Tuesday, February 7, 2017

Manase O Manase - Chandramukhi Pranasakhi


Count the number of times manase is repeated in this song!!



ಚಿತ್ರ : ಚಂದ್ರಮುಖಿ ಪ್ರಾಣಸಖಿ
ಸಂಗೀತ ಮತ್ತು ಸಾಹಿತ್ಯ : ಕೆ ಕಲ್ಯಾಣ್
ನಟರು: ರಮೇಶ್, ಪ್ರೇಮ, ಭಾವನಾ


ಮನಸೆ ಓ ಮನಸೆ ಎಂಥ ಮನಸೆ ಮನಸೆ ಎಳೆ ಮನಸೆ
ಮನಸೆ ಓ ಮನಸೆ ಎಂಥ ಮನಸೆ ಮನಸೆ ಒಳಮನಸೆ
ಮನಸೆ ನಿನ್ನಲಿ ಯಾವ ಮನಸಿದೆ, ಯಾವ ಮನಸಿಗೆ ನೀ ಮನಸು ಮಾಡಿದೆ
ಮನಸಿಲ್ಲದ ಮನಸಿನಿಂದ ಮನಸು ಮಾಡಿ ಮಧುರ ಮನಸಿಗೆ .......
ಮನಸು ಕೊಟ್ಟು ಮನಸನ್ನೇ ಮರೆತುಬಿಟ್ಟೆಯ
ಮನಸು ಕೊಟ್ಟು ಮನಸೊಳಗೆ ಕುಳಿತುಬಿಟ್ಟೆಯ

ಮನಸೆ ಓ ಮನಸೆ ಎಂಥ ಮನಸೆ ಮನಸೆ ಎಳೆ ಮನಸೆ

ಓ ಮನಸೆ ಒಂದು ಮನಸಲೆರಡು ಮನಸು ಎಲ್ಲ ಮನಸ ನಿಯಮ
ಓ ಮನಸೆ ಎರಡು ಹಾಲು ಮನಸಲೊಂದೇ ಮನಸು ಇದ್ದರೆ ಪ್ರೇಮ
ಮನಸಾಗೋ ಪ್ರತಿ ಮನಸಿಗೂ ಮನಸೋತಿರುವ, ಎಳೆ ಮನಸು ಎಲ್ಲ ಮನಸಿನ ಮನಸೇರೋಲ್ಲ
ಕೆಲ ಮನಸು ನಿಜ ಮನಸಿನಾಳದ ಮನಸ, ಹುಸಿ ಮನಸು ಅಂತ ಮನಸ್ಸನ್ನೆ ಮನಸೆನ್ನೋಲ್ಲ
ಮನಸೆ ಮನಸೆ ಹಸಿ ಹಸಿ ಮನಸೆ, ಮನಸು ಒಂದು ಮನಸಿರೋ ಮನಸಿನ ತನನನ
ತಿರುಗೋ ಮನಸಿಗೂ ಮರುಗೊ ಮನಸಿದೆ, ಬರದ ಮನಸಿಗೂ ಕರಗೋ ಮನಸಿದೆ
ಮೈ ಮನಸಲಿ ಮನಸಿದ್ದರೆ ಮನಸು ಮನಸ ಹಿಡಿತವಿದ್ದರೆ
ಮುಮ್ಮಲ ಮನಸಿದ್ದರು ಮುಳುಗೇಳದು ಮನಸು
ಮನಸೆಲ್ಲೋ ಮನಸು ಮಾಡೋ ಮನಸಾ ಮನಸು    


ಓ ಮನಸೆ ಮನಸು ಮನಸಲಿದ್ದರೇನೆ ಅಲ್ಲಿ ಮನಶ್ಶಾಂತಿ
ಓ ಮನಸೆ ಮನಸು ಮನಸ ಕೇಳಿ ಮನಸು ಕೊಟ್ಟರೆ ಮನಸ್ಸಾಕ್ಷಿ
ಮನಸಾರೆ ಮನಸಿಟ್ಟು ಹಾಡುವ ಮನಸು, ಮನಸೂರೆ ಆಗೋದು ಮನಸಿಗೂ ಗೊತ್ತು
ಮನಸಿದ್ದರೆ ಮಾರ್ಗ ಅಂತ ಹೇಳುವ ಮನಸು, ಮನ್ನಿಸುವ ಮನಸಲ್ಲಿ ಮನಸಿಡೋ ಹೊತ್ತು
ಮನಸೇ ಮನಸೇ ಬಿಸಿ ಬಿಸಿ ಮನಸೇ, ಮನಸು ಒಂದು ಮನಸಿರೋ ಮನಸಿನ ಧಿರನನ
ತುಮುಲ ಮನಸಿಗೂ ಕೋಮಲ ಮನಸಿದೆ, ತೊದಲು ಮನಸಿಗೂ ಮೃದುಲ ಮನಸಿದೆ
ಮನಸಿಚ್ಚೆ ಮನಸ ಒಳಗೆ ಮನಸ್ವೇಚ್ಚೆ ಮನಸ ಹೊರಗೆ
ಮನಸ್ಪೂರ್ತಿ ಮನಸ ಪೂರ್ತಿ ಇರುವುದೇ ಮನಸು
ಮನಸೆಲ್ಲೋ ಮನಸು ಮಾಡೊ ಮನಸಾ ಮನಸು........

