
ಸನಿಹ ಮಹಾ ಪ್ರೇರಕ
ಚಿತ್ತ ಮಹಾ ಚಂಚಲ
ಮನ್ಮಥ ಸಮಯ ಸಾಧಕ

ಇಂದು ಗೆಲ್ಲು ಇಂದ್ರಿಯಗಳ
ಕೊಲ್ಲು ಅರಿಷಡ್ವರ್ಗಗಳ
ಎಳೆಯ ಬಿಸಿಲೊಳಗೆ ಕುಣಿವ ತನುವೊಳಗೆ
ಕಹಿಯ ವಿಷಘಳಿಗೆ ತರುವುದೆಂತೋ
ಕಣ್ಣು ಮುಚ್ಚಿದರು ಕಾಣೋ ಸ್ವರ್ಗವನು
ಸವಿಯೋ ಹೆಣ್ಣೆದೆಯ ಜರಿವುದೆಂತೋ

ದ್ರೌಪದಿ........

ಬಯಕೆ ಬೆಂಕಿ ಬಲೆಯಾಗಿದೆ
ಭ್ರಮರ ನಿನ್ನ ನೋಡಬೇಕಿದೆ
ಹೂವು ಹಾರಲಾರದು ಹಾಡಿ ಕೂಗಲಾರದು
ಅರಳದಿರಲಾರದು ಬೆರೆವುದೆಂತೋ
ಪ್ರಥಮ ಅನುಭವದ ಮಧುರ ನೆನಪುಗಳ
ಸುರಿದು ಹೋದವನ ಮರೆವುದೆಂತೋ

ಮನಸೆ ಮಹಾ ಮರ್ಕಟ
ವಿರಹ ಮಹಾ ದುಶ್ಚಟ
ಚಿತ್ತ ಮಹಾ ಚಂಚಲ
ತಿಳಿಯೋ ಹೆಣ್ಣ ಹಂಬಲ

ದ್ರೌಪದಿ....... 

ajanta ellora - nenapirali (amazing picturisation)

ಚಿತ್ರ: ನೆನಪಿರಲಿ
ಹಾಡಿದವರು: ವಿಜಯ್ ಏಸುದಾಸ್
ನಟರು: ಪ್ರೇಮ್, ವರ್ಷ

ಅಜಂತ ಎಲ್ಲೋರ ಚಿತ್ತಾರ ಶಿಲೆಯಲ್ಲಿ
ಅದೆಲ್ಲ ನಾ ಕಂಡೆ ಅದೆಲ್ಲ ನಾ ಕಂಡೆ
ಈ ತಾಜಾ ತರುಣಿಯಲ್ಲಿ ಈ ತಾಜಾ ತನುವಿನಲ್ಲಿ

ಬೇಲೂರ ಬಾಲೇರ ಭಾರ ಕಂಬಗಳಲ್ಲಿ
ಚೆಲುವಿನ ಭಾರಾನೋ ಚೆಲುವಿನ ಭಾರಾನೋ
ಈ ತಾಜಾ ತರುಣಿಯಲ್ಲಿ ಸೊಂಪಾದ ಪಾದಗಳಲ್ಲಿ

ಮಂದವಾಗಿ ಬಳುಕುವಂಥ ನಾರಿ ಇವಳ
ಅಂದ ನೋಡ ನಿಂತಾಗ ಚಂದ ನೋಡ ನಿಂತಾಗ
ಯಾರೋ ನೀನು ಎಂದು ಕೇಳುತಾವೆ
ಇವಳ ಪೊಗರಿನ ಹೃದಯ ಪಾಲಕಿಯರು
ನಾಟ್ಯದಂತೆ ನಡೆಯುವಾಗ ನಡೆಯುವಾಗ
ಅತ್ತಲಾಡಿ ಇತ್ತಲಾಡಿ ಇತ್ತಲಾಡಿ ಅತ್ತಲಾಡಿ
ಕೀಲು ಕೊಟ್ಟ ಕುದುರೆಯಂತಾಯಿತಲ್ಲ
ನನ್ನೀ ಸುಂದರಿ ಸೊಂಟ ಪೀಠ ಸೊಂಟ ಪೀಠ

ಸೊಗ್ಗುಂಟು....ಸಿಗ್ಗುಂಟು
ಸೊಗ್ಗುಂಟು ಸಿಗ್ಗುಂಟು ಈ ಸಜೀವ ಬೊಂಬೆಯಲ್ಲಿ
ಅಣುಕುಂಟು ದೊಣುಕುಂಟು
ಈ ತಾಜಾ ತರುಣಿಯಲ್ಲಿ ಈ ನಾರಿ ನಡುವಿನಲ್ಲಿ  

ಕಣ್ಣಿನಲ್ಲೇ ಕಣ್ಣನಿಟ್ಟು ನೋಡಿದಾಗ
ಬೆದರುತಾಳೆ ಬೆದರುತಾಳೆ ಬೆದರುಗೊಂಬೆ ಆಗುತಾಳೆ
ಮಾತು ಬೇಡ ಮುತ್ತು ನೀಡು ಮುತ್ತು ನೀಡು
ಎಂದರಿವಳು ಅದರುತಾಳೆ ಅಂತದುಂಟ ಅನ್ನತಾಳೆ
ಅಪ್ಪಿಕೊಂಡರೆ ಬಳ್ಳಿಯಂತೆ ಬಳ್ಳಿಯಂತೆ
ಮೈಯನೆಲ್ಲಾ ಹಬ್ಬುತಾಳೆ ಉಸಿರುಗಟ್ಟಿ ಉಬ್ಬುತಾಳೆ
ಉಸಿರಿನಲ್ಲಿ ಮಾತನಾಡಿ ಮಾತನಾಡಿ
ತುಟಿಯ ತಂಪು ಮಾಡಿದಾಗ ತಣಿಯುತಾಳೆ ಮಣಿಯುತಾಳೆ

ಎಲ್ಲಕ್ಕೂ.....ಆಶ್ಚರ್ಯ.....
ಎಲ್ಲಕ್ಕೂ ಆಶ್ಚರ್ಯ ಪಡುತಾಳೆ ಕ್ಷಣದಲ್ಲಿ
ಆಶ್ಚರ್ಯ ತುಳುಕೈತೆ ಆಶ್ಚರ್ಯ ತುಳುಕೈತೆ
ಈ ತಾಜಾ ತರುಣಿಯಲ್ಲಿ ಈ ಕಾರಂಜಿ ಕಣ್ಣಿನಲ್ಲಿ    

ನಾನೊಂದು titanic ಬೋಟಾದೆ ಸುಖದಲ್ಲಿ
ಒಡೆದೋದೆ ಮುಳುಗೋದೆ ಒಡೆದೋದೆ ಮುಳುಗೋದೆ
ಈ ತಾಜಾ ತರುಣಿಯಲ್ಲಿ ಈ ಕನ್ಯಾ ಕಡಲಿನಲ್ಲಿ

ಲ ಲ ಲ ......

he beLadingale - nenapirali

ಚಿತ್ರ: ನೆನಪಿರಲಿ
ಹಾಡಿದವರು: hemanth, divya raaghavan
ನಟರು: ಪ್ರೇಮ್, ವರ್ಷ

ಹೇ ಬೆಳದಿಂಗಳೇ ಹಿಂಬಾಲಿಸದಿರು
ಪ್ರೀತಿಯ ಪಯಣಕೆ ಒತ್ತಾಯಿಸದಿರು

ಏನು ಕಾರಣ ಕೇಳಬಹುದ - ನನ್ನ ಮನಸಿಗೆ ಬಿಡುವಿಲ್ಲ
ಹೃದಯವಂತೂ ಇದೆಯಲ್ಲ - ಅದಕೆ ಪ್ರೀತಿಸೋ ಬಲವಿಲ್ಲ
ಪ್ರೀತಿಗೆ ಒಪ್ಪಿತ್ತು ನಿಜ ತಾನೇ - yes yes yes!! I am in love.....
ಮಾತಿಗೆ ತಪ್ಪೋದು ದ್ರೋಹ ತಾನೇ - yes yes yes!! I know that

ನಾವಾಗಲಿ ನೀವಾಗಲಿ ಗೆಳೆಯರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... because........

ಇದು ಹೃದಯಗಳ ವಿಷಯ, ಈ ವಿಷಯ ವಿಷ ವಿಷಯ

ಹೇ ಬೆಳದಿಂಗಳೇ ಹೃದಯ ಸುಡದಿರು
ನಿನಗೆ ನೀನೆ ಮೋಸ ಹೋಗದಿರು
ಪ್ರೀತಿಯಲ್ಲಿ ಕ್ಷಮೆ ಇರಲಿ - ಕ್ಷಮಿಸಿ ಏನು ಸಾಧಿಸಲಿ?
ನನ್ನ ನೆನಪೆ ಬರದಿರಲಿ - ಅದರ ಬದಲು ಸಾವಿರಲಿ
ಪ್ರೀತಿಯ ದ್ರೋಹಿ ನಾನೀಗ - hey hey hey hey you fool
ತ್ಯಾಗದ ಸ್ವಾರ್ಥಿ ನಾನೀಗ - hey hey hey you fraud

ನಾವಾಗಲಿ ನೀವಾಗಲಿ ಗೆಳೆಯರಾಗಲಿ ಬಳಗವಾಗಲಿ

ಗುರುಗಳಾಗಲಿ ಋಷಿಗಳಾಗಲಿ ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... because........