ಮನಸೆ ಓ ಮನಸೆ, ಮನಸೆ ಎಳೆ ಮನಸೆ, ಮನಸೆ ಒಳ ಮನಸೆ

-----------OOO-----------



Friday, February 3, 2017

Gamanisu omme neenu - Mungaru Male 2



another of my personal favourites from mungaru maLe 2.  Sonu Nigam's diction has improved enormously.  Very haunting song that grows on you.

ಚಿತ್ರ : ಮುಂಗಾರು ಮಳೆ ೨
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ:  ಜಯಂತ್ ಕೈಕಿಣಿ
ಹಿನ್ನೆಲೆ ಗಾಯಕರು: ಸೋನು ನಿಗಮ್
ನಟರು: ಗಣೇಶ್, ನೇಹಾ ಶೆಟ್ಟಿ


Every morning I remember you
Every noon every night I'll be there for you
My heart says that I love you
And my soul will burn always for you

ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು
ಹೃದಯದ ಮೂಲೆ ಮೂಲೆ dahiside ನಿನ್ನ ಜ್ವಾಲೆ
ಇರಬಹುದೇ ಹೇಳು karagade ಬರಬಹುದೇ ದಾರಿ mareyade
ಬಿಸಿಯೆ ಇರದ ಉಸಿರು ನಾನು ನೀನು ಇರದೇ

ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು

Every morning I remember you
Every noon every night I'll be there for you
My heart says that I love you
And my soul will burn always for you

ನನ್ನ  ಜಗವೆ ನಿನ್ನ ಹಿಡಿತಕೆ ಸಿಲುಕಿದೆ
ನಾನಾ ಬಗೆಯ ಭಾವನೆಯ ಹೊಡೆತಕೆ ಚಡಪಡಿಸಿದೆ
ತಡೆದಿರೋ ಮಾತೆಲ್ಲವೂ ತಲುಪಲೆ ಬೇಕಲ್ಲವೆ
ನಗಬಹುದೆ ಮೌನ ಮುರಿಯದೆ ಸಿಗಬಹುದೆ ದೂರ ಸರಿಯದೆ
ಕಳೆದು ಹೋದ ಮಗುವು ನಾನು ನೀನು ಇರದೆ

ಚೂರು ಮರೆಗೆ ನೀನು ಸರಿದರು ಸಹಿಸೆನು
ನೀನೆ ತೆರೆದು ನೋಡು ಹೃದಯದ ಬೇಗುದಿಯನು
ಬದುಕಲು ಈ ನೂತನ ನೆಪಗಳೆ  ಸಾಕಲ್ಲವೆ
ಕೊಡಬಹುದೆ ನೋವ ಒಲಿಯದೆ ಬಿಡಬಹುದೆ ಜೀವ ಬೆರೆಯದೆ
ಕಿಟಕಿಯಿರದ ಮನೆಯು ನಾನು ನೀನು ಇರದೆ

Every morning I remember you
Every noon every night I'll be there for you
My heart says that I love you
And my soul will burn always for you




Wednesday, February 1, 2017

o meghave - shrungara kavya



An evergreen melody from Maestro Hamsalekha, recently revived by Ankita Kundu's excellent singing in Saregamapa Little Champs.  This song was on loop for almost a month after her singing!!

ಚಿತ್ರ : ಶೃಂಗಾರ ಕಾವ್ಯ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ
ಹಿನ್ನೆಲೆ ಗಾಯನ: ಎಸ್ ಪಿ ಬಿ , ಚಿತ್ರ
ನಟರು: ರಘುವೀರ್, ಸಿಂಧು

ಓಹೊಹೊ ಓಹೊ ... ಅಹಹಾ ಹಹ

ಓ ಮೇಘವೆ ಮೇಘವೆ ಹೋಗಿ ಬಾ
ಈ ಓಲೆಯ ಅವಳಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ

 ಓ ಮೇಘವೆ ಮೇಘವೆ ಹೋಗಿ ಬಾ
ಈ ಓಲೆಯ ಅವನಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ

ಓ ಮೇಘವೆ........

ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳತಿ  ಓದುವೆಯ
ಮುಗಿಲ ಬಾನಗಳ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳೆಯ  ಓದುವೆಯ
ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ
ಇದು ಓದೋ ಓಲೆಯಲ್ಲ ಬರೆದುಕೊ
ನನ್ನ ಜೀವ ನಿನ್ನದೆ ಎಂದುಕೋ
ನಿನ್ನ ಮನದ ಮನೆಗೆ ತಂದುಕೋ
ಈ ಕಂಗಳ ಮುಂಬಾಗಿಲ ಬಾ  ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ

ಮುಗಿಲೆ ಬೆಳ್ಮುಗಿಲೆ ತಂಬೆಲರೆ ತಳಿರೆ
ಹಗಲೇ ಹಗಲಿರುಳೆ ನಿನ್ನೆದುರು ನಾವೊಬ್ಬರೆ
ವನವೇ ಕಾನನವೇ ಹೂಬನವೇ ಹಸಿರೇ
ಗಿರಿಯೇ ನೀರ್ಝರಿಯೇ ನಮ್ಮೊಳಗೇ ನಿನ್ನುಸಿರೇ
ಈ ಒಲವಿನ ಕಣ್ಣಲಿ ಸರ್ವವೂ ಸುಂದರ
ಇಲ್ಲಿ ಬಾನು ಭೂಮಿಗಿಲ್ಲ ಅಂತರ
ನಾನು ನೀನು ಇಲ್ಲ ನಮ್ಮಲಿ 
ಒಂದೇ ಜೀವ ಜೋಡಿ ಒಡಲಲಿ
ಈ ಕಂಗಳ ಮುಂಬಾಗಿಲ ಬಾ  ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ
ಈ ಕಂಗಳ ಮುಂಬಾಗಿಲ ಬಾ  ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ



Tuesday, January 31, 2017

sariyaagi nenapide nanage - mungaru male 2


Mungaru Male 2 - Absolutely love this song for Jayanth Kaikini's lyrics and Arman Malik's fantastic singing.


ಚಿತ್ರ : ಮುಂಗಾರು ಮಳೆ ೨
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ:  ಜಯಂತ್ ಕೈಕಿಣಿ
ಹಿನ್ನೆಲೆ ಗಾಯಕರು: ಅರ್ಮಾನ್ ಮಲಿಕ್
ನಟರು: ಗಣೇಶ್, ನೇಹಾ ಶೆಟ್ಟಿ

ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ
ಮನದ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆ
ಕನಸಿನ ಕುಲುಮೆಗೆ ಉಸಿರನು ಊದುತ
ಕಿಡಿ ಹಾರುವುದು ಇನ್ನು ಖಚಿತ x2

ಕಣ್ಣಲೇ ಇದೆ ಎಲ್ಲ ಕಾಗದ ನೀನೆ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ ನೀನೆ ಜ್ಞಾಪಕ ನೀನೆ ಔಷದಿ ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾನೇ ಅನ್ಯಾಯ
ನನ್ನಯ ನಡೆ ನುಡಿ ನಿನ್ನನು ಅರಸುತ
ಬದಲಾಗುವುದು ಇನ್ನು ಖಚಿತ

ಸರಿಯಾಗಿ......

ನಿನ್ನ ನೃತ್ಯಕೆ ಸಿದ್ಧವಾಗಿದೆ ಅಂತರಂಗದ ರಂಗಸಜ್ಜಿಕೆ
ನಿನ್ನ ನೋಡದ ನನ್ನ ಜೀವನ ಸುದ್ದಿಯಿಲ್ಲದ ಸುದ್ಧಿಪತ್ರಿಕೆ
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೆ ಕಾನೂನು
ಕೊರೆಯುವ ನೆನಪಲಿ ಇರುಳನು ಕಳೆಯುತ
ಬೆಳಗಾಗುವುದು ಇನ್ನು ಖಚಿತ

ಸರಿಯಾಗಿ...... 

Monday, January 30, 2017

Saalutillave - Kotigobba 2



This song has been haunting me for a while hence penning it down....beautiful singing by Vijayaprakash and Shreya Goshal...and isn't nithya menon simply gorgeous :)

ಚಿತ್ರ: ಕೋಟಿಗೊಬ್ಬ ೨
ಹಾಡುಗಾರರು : ವಿಜಯಪ್ರಕಾಶ್ , ಶ್ರೇಯ ಘೋಶಾಲ್
ಸಂಗೀತ: ಡಿ ಇಮ್ಮನ್
ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್
ನಟರು : ಸುದೀಪ್ , ನಿತ್ಯ ಮೆನನ್

ಸಾಲುತಿಲ್ಲವೆ  ಸಾಲುತಿಲ್ಲವೆ
ನಿನ್ನ ಹಾಗೆ ಮತ್ತು ಬೇರೆಯಿಲ್ಲವೆ
ಒಂದೇ ಸಮನೆ ನಿನ್ನ ನೋಡುತಿದ್ದ ಮೇಲು
ತುಂಬಾ ಸಲಿಗೆಯಿಂದ ಬೆರೆತು ಹೋದ ಮೇಲು
ಪಕ್ಕದಲ್ಲಿ ಕುಳಿತುಕೊಂಡು ನಿನ್ನ  ಮೈಗೆ ಅಂಟಿಕೊಂಡು ಉಸಿರು ಉಸಿರು ಬೆಸೆದ ಮೇಲು
ಸಾಲುತ್ತಿಲ್ಲವೆ ಸಾಲುತಿಲ್ಲವೆ
ನಿನ್ನ ಹಾಗೆ ಮತ್ತು ಬೇರೆಯಿಲ್ಲವೆ

ಮುಂಜಾನೆ ನನ್ನ ಪಾಲಿಗಂತು ಸಾಲೋಲ್ಲ
ಮುಸ್ಸಂಜೆ ತನಕ ಸನಿಹವಂತು ಸಾಲೋಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲು
ನಿಘಂಟು ಪದಗಳೇ ಸಾಲೋದಿಲ್ಲ
ನಿನ್ನೊಲವ ಚೆಲುವ ಅಳೆವೆ ಕಣ್ಣು ಸಾಲೋದಿಲ್ಲ
ನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲ
ಋತುಗಳೆಲ್ಲ ತಿರುಗಿಹೋಗಿ ಸಮಯ ಹಿಂದೆ ಸರಿದುಹೋಗಿ
ಮೊದಲ ಭೇಟಿ ನೆನೆದ ಮೇಲು
ಸಾಲುತ್ತಿಲ್ಲವೆ ಸಾಲುತ್ತಿಲ್ಲವೆ ನಿನ್ನ ಹಾಗೆ ಅಮಲು ಬೇರೆಯಿಲ್ಲವೇ