ಇದು ಹೃದಯಗಳ ವಿಷಯ, ಈ ವಿಷಯ ವಿಷ ವಿಷಯ
 

nenapirali - nenapirali

ಚಿತ್ರ: ನೆನಪಿರಲಿ
ಹಾಡಿದವರು: ಚಿತ್ರ, ಚೇತನ್
ನಟರು: ಪ್ರೇಮ್, ವರ್ಷ, ವಿದ್ಯಾ

ಹೇ ಜೀವಗಳ ಒಲವೆ
ಹೇ ಭಾವಗಳ ವನವೇ
ನೀವಿರದೆ ನಾನಿಲ್ಲ
ನಾನಿರದೇ ನೀವಿಲ್ಲ
ಪ್ರೀತಿ ನನ್ನ ಹೆಸರು....ನೆನಪಿರಲಿ ನೆನಪಿರಲಿ....

ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ
ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ ಒಂಟಿ ಪ್ರೇಮಿಯಲ್ಲ
ಹೂವು ದುಂಬಿ ಹಾಡು ಅದು..... ನೆನಪಿರಲಿ ನೆನಪಿರಲಿ.....

ಪ್ರೀತಿ ಪಾಠವಲ್ಲ, ಪ್ರಣಯದೂಟವಲ್ಲ
ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ ಬರಿ ಮುತ್ತು ಅಲ್ಲ
ಕಾಣಿಸದ ಕಾವ್ಯ ಅದು....ನೆನಪಿರಲಿ ನೆನಪಿರಲಿ.....

ಪ್ರಾಯದ ಮೇಲೆ ದಿಬ್ಬಣ ಹೊರಟು ಜೀವನವ ಸುತ್ತಿ
ಕಹಿಯನ್ನೆಲ್ಲಾ ಸವಿಯುವುದನ್ನು ಕಲಿಸುವುದೇ ಪ್ರೀತಿ
ಮೋರೆಗಳನ್ನು ಕೋರೆಗಳನ್ನು ಮನ್ನಿಸಿ ಮುದ್ದಿಸಿ
ಎಲ್ಲ ಸುಂದರವೆಂದು ನೋಡೋ ಒಳಗನ್ಣೆ ಪ್ರೀತಿ
ನಿದಿರೆಯಾದರು ಅಲ್ಲಿಲ್ಲಿಲ್ಲ ಪ್ರೀತಿ ಇಲ್ಲದ ಅಣುಕಣವಿಲ್ಲ
ಪ್ರೀತಿ ಪಾಠವಲ್ಲ ಪ್ರಣಯದೂಟವಲ್ಲ.......

love is soul but not one
love is one but not alone
love is God but not a stone

ಹತ್ತಿರದಲ್ಲಿ ನಿಂತರೆ ಅಲ್ಲಿ ಬಳ್ಳಿಗೆ ಸಹವಾಸ
ರೆಪ್ಪೆಯೆ ತೆರೆದ ಕಣ್ಣುಗಳೆಂದೂ ಮಾಡವು ಉಪವಾಸ
ಬಯಸುವುದನ್ನೇ ತಪ್ಪು ಎಂದರೆ ಮನಸಿಗೆ ಅವಮಾನ
ಕ್ಷಣಿಕ ಸುಖಕ್ಕೆ ಸೋಲದಿದ್ದರೆ ಮೋಹಕೂ ಅಪಮಾನ :-)))
ಸ್ನೇಹಕ್ಕೆ ಎಂದು ಪ್ರೀತಿಯೇ ಗೆಳೆಯ
ಪ್ರೀತಿಗೆ ಎಂದು ಸತ್ಯವೇ ಹೃದಯ

ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ......

I am love, love is life
I am love, love is feel
I am love, love is beauty

ನಾನು ಮೋಹವಲ್ಲ ವ್ಯಾಮೋಹವಲ್ಲ
ಸುಖದ ಬಲೆಯಲಿ ಅಲೆಯುವ ಅಶ್ವವಲ್ಲ ಮಾಯಾ ಜಿಂಕೆಯಲ್ಲ
ಆಸೆಯೆಂದು ಪ್ರೀತಿಯಲ್ಲ

love is soul but not one

love is one but not alone
love is God but not a stone

Thursday, October 15, 2009

baa baaro baaro raNadheera - raNadheera

ಚಿತ್ರ: ರಣಧೀರ
ಹಾಡಿದವರು: ಎಸ್ ಪಿ ಬಾಲು, ಎಸ್ ಜಾನಕಿ
ನಟರು: ರವಿಚಂದ್ರನ್, ಖುಶ್ಬೂ

ಸ ರಿ ಗ ಮ ಪ....

ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ

ಓ ಹೂವಂತೆ ಪ್ರೀತಿ ಹೂವಂತೆ
ನೋಡಲೇನು ಇದು ಹೂವು ಬಿರಿದರೆ ಕೊಲುವ ಹಾವು
ಇತಿಹಾಸ ಇದರ ಹವ್ಯಾಸ
ಅಗ್ನಿಯೊಡನೆ ಸಹವಾಸ ಸಾವಿನ ಜೊತೆಗೆ ಸರಸ
ನಲಿದು ನಲಿಸುತ್ತಾ ತಂಪನೆರೆಯುತ್ತ
ಜಗವ ಕಾಯುತ್ತಲಿದೆ ಪ್ರೀತಿ
ಸುತ್ತಿ ನಮ ಸುತ್ತ ಎಲ್ಲ ಕುಣಿಸುತ್ತಾ
ತಾನು ನೋಡುತ್ತಲಿದೆ ಪ್ರೀತಿ
ಎಲ್ಲ ಅದರ ಕೈಲಿ ನಾವೆಲ್ಲಾ ನೆಪವು ಇಲ್ಲಿ
ನ್ಯಾಯ ಕೇಳುವ ಹೇಳಿ ನಡೆಸುವ ಶಕ್ತಿಯೊಂದೇ ಪ್ರೀತಿ
ಬಾ ಎಂದರೆ ಬಂದಿಳಿ ಯುವಪ್ರೀತಿ
ಆ ಜೀವಿಯ ದಿಗ್ವಿಜಯದ ರೀತಿ  

ಹೇ....ಯೌವನವೇ ನೀನು ಭೀಕರವೇ
ನೀನು ಇರುವ ದೆಸೆ ಇಂದ ಈ ಘೋರ ನೋಡು ಕಣ್ಣಿಂದ
ಹೇ....ಜೀವನವೇ ನಿನಗೆ ಸಮ್ಮತವೇ
ಬಯಸಿದ ಸ್ವರ್ಗ ಎಲ್ಲಿ ನೀ ನಡೆಸಿದೆ ನರಕದಲ್ಲಿ
ಕಾಮ ಕ್ರೋಧ ಮದ ಲೋಬ ಮೋಹ ಮಾತ್ಸರ್ಯ ತುಂಬಿರುವ ಜಗದಲ್ಲಿ
ಜೀವ ಕಾರಣದ ಬಾಳ ತೋರಣದ ಪ್ರೀತಿಗೇನು ಬೆಲೆ ಸಿಗದಿಲ್ಲಿ
ಕರುಣೆಯಿರದ ವಿಧಿಯೇ ನಿನ್ನ ನೀತಿ ಎಲ್ಲಿ ಸರಿಯೇ
ಹಣೆಯ ಬರಹವಿದು ನಿಜವೇ ಇರಬಹುದು ಸಾವೇ ನಿನ್ನ ಗುರಿಯೇ.....

ಬಾ ಬಾರೋ ಬಾರೋ ರಣಧೀರ.....

Wednesday, October 14, 2009

tangaaLiyalli naanu - januma janumada anubandha

ಚಿತ್ರ: ಜನುಮ ಜನುಮದ ಅನುಬಂಧ
ಹಾಡಿದವರು: ಎಸ್ ಜಾನಕಿ
ನಟರು: ಅನಂತ್ ನಾಗ್, ಆರತಿ

ಓ......

ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯ.........ಓ ಇನಿಯ......
ನನ್ನನ್ನು ಸೇರಲು ಬಾ ಬಾ
ನನ್ನನ್ನು ಸೇರಲು.....

ನಿನ್ನ ಎಲ್ಲೂ ಕಾಣದೆ ಹೋಗಿ
ನನ್ನ ಜೀವ ಕೂಗಿ ಕೂಗಿ
ಏಕಾಂಗಿಯಾಗಿ ನಾನು ನೊಂದು ಹೋದೆ
ಹೀಗೇಕೆ ದೂರ ಓಡಿದೆ
ಓ ಇನಿಯ......ನನ್ನನ್ನು ಸೇರಲು ಬಾ ಬಾ  
ನನ್ನನ್ನು ಸೇರಲು.....

ಓ....

ಏತಕೆ ಹೀಗೆ ಅಲೆಯುತಲಿರುವೆ
ಯಾರನು ಹೀಗೆ ಹುಡುಕುತಲಿರುವೆ
ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು
ನೀ ಕಾಣೆ ಏನು ನನ್ನನ್ನು
ಓ ಇನಿಯ.....ನನ್ನನ್ನು ಸೇರಲು ಬಾ ಬಾ
ನನ್ನನ್ನು ಸೇರಲು....

ellaaru maaDuvudu hottegaagi

ರಚನೆ: ಕನಕ ದಾಸರು
ಗಾಯನ: ರಾಜ್ ಕುಮಾರ್

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ 
ಬಿಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು ಕೂಲಿಗಳ ಮಾಡುವುದು ಹೊಟ್ಟೆಗಾಗಿ
ನಾಲ್ಕು ವೇದ ಪುರಾಣ ಪಂಚಾಗ ಹೇಳಿಕೊಂಡು ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ....

ಬಡಿದು ಬಡಿದು ಕಬ್ಬಿಣವ ಕಾಸಿ ತೂಪಾಕಿ ಮಾಡಿ ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ
ಚಂಡ ಭಂಡರೆಲ್ಲ ಮುಂದೆ ಕತ್ತಿ ಹರಿಗೆಯ ಪಿಡಿದು ಖಂಡ ತುಂಡ ಮಾಡುವುದು ಹೊಟ್ಟೆಗಾಗಿ

ದೊಡ್ಡ ದೊಡ್ಡ ಕುದುರೆ ಏರಿ ನೆಜೆ ಹೊತ್ತು ರಾಹುತನಾಗಿ ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ
ಕುಂಟೆ ಪೂರಿಗೆಯಿಂದ ಹೆಣತೆ ಮಣ್ಣ ಹದ ಮಾಡಿ ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ

ಕೆಟ್ಟತನದಿಂದ ಕಳ್ಳತನವನ್ನೇ ಮಾಡಿ ಕಟ್ಟಿ ಹೊಡಿಸಿಕೊಳ್ಳುವುದು ಹೊಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮುಂಡ ಬೈರಾಗಿ ನಾನಾ ವೇಷ ಬೊಂಬುವುದು ಹೊಟ್ಟೆಗಾಗಿ
ಉನ್ನತ ಕಾಗಿನೆಲೆ ಆದಿಕೇಶವನ ಅನುದಿನ ನೆನೆವುದು ಭಕ್ತಿಗಾಗಿ ಪರ ಮುಕ್ತಿಗಾಗಿ....

ನಾವೆಲ್ಲಾರು ಮಾಡುವುದು    

ravivarmana - sose tanda soubhagya

ಚಿತ್ರ: ಸೊಸೆ ತಂದ ಸೌಭಾಗ್ಯ
ಹಾಡಿದವರು: ಪಿ ಬಿ ಶ್ರೀನಿವಾಸ್
ನಟರು: ವಿಷ್ಣುವರ್ಧನ್, ಮಂಜುಳ, ರಾಜೇಶ್, ವಿಜಯ ಲಲಿತ

ರವಿವರ್ಮನ ಕುಂಚದ ಕಲೆ ಭಲೆ ಸಾಕಾರವು
ಕವಿ ಕಲ್ಪನೆ ಕಾಣುವ ಚೆಲುವಿನ ಜಾಲವೋ 

ಉಯ್ಯಾಲೆಯ ಆಡಿ ನಲಿವ ರೂಪಸಿ
ಸುರಲೋಕದಿಂದ ಇಳಿದು ಬಂದ ನಿಜ ಊರ್ವಶಿ....ಆ.....
ನನ್ನೊಲವಿನ ಪ್ರೇಯಸಿ.....

ಹೂರಾಶಿಯ ನಡುವೆ ನಗುವ ಕೋಮಲೆ
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೆ.....ಆ.....
ಚಿರಯೌವನ ನಿನ್ನಲೆ......

ellinda aarambhavo - appu

ಚಿತ್ರ: ಅಪ್ಪು
ಹಾಡಿದವರು: ಉದಿತ್ ನಾರಾಯಣ್, ಚಿತ್ರ
ನಟರು: ಪುನೀತ್, ರಕ್ಷಿತ

ಎಲ್ಲಿಂದ ಆರಂಭವೋ ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ.....i love you....hey i love you

ಬಾ ಎಂದಿತು ಈ ಯೌವನ, ಮಾತಾಡಲು ರೋಮಾಂಚನ
ರೋಮಾಂಚನ ಮಾತಾಡಲು, ಮೈಯೆಲ್ಲವೂ ಆಲಾಪನ
ಈ ಕಲರವ ಈ ಅನುಭವ ಹೇಗಾಯ್ತೋ ಏನೋ ಕಾಣೆ ನಾ....

ಬೇಲೂರಿನ ಆ ಗೊಂಬೆಗೂ, ಮಳೆ ಸುರಿಸುವ ಆಗುಂಬೆಗು
ನಡುವಲ್ಲಿದೆ ಈ ಪ್ರೇಮವು, ಪ್ರತಿ ನಿಮಿಷವು ಹೊಸ ರಾಗವು
ಈ ಸಂಗಮ ಈ ಸಂಭ್ರಮ ಹೇಗಾಯ್ತೋ ಏನೋ ಕಾಣೆ ನಾ.......

Tuesday, October 13, 2009

ee paapi duniya - duniya

ಚಿತ್ರ: ದುನಿಯ

ಈ ಪಾಪಿ ದುನಿಯ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ
ಓ ಗೆಳತಿ ನೀನುನೂ ಉಳಿದಿಲ್ಲ
 ಜೊತೇಲಿ ನಡೆದ ಮಾತೆ ಇರದ ಮುಸ್ಸಂಜೆ ಮರೆತಿಲ್ಲ
ಓ ಹುಡುಗಿ ಆ ನೆನಪು ಅಳಿಯೊಲ್ಲ
ಮುಂಜಾನೆವರೆಗೂ ಸೋನೆ ಸುರಿದ ದಿನಾಂಕ ಗುರುತಿಡುವೆ
ಮಳೇಲಿ ನೆನೆದದ್ದು ನೆನಪಿಡುವೆ
ವಿಶ್ವಾಸವಿರದ ದ್ರೋಹಿ ದುನಿಯ ನೀನುನೂ ಹಾಗಿನ
ಓ ಗೆಳತಿ ನಿನ್ನಲ್ಲು ವಿಷವೇನ   
  