ನಿಸರ್ಗ ಹೇಳುತಿರುವ  ಶಕುನ ಸಾಲೋಲ್ಲ
ಸಲ್ಲಾಪದಲ್ಲು ಇರುವ ಸುಖವು ಸಾಲೋಲ್ಲ
ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ
ನೂರಾರು ಜನ್ಮವು ಸಾಲೋದಿಲ್ಲ
ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ
ನನಸಾಗಿಸೋಕೆ ದೈವಗಳು ಸಾಕಾಗೋಲ್ಲ
ಏಳು ಸ್ವರವು ಮುಗಿದ ಮೇಲು ಕಾಡುವಂತ ನನ್ನ ನಿನ್ನ ಯುಗಳ ಗೀತೆ ಮುಗಿಯೋದಿಲ್ಲ

ಸಾಲುತಿಲ್ಲವೆ  ಸಾಲುತಿಲ್ಲವೆ
ನಿನ್ನ ಹಾಗೆ ಅಮಲು ಬೇರೆಯಿಲ್ಲವೇ
ಶ್ವಾಸದಲ್ಲಿ ನೀನು ವಾಸವಿದ್ದ ಮೇಲು ನನ್ನ ಹೃದಯವನ್ನು ಹಾಯಾಗಿ ಕದ್ದ ಮೇಲು
ಎರೆಡು ಹೃದಯ ಬೆರೆತ ಮೇಲು
ಹಾಡು ಮುಗಿದುಹೋದಮೇಲು ಮೌನ ತುಂಬಿ ಬಂದ ಮೇಲು
ಸಾಲುತಿಲ್ಲವೆ  ಸಾಲುತಿಲ್ಲವೆ ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ




Friday, May 2, 2014

Someone has kindly responded to a request for this song.  This was written in the comments section.  Putting it as a new post to help those who are interested.  Please let me know the song details - lyricist, singer, movie etc.

ಇಬ್ಬನಿ ತಬ್ಬಿದ ಇಳೆಯಲ್ಲಿ ರವಿ ತೇಜ ಕಣ್ಣ ತೆರೆದು ..
ಬಾನಾ ಕೋಟಿ ಕಿರಣ ಇಳಿದು ಬಂತು ಭೂಮಿಗೆ ...
ಇಬ್ಬನಿ ತಬ್ಬಿದ ಇಳೆಯಲ್ಲಿ ರವಿ ತೇಜ ಕಣ್ಣ ತೆರೆದು ..
ಬಾನಾ ಕೋಟಿ ಕಿರಣ ಇಳಿದು ಬಂತು ಭೂಮಿಗೆ ...

ಹಾಡು ಹಕ್ಕಿಕೂಗಿ ಇಂಪಾದ ಗಾನವು
ಗಾಳಿ ಬೀಸಿಬೀಸಿ ಮಧು ಮಧುರ ತಾಣವು
ಬೆಳಕ್ಕಿ ಕೂಗಿ ಪಲ್ಲಕ್ಕಿ... ಕಣ್ಣಲ್ಲಿ ಭಾವ ಉಕ್ಕುಕ್ಕಿ
ಮೊಲ್ಲೆ ಮರದ ಜಾಜಿ .. ಸೊಗಸಾಗಿ ಅರಳಿ ತನನದ ಕಾವ್ಯ...
ಇಬ್ಬನಿ ತಬ್ಬಿದ ಇಳೆಯಲ್ಲಿ ರವಿ ತೇಜ ಕಣ್ಣ ತೆರೆದು ..
ಬಾನಾ ಕೋಟಿ ಕಿರಣ ಇಳಿದು ಬಂತು ಭೂಮಿಗೆ ...

ದೂರ ನಿಂತ ಬೆಟ್ಟ ಗಂಭೀರ ಮೌನವು..
ಟೊಂಗೆ ಟೊಂಗೆ ಸೇರಿ ಹಸಿ ಹಸಿರ ಲಾಸ್ಯವು
ಅತ್ತಿತ್ತ ಧಾರೆ ಚೆಲ್ಲುತ್ತ.. ಧುಮ್ಮಿಕ್ಕಿ ನದಿಯು ಓಡುತ್ತ
ಹಾವು ಹರಿದ ರೀತಿ..ಚೆಲುವಾಗಿ ಹರಿವ ಕಾವೇರಿಯ ನಾಟ್ಯ ...
ಇಬ್ಬನಿ ತಬ್ಬಿದ ಇಳೆಯಲ್ಲಿ ರವಿ ತೇಜ ಕಣ್ಣ ತೆರೆದು ..
ಬಾನಾ ಕೋಟಿ ಕಿರಣ ಇಳಿದು ಬಂತು ಭೂಮಿಗೆ
Hello everyone!!

I am revisiting my blog after a very long time.  Very heartening to see so many requests and comments.  Sorry for the numerous requests which went unattended but I will do my best to catch up.  It may be too late for some nevertheless will go through each request and reply.

Please specify if you need just the script to be written in English or if you wish to know the meaning of the song in English.  The transliteration will take some time but I do enjoy doing this.