nodayya kwaate lingave - duniya

ಚಿತ್ರ: ದುನಿಯಾ
ಗಾಯನ: ಎಂ ಡಿ ಪಲ್ಲವಿ
ನಟರು: ವಿಜಯ್, ರಶ್ಮಿ

ಅಮ್ಮಣ್ಣಿ ಅವ್ನತ್ರ ಇರೋದ್ ಯಾವ್ದೂ  ಔನ್ದಲ್ಲ...ಎಲ್ಲ ಅವ್ರಪ್ಪ ಕೊಡ್ಸಿರ್ತಾನೆ...ಬೇಕಾದ್ರೆ
ಹೋಗ್ ಕೇಳು...ಔನು ಹಾಕೊಂಡಿರೋ ಚಡ್ಡಿ ಕೂಡ ಅವ್ನಪ್ಪಾನೆ ಕೊಡ್ಸಿರೋದು.
ನಾವು ಅಂಗಲ್ಲ....ಅಡಿ ಇಂದ ಮುಡಿವರ್ಗು ನಮ್ ಸಂಪಾದ್ನೇಲಿ ಬದುಕ್ತಾ ಇರೋರು
ಅದ್ಯಾತ್ರದ್ದೋ ನೆಕ್ತಾ ಇದ್ಯಲ್ಲ ನೆಕ್ಬುಟ್ಟು ಓಗ್ ದಬ್ಬಾಕು......

ನೋಡಯ್ಯ ಕ್ವಾಟೆ ಲಿಂಗವೇ
ಬೆಳ್ಳಕ್ಕಿ ಜೋಡಿ ಕುಂತವೆ
ಅಂಗೈ ಅಷ್ಟಗಲ ಗೂಡು
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೆ....

ಪಾಯಯಿಲ್ಲ ಗ್ವಾಡೆಯಿಲ್ಲ ನೋಡು ಇವರ ಅರಮನೆ
ರಾಜ ರಾಣಿ ಆಳು ಕಾಳು ಎಲ್ಲಾನೂ ಇವರೇನೆ
ಸ್ವಾನೆ ಮಳ್ಯೋ ಉರಿಯೋ ಬಿಸಿಲೋ ಏನೇ ಬಂದ್ರು ಜಗ್ಗಲ್ಲ
ಅವಳಿಗೆ ಇವನೇ ಕೊಡೆಯಾಗವ್ನೆ ಇವ್ರ್ ಬಿಟ್ ಇವ್ರ್ಗೆಯಾರಿಲ್ಲ

ಪೆದ್ದು ಹೈದ ಮನ್ಸು ಸುದ್ದ ಸುಳ್ಳು ಹೇಳೋ ಕುಲವಲ್ಲ
ಸುಣ್ಣದ ನೀರ್ಗು ಗೋವಿನ ಹಾಲ್ಗು ಯತ್ವಾಸ ಗೊತ್ತಿಲ್ಲ
ಅ ಆ ಇ ಈ ಓದಿದೋಳು ಇವ್ನಾ ಮನ್ಸು ಒದವ್ಳೆ
ಕೋಗ್ಲೆ ಬಣ್ಣ ಆದ್ರು ಚಿನ್ನ ಅಂತ ಇವ್ನಾ ಜೊತೆಗವ್ಳೆ
         

chitranna chitranna - buddivanta

ಚಿತ್ರ: ಬುದ್ದಿವಂತ
ನಟರು: ಉಪೇಂದ್ರ ಮತ್ತು ಇತರರು

ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು.....
ಕನ್ನಡ ಚಿತ್ರಗಳಿಗಿಂತ ಬೇರೆ ಭಾಷೆ ಚಿತ್ರಗಳನ್ನೇ ಜಾಸ್ತಿ ನೋಡ್ತೇವೆ.....
ಈ ಹುಡುಗಿ ಹೇಳಿದ ಕತೆ ಹ್ಯಾಗಿದೆ ಎಂದರೆ, ಎರಡು ತೆಲುಗು ಎರಡು ಹಿಂದಿ ಭಾಷೆ ಚಿತ್ರ ಸೇರಿಸಿ
ಕತೆ ಹೇಳ್ತಿದಾಳೆ ಇವಳು.  ಬಾಂಬ್ ಸಿಡಿಯುವಾಗ ಯಾರೋ ತೂರಿಕೊಂಡು ಓಡಿಬಂದನಂತೆ, ಒಂದೆ ಚಕ್ರದಲ್ಲಿ ಬೈಕ್
ಓಡಿಸಿದನಂತೆ...ಇವಳಿಗೆ ಪುಸಕ್ ಅಂತ ಲವ್ ಬಂತಂತೆ...ಜೀವನ ಬೇರೆ, ಸಿನಿಮಾ ಬೇರೆ...ಜೀವನಾನೆ ಸಿನಿಮಾ ಅಂತ ತಿಳ್ಕೊಂಡ್ ಬಿಟ್ಯಲ್ಲ ತಾಯಿ ನೀನು....

ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ
ಬರೆದೊರ್ಯಾರೋ ಇಂಥ ಒಳ್ಳೆ ಚಿತ್ರಾನ
ನೀನ್ ನಂಗೆ ಕೈ ಕೊಟ್ರೆ ನಾ ಚಿತ್ರಾನ್ನ
ನಿನ್ ಹಂಗೆ ನಿನ್ ಪ್ರೀತಿ ವಿಚಿತ್ರನ

ಸುಮ್ನೆ ಗಡ್ಬಡ್ ಮಾಡ್ಬೇಡ ಮನಸಲ್ ಮಂಡ್ಗೆ ತಿನ್ಬೇಡ
ಹಣ್ಣಾಗಿಲ್ಲ ಸ್ವಲ್ಪ ಕಾಯಿ
ಬಾ ಅಂತ ಜಹಾಂಗೀರ್ ಬೇಕು ಅಂದ್ರೆ ಎಳನೀರ್
ಎಳ್ಳು ನೀರ್ ಬಿಡಬೇಡ ತಾಯಿ
ಜೋರಿದ್ದಿ ಅಲ್ವ ಅಲ್ವ ಅಲ್ವ ಅಲ್ವ
ಕೊಡ್ತೀಯ ಹಲ್ವ ಹಲ್ವ ಹಲ್ವ ಹಲ್ವ
ಜೋರಿದ್ದಿ ಅಲ್ವ ಅಲ್ವ ಕೊಡ್ತೀಯ ಹಲ್ವ ಹಲ್ವ
ಈ ಸಣ್ಣ ಹಾರ್ಟಲ್ಲಿ ನಾನಿನ್ನ ಎಲ್ಲೋ ಇಡ್ಲಿ?

ಚುರ್ ಚುರ್ ಚುರ್ ಚುರ್ ಚುರಮುರಿ
ಇವಳೇ ನಂಗೆ ಬೇಕ್ರಿ
ಅಬ್ಬ ಈ ಜೋಡಿನೆ ಚೌ ಚೌ
ಚಂಪಾಕಲಿ ಬಂದಳೋ ಬಾದ್ಷಾ ಬಾರೋಲೋ
ನಾವಿಬ್ರು ಒಂದಾದ್ರೆ ಚೌ ಚೌ
ಕಜ್ಜಾಯ ಬಿಸಿ ಬಿಸಿ ಬಿಸಿ ಬಿಸಿ
ಕೊಡ್ತೀಯ ವಸಿ ವಸಿ ವಸಿ ವಸಿ
ಕಜ್ಜಾಯ ಬಿಸಿ ಬಿಸಿ ಕೊಡ್ತೀಯ ವಸಿ ವಸಿ
ಉಪ್ಪಿಗಿಂತ ರುಚಿ ಬೇರೆಲ್ಲೂ ಸಿಕ್ಕೋದಿಲ್ಲ...... 
 
are they serious?? who comes up with these lyrics...goodness...bardorgu kelsvilla, nangu kelsvilla :-D

chinna heLe hegiruve - bombaat

ಚಿತ್ರ: ಬೊಂಬಾಟ್
ಗಾಯನ: ಸೋನು ನಿಗಮ್, ಶ್ರೇಯ ಗೋಶಲ್
ನಟರು: ಗಣೇಶ್, ರಮ್ಯ

ಚಿನ್ನ ಹೇಳೇ ಹೇಗಿರುವೆ ಕಣ್ಣಿನಲ್ಲಿ ಹಾಡಿರುವೆ
ನಿನ್ನದೊಂದು ನೋಟಕೆ ನಾ ಓಡುತಲೇ ಬಂದಿರುವೆ
ಇನ್ನು ನಾನು ನಿನ್ನವನು ನಿನ್ನವನೇ ಎಂದಿರುವೆ

ಚಿನ್ನ ನೋಡು ಹೀಗಿರುವೆ ನಿನ್ನದಾಗಿ ಹೋಗಿರುವೆ
ಸಣ್ಣದೊಂದು ಮಾತಿಗೆ ನಾ ಕಾಯುತಲೆ ನಿಂತಿರುವೆ
ಇನ್ನು ನೀನೆ ನನ್ನವನು ನನ್ನವನೇ ಎಂದಿರುವೆ......