A lot of catchy, melodious and tapanguchi new songs have come and I will upload the lyrics shortly to the most popular ones.  I will also continue to upload scrips to the golden melodies which will never go out of fashion.

I am thinking of adding a link to the video/audio for the songs so you could enjoy seeing/listening to them however it may be difficult to get the videos for really old songs.  If any of you could help me this, I would definitely appreciate it.

cheerio!!

Anu

Sunday, July 25, 2010

santeyalle nintarunu - Krishnan love story

ಚಿತ್ರ: ಕೃಷ್ಣನ್ ಲವ್ ಸ್ಟೋರಿ
ಗಾಯನ: ಸೋನು ನಿಗಮ್, ಲಕ್ಷ್ಮಿ
ನಟರು: ಅಜಯ್, ರಾಧಿಕ ಪಂಡಿತ್

ಸಂತೆಯಲ್ಲೆ ನಿಂತರೂನು ನೋಡು ನೀನು ನನ್ನನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನೆ
ಕಣ್ಣ ಕಟ್ಟಿ ಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನೆ ಸೇರಬಲ್ಲೆ ನಿನ್ನನೆ
ನಾನು ಮಾತ್ರ ಬಲ್ಲೆ ನಿನ್ನನೆ

ಲ ಲ ಲ ....

ಹೃದಯವೆ ಬಯಸಿದೆ ನಿನ್ನನೆ
ತೆರೆಯುತ ಕನಸಿನ ಕಣ್ಣನೆ
ದಿನವಿಡೀ ನಿನ್ನಯ ನೆನಪಲೆ ಬೇಯುವೆ
ಸೆಳೆತಕೆ ಸೋಲುತ ನಾ ಸನಿಹಕೆ ಕಾಯುವೆ

ಜೀವಗಳ ಭಾಷೆಯಿದು ಬೇಕೆ ಅನುವಾದ
ಭಾವಗಳ ದೋಚುವುದು ಚೆಂದ ಅಪರಾಧ
ಯಾರಿಗೂ ಹೇಳದ ಮಾಹಿತಿ ನೀಡು
ಖಾತರಿ ಇದ್ದರು ಕಾಯಿಸಿ ನೋಡು
ನಿನ್ನಿಂದ ನನ್ನ ನೀನೆ ಕಾಪಾಡು.....ಹೃದಯವೆ....

ಕಣ್ಣಿನಲೆ ದಾರಿಯಿದೆ ನನ್ನ ಸಲುವಾಗಿ
ಮೆಲ್ಲಗೆನೆ ಕೈಯ ಹಿಡಿ ಇನ್ನು ಬಲವಾಗಿ
ನನ್ನಯ ತೋಳಲಿ ನೀನಿರೆ ಇಂದು
ಸಾವಿಗೂ ಹೇಳುವೆ ನಾಳೆ ಬಾ ಎಂದು
ಆಗಲೇ ಬೇಡ ದೂರ ಎಂದೆಂದೂ....ಹೃದಯವೆ....

Naanu eega naanena - Gaana bajaana

ಚಿತ್ರ: ಗಾನ ಬಜಾನ
ಗಾಯನ: ಕಾರ್ತಿಕ್
ನಟರು: ತರುಣ್, ರಾಧಿಕ ಪಂಡಿತ್, ದಿಲೀಪ್ ರಾಜ್

ನಾನು ಈಗ ನಾನೇನ ನನಗೆ ಏಕೋ ಅನುಮಾನ
ಕುಣಿಬೇಡ ಹೀಗೆ ಓ ಪ್ರಾಣ ಇರು ಇರು ಜೋಪಾನ
ಚೋರಿ ಚೋರಿ ಚುಪ್ ಚುಪ್ಕೆ ಕನಸಲ್ಲಿ ಬಂದು ಕಾಡೊಳು
ಇಂದು ಕಣ್ ಮುಂದೆ ತಾನೇ ಬಂದು ನಿಂತಳು
ಬಂದಳೀಗ ನನ್ನೊಳಗೆ ಎದೆ ಮೇಲೆ ಇಟ್ಟು ಅಂಗಾಲು
ನುಂಗಿದ ಹಾಗೆ ಇರುಳನು ಬಂದು ಹಗಲು.......

ಅಪ್ಸರೆ ಈ ಅಪ್ಸರೆ ಜೊತೆಯಾದರೆ ಬದುಕೆಂತ ಚೆಂದ
ಆದರೆ ಹಾಗಾದರೆ ನನ ಬಾಳಿಗೆ ಬಳಿ ಬಂತೆ ಬಣ್ಣ
ದೇವರೇ ಎದುರಾದರೆ ವರ ಕೇಳಲು ಉಳಿದಿಲ್ಲ ಇನ್ನ
ಈ ನಿನ್ನ ಅಂಗೈಲಿ ರೇಖೆ ಆದರು
ಶುರುವಾಯ್ತು ಈಗ ನನಗಾಸೆ
ಓ.....ಓ......

ಮೋಹಕ ತುಸು ಮಾದಕ ನಿನ್ನ ನಗುವಿಗೆ ಬೆರಗಾದೆ ನಾನು
ರೋಚಕ ರೋಮಾಂಚಕ ಕುಡಿ ನೋಟಕೆ ಕೊನೆಯಾದೆ ನಾನು
ಸೇವಕ ನಿನ್ನ ಸೇವಕ ನಾನಾಗುವೆ ವಿಧಿಯಿಲ್ಲ ಇನ್ನು
ಸೋಲಲ್ಲೂ ನಾ ಕಂಡೆ ಎಂತಹ ಸುಖ
ಗೆಲುವೇಕೆ ಬೇಕು ನನಗಿನ್ನು.........

ನಾನು ಈಗ ನಾನೇನ......

Friday, April 9, 2010

Nee naDedare sogasu - anuraaga araLithu

ಚಿತ್ರ: ಅನುರಾಗ ಅರಳಿತು...

ಹಾಡಿರುವರು: ಡಾ ರಾಜ್ ಕುಮಾರ್
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

ನೀ ನಡೆದರೆ ಸೊಗಸು...
ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು...

ನಕ್ಕರೆ ಸೊಗಸು.., ಕೋಪದಿ ಸಿಡಿದರೂ ಸೊಗಸು...
ನೀ ನಡೆದರೆ ಸೊಗಸು...
ಕಣ್ಗಳ ಕಾಡುವ ಸೊಗಸು..
ಜೋಡಿಯ ಬೇಡುವ ವಯಸು... -೨

ಹೆಣ್ಣೇ ತೋಳಿಂದ ಬಳಸಿ..,ಹೆಣ್ಣೇ...ತೋಳಿಂದ ಬಳಸಿ,
ನನ್ನನು ಕುಣಿಸು..ಕುಣಿಸು...

ನೀ ನಡೆದರೆ ಸೊಗಸು...

ನಿನ್ನನು ನೋಡಿದ ಮನಸು...
ಕಂಡಿತು ಸಾವಿರ ಕನಸು... -೨
ಚಿನ್ನಾ ನಾ ತಾಳೆನು ವಿರಹ..ಚಿನ್ನಾ..,ನಾ ತಾಳೆನು ವಿರಹ...
ಬೇಗನೆ ಪ್ರೀತಿಸು.., ಪ್ರೀತಿಸು...

ನೀ ನಡೆದರೆ ಸೊಗಸು...-೨

Friday, March 26, 2010

apaara keerthi - vijayanagarada veeraputhra

ಚಿತ್ರ: ವಿಜಯನಗರದ ವೀರಪುತ್ರ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ವಿಶ್ವನಾಥ್ - ರಾಮಮೂರ್ತಿ
ಗಾಯನ : ಪಿ.ಬಿ.ಶ್ರೀನಿವಾಸ್

ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ
ಆಗಸದೆ ತೇಲುತಿದೆ ಮೋಡ
ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ
ಹಸಿ ಹಸಿರು ವನರಾಜಿ ನೋಡ....

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...

ಮಾತೆ ತುಂಗಭದ್ರೆ ಹರಿಯುತಿಹಳು ಇಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ

ದೇವ ವಿರೂಪಾಕ್ಷ ಈವ ನಮಗೆ ರಕ್ಷ
ಜೀವಿಗೆ ತಾ ನೀಡುವನು ಧರ್ಮದ ದೀಕ್ಷ
ಜೀವಿಗೆ ತಾ ನೀಡುವನು ಧರ್ಮದ ದೀಕ್ಷ

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...

ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ
ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ
ಹಕ್ಕಬುಕ್ಕರಾಳಿ ಭವ್ಯತೆಯನು ತಾಳಿ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...

taayiya tandeya - madhura sangama

ಚಿತ್ರ: ಮಧುರ ಸಂಗಮ
ಸಾಹಿತ್ಯ:ಆರ್.ಎನ್.ಜಯಗೋಪಾಲ್
ಸಂಗೀತ:ರಾಜನ್-ನಾಗೇಂದ್ರ
ಗಾಯನ:ಎಸ್.ಜಾನಕಿ

ತಾಯಿಯಾ ತಂದೆಯಾ ಮಮತೆ ವಾತ್ಸಲ್ಯ
ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ....ತಾಯಿಯಾ...

ಸೃಷ್ಟಿ ಮಾಡುವ ಬ್ರಹ್ಮದೇವ
ಭಕ್ತ ಬಾಂಧವ ಮಹಾ ವಿಷ್ಣು
ಶರಣ ಪಾಲಕ ಮಹಾದೇವ
ಹೆತ್ತ ಕರುಳನು ಕಾಣದೇ..೨..
ಶಿಲೆಗಳಾದರು ಲೋಕದಿ....ತಾಯಿಯಾ...