ಈ ಹೃದಯ ಮಾಡಿದೆ ಹೊಸ ಸಾಹಸ ಬೇಕಾಗಿದೆ ಅನುಮೋದನೆ
ಮಿರಿಮಿಂಚು ಮೂಡಿದ ಕಣ್ಣಿಂದಲೇ ಮರೆತೆಲ್ಲವ ಬರಿ ನೋಡು ನನ್ನನ್ನೇ..
ಬೇರೆ ಮಾತು ಬೇಕಿಲ್ಲ ಇನ್ನು ದೂರ ಸಾಕಲ್ಲ ನೀನೆ ಪೂರ ಬೇಕಲ್ಲ
ಮನದ ಬೆಳ್ಳಿ ತೆರೆಯಲ್ಲಿ ನಿನ್ನ ಮುಖ ಕಂಡಿರುವೆ
ಇನ್ನು ನೀನೆ ನನ್ನವನು ನನ್ನವನೇ ಎಂದಿರುವೆ

ಮೊಗದಲ್ಲಿ ಕೆಂಪಿನ ಚಿತ್ತಾರವ ಉಸಿರಿಂದಲೇ ನಾ ಬಿಡಿಸಲೆ
ಈ ನಮ್ಮ ಜೀವನದ ರೇಖೆಯು ಒಂದಾಯಿತೆ ಹಿಡಿದಂತ ಕೈಯಲ್ಲೇ
ಭಾವ ಲೋಕ ಬಂತಲ್ಲ ನಿನ್ನ ಬಿಟ್ಟು ಏನಿಲ್ಲ ನೀನು ಕೊಟ್ಟೆ ಏನೆಲ್ಲಾ
ನನ್ನವೆಲ್ಲ ನಾಳೆಗಳ ನಿನಗಾಗೆ ತಂದಿರುವೆ
ಇನ್ನು ನಾನು ನಿನ್ನವನು ನಿನ್ನವನೇ ಎಂದಿರುವೆ

maayavaagide manasu - haage summane

ಚಿತ್ರ: ಹಾಗೆ ಸುಮ್ಮನೆ
ಗಾಯನ: ಸೋನು ನಿಗಮ್
ನಟರು: ಕಿರಣ್, ಸುಹಾಸಿ

ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮಧುರವಾದ ಭಾವನೆ
ಈಗ ತಾನೇ ಬಂದಿದೆ ನೀಡದೆ ಸೂಚನೆ

ತುಂಬಿ ಹೋಯಿತೀಗಲೇ ನನ್ನ ದಿನಚರಿ
ಎಲ್ಲ ಪುಟದಲು ಅವಳದೇ ವೈಖರಿ
ಅವಳ ನಿಲುವುಗನ್ನಡಿ ಪುಣ್ಯ ಮಾಡಿದೆ
ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ....

ನನ್ನ ಹಾಡಿನಲ್ಲಿದೆ ಅವಳ ಸಂಗತಿ
ಜಾಹಿರಾಗಲಿ ಜೀವದ ಮಾಹಿತಿ
ಎಲ್ಲೆ ಹೊರಟು ನಿಂತರು ಅಲ್ಲೇ ತಲುಪುವೆ
ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ.....

maayavaagide manasu haage summane
gaayava maaDide kanasu haage summane
mohadalli beeLuva madhuravaada bhaavane
eega taane bandide neeDade soochane

tumbi hoyiteegale nanna dinachari
ella putadalu avaLade vaikhari
avaLa niluvugannaDi puNya maaDide
roopa taaLi nintide nannade kalpane

nanna haaDinallide avaLa sangati
jaahiraagali jeevada maahiti
elle horaTu nintaru alle talupuve
jaasti heLalaarenu khaasagi yochane....

Monday, October 12, 2009

saviyo saviyu - savi savi nenapu

ಚಿತ್ರ: ಸವಿ ಸವಿ ನೆನಪು
ಗಾಯನ: ಸೋನು ನಿಗಮ್, ಶ್ರೇಯ ಗೋಶಲ್
ನಟರು: ಪ್ರೇಮ್, ಮಲ್ಲಿಕಾ ಕಪೂರ್

ಸವಿಯೋ ಸವಿಯು ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಪ್ರತಿ ಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಸೂರ್ಯನಂತೆ ನಾ ಹೊಳೆವಾಗ ಭೂಮಿಯಂತೆ ನೀ ಬಾ
ಭೂಮಿಯಂತೆ ನಾ ಕರೆವಾಗ ಮಳೆಬಿಲ್ಲಂತೆ ನೀ ಬಾ

ನೀ ಬರುವ ದಾರಿಯಲ್ಲಿ ಒಲವೆಂಬ ರಂಗವಲ್ಲಿ
ನಿನಗಾಗಿ ಮೂಡಿದೆ ನೋಡು ಬಾ
ಒಡಲಾಳ ತಂತು ಸ್ನೇಹ ಒಡಮೂಡಿ ಬಂತು ಮೋಹ
ಕಥೆಯಾಗಿ ಕಾಡಿತು ಮೂಡಿತು
ಆ ಗದ್ಯದೊಳದ್ದಿದಾ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ
ನೀ ಗದ್ಯದೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ

ಮರುಭೂಮಿ ಯಾನದಲ್ಲಿ ಅಮೃತದ ಧಾರೆ ಚೆಲ್ಲಿ
ತಂಪಾಯ್ತು ಜೀವಕೆ ಭಾವಕೆ
ಮುಂಜಾನೆ ಮಂಜಿನಲ್ಲು ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ಮೈಯಿಗು ಮನಸಿಗೂ
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಹೆಣ್ಣಲ್ಲವೇ
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಗಂಡಲ್ಲವೇ......