ಧನವ ನೀಡುವ ಧರ್ಮದಾತ
ವಿದ್ಯೆ ಕಲಿಸುವ ಪಾಠಶಾಲೆ
ನೀತಿ ಹೇಳುವ ಈ ಸಮಾಜ
ತಂದೆ ಪ್ರೀತಿಯ ತೋರ್ವರೇ..೨..
ತಾಯಿ ಮಮತೆಯ ಕೊಡುವರೆ....ತಾಯಿಯಾ...

raaja muddu raaja - sampattige savaal

ಚಿತ್ರ: ಸಂಪತ್ತಿಗೆ ಸವಾಲ್ (೧೯೭೪)
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಜಿ.ಕೆ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನೀವಾಸ್ ಮತು ಎಸ್. ಜಾನಕಿ
ನಟರು: ಡಾ ರಾಜಕುಮಾರ್, ಮಂಜುಳ

ರಾಜಾ ಮುದ್ದು ರಾಜಾ, ನೂಕುವಂತ ಕೋಪ ನನ್ನಲೇಕೆ
ಸರಸದ ವೇಳೆ ದೂರ ನಿಲ್ಲಬೇಕೆ
ಕೋಪವೇಕೆ
ನಿನಗಾಗಿ ಬಂದೆ ಒಲವನ್ನು ತಂದೆ, ನನದೆಲ್ಲ ನಿಂದೇ,

ರಾಜಾ ನನ್ನ ರಾಜಾ...
ಮುದ್ದು ರಾಜಾ

ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜ ನನ್ನ ರಾಜ
ಆಸೆ ಬಾರದೇನು, ನಾನಂದವಿಲ್ಲವೇನು, ಮನಸಿನ್ನು ಕಲ್ಲೇನು
ರಾಜ ಬೇಡ ರಾಜಾ, ನೂಕುವಂತ ಕೋಪ ನನ್ನಲೇಕೆ, ಮುದ್ದು ರಾಜಾ...

ಹಣದ ಸೊಕ್ಕಿನಿಂದ, ಮೆರೆದಾಡೋ ನಿನ್ನ ಚೆಂದ, ಬಲ್ಲೇ... ನಾ ಬಲ್ಲೇ.....
ಬೆಂಕಿಯಂತೆ ನಾನು, ತಣ್ಣೀರಿನಂತೆ ನೀನು, ನೀ ನನ್ನ ಜೊತೆಯೇನು ನಿಲ್ಲೇ, ದೂರ ನಿಲ್ಲೇ
ಗಂಡು ಬೀರಿಯಲ್ಲ, ನಾ ಹಿಂದಿನಂತೆ ಇಲ್ಲ ನಲ್ಲಾ ನನ್ನ ನಲ್ಲ...
ತಂದೆ ಮಾತ ತಳ್ಳಿ, ನಾ ಓಡಿ ಬಂದೆನಲ್ಲ, ನಿನ್ನಾಣೆ ಸುಳ್ಳಲ್ಲ ರಾಜಾ
ಮುದ್ದು ರಾಜಾ

raagake swaravaagi - hrudaya pallavi

ಚಿತ್ರ: ಹೃದಯ ಪಲ್ಲವಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಎಂ.ರಂಗರಾವ್
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ

ಸ ಸರಿಗಮ ಪ.. ಮಪಮಪ ಗ..
ಪ ಮದಪಮ ಗ.. ರಿಗರಿಸ

ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ
ನಿನ್ನ ಕಣ್ಣಾಗಿ - (೨)

ಸಾಆಆಆ
ಸ ನಿ ದ ಸ ನಿ ದ ಸ ನಿ ದ
ದ ಗ ರಿ ಸ ದ ಪ ದ ಪ
ತನನಂ ತನನಂ ತನನಂ ತನನಂ
ತನನಂ ತನನಂ ತನ ತನನ
ಸ ಸ ದ ಸ ಸ ದ
ಸ ಸ ದ ಸ ಸ ದ
ಸ ಸ ದ ಸ ಸ ದ
ಪ ದ ಗ ರಿ

ಮುಂಜಾನೆಯ ಎಳೆಬಿಸಿಲಲ್ಲಿ
ಮುತ್ತಿನ ಹನಿಗಳ ಕಂಪು
ಸಾಗರದ ಈ ಅಲೆಗಳಲ್ಲಿ
ಪ್ರಕೃತಿಯ ಶಕ್ತಿಯ ಇಂಪು

ಕಡಲಲಿ ನದಿಯ ಸಂಗಮವು
ದೇವನ ಸೃಶ್ಟಿಯ ರೀತಿ
ಗಂಡು ಹೆಣ್ಣಿನ ಹೃದಯ ಸಂಗಮ
ಇದರ ಹೆಸರೆ ಪ್ರೀತಿ

ರಾಗಕ್ಕೆ ಸ್ವರವಾಗಿ ಸ್ವರಕ್ಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ
ನಿನ್ನ ಕಣ್ಣಾಗಿ

ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಸ ರಿ ಗ ಪ ದ ಪ
ಸ ರಿ ಗ ಪ ದ ಪ
ರಿ ಗ ಪ ದ ಸ ದ
ರಿ ಗ ಪ ದ ಸ ದ
ಸ ರಿ ಗ ರಿ ಗ ರಿ ಗ
ದ ಪ ದ ಪ ದ ಪ ದ
ಸ ರಿ ರಿ ಪ
ಸ ರಿ ರಿ ಪ
ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಪ ದ ಸ ರಿ ಗ

nee meetida nenapellavu - nee bareda kaadambari

ಚಿತ್ರ: ನೀ ಬರೆದ ಕಾದಂಬರಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ವಿಜಯಾನಂದ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ

ಬಾಳಲ್ಲಿ ನೀ ಬರೆದೆ ಕಣ್ಣೀರ ಕಾದಂಬರಿ
ಕಲ್ಲಾದ ಹೃದಯಕ್ಕೆ ಏಕಾದೆ ನೀ ಮಾದರಿ
ಉಸಿರಾಗುವೆ ಎಂದ ಮಾತೆಲ್ಲಿದೆ
ಸಿಹಿ ಪ್ರೇಮವೆ ಇಂದು ವಿಷವಾಗಿದೆ
ಹುಸಿ ಪ್ರೀತಿಯ ನಾ ನಂಬಿದೆ
ಮಳೆ ಬಿಲ್ಲಿಗೆ ಕೈ ಚಾಚಿದೆ
ಒಲವೆ ಚೆಲುವೆ ನನ್ನ ಮರೆತು ನಗುವೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ

ಹಗಲೇನು ಇರುಳೇನು ಮನದಾಸೆ ಮರೆಯಾಗಿದೆ
ಸಾವೇನು ಬದುಕೇನು ಏಕಾಂಗಿ ನಾನಾಗಿರೆ
ನಾ ಬಾಳುವೆ ಕಂದ ನಿನಗಾಗಿಯೆ
ಈ ಜೀವನ ನಿನ್ನ ಸುಖಕಾಗಿಯೆ
ನನ್ನಾಸೆಯ ಹೂವಂತೆ ನೀ
ಇರುಳಲ್ಲಿಯೂ ಬೆಳಕಂತೆ ನೀ
ನಗುತ ಇರು ನೀ ನನ್ನ ಪ್ರೀತಿ ಮಗುವೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ

olavina uDugore koDalenu - olavina uDugore

ಚಿತ್ರ: ಒಲವಿನ ಉಡುಗೊರೆ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಎಂ.ರಂಗರಾವ್
ಗಾಯನ: ಪಿ.ಜಯಚಂದ್ರನ್
ನಟರು: ಅಂಬರೀಶ್, ಮಂಜುಳ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಪ್ರೇಮ ದೈವದ ಗುಡಿಯಂತೆ
ಪ್ರೇಮ ಜೀವನ ಸುಧೆಯಂತೆ
ಅಂತ್ಯ ಕಾಣದು ಅನುರಾಗ
ಎಂದು ನುಡಿವುದು ಹೊಸ ರಾಗ

ಒಲವು ಸಿಹಿ ನೆನಪು ಸಿಹಿ
ಹೃದಯಗಳ ಮಿಲನ ಸಿಹಿ
ಪ್ರೇಮವೇ ಕವನಾ ಮರೆಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

ತಾಜಮಹಲಿನ ಚೆಲುವಲ್ಲಿ
ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿಕಾವ್ಯ
ಪ್ರೇಮ ಸಾಕ್ಷಿಯು ನಿಜದಲ್ಲಿ

ಕವಿತೆ ಇದಾ ಬರೆದಿರುವೆ
ಹೃದಯವನೆ ಕಳಿಸಿರುವೆ
ಕೋಮಲಾ ಇದು ನೀ ಎಸಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

karpoorada gombe naanu - naagara haavu

ಚಿತ್ರ: ನಾಗರ ಹಾವು
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ.ಸುಶೀಲ
ನಟರು: ವಿಷ್ಣು ವರ್ಧನ್, ಆರತಿ, ಅಶ್ವಥ್

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ನಿನ್ನ ಪ್ರೇಮ ಜ್ವಾಲೆ ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು

ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ದೇಹದಿ ಪ್ರಾಣವು ಕಲೆತಿಹ ರೀತಿ
ನಿನ್ನಲೇ ಬೆರೆತೆ ನನ್ನನೇ ಮರೆತೆ

ಕರ್ಪೂರದ ಗೊಂಬೆ ನಾನು

ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ಒಲವನು ಅರಿತ ಹೃದಯವೇ ಧನ್ಯ
ನಿನ್ನನಾ ಪಡೆದೆ ಧನ್ಯ ನಾ ನಿಜದಿ

ಕರ್ಪೂರದ ಗೊಂಬೆ

karpoorada gombe naanu
minchante baLi bande neenu
ninna prema jwaale soki nanna mele
karagi karagi neeraade naanu

hoovali bereta gandhada reeti
shrutiyali kaleta naadada reeti
dehadi praaNavu kaletiha reeti
ninnale berete nannane marete

karpoorada gombe naanu

devana serida hoovadu dhanya
poojeya maaDida kaigaLe dhanya
olavanu arita hrudayave dhanya
ninnanaa paDede dhanya naa nijadi

karpoorada gombe naanu

muddina hudugi chanda - raayaru bandaru maavana manege

ಚಿತ್ರ: ರಾಯರು ಬಂದರು ಮಾವನ ಮನೆಗೆ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರಾಜ್ ಕೋಟಿ
ಗಾಯನ: ಎಸ್. ಪಿ. ಬಾಲಸುಭ್ರಮಣ್ಯಂ
ನಟರು: ಡಾ ವಿಷ್ಣು ವರ್ಧನ್, ಡಾಲಿ, ಬಿಂದಿಯ

ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಓ ಚಿನ್ನ ಅಂದು ನೋಡಿದೆ ನಿನ್ನನು
ಓ ರನ್ನ ಸೆರೆ ಮಾಡಿದೆ ನನ್ನನು
ಅರಿಯದೆ ಹೇಗೊ ನಾ ಬೆರೆತೆ ನಿನ್ನಲಿ
ತನು ಮನವೆಲ್ಲ ತುಂಬಿ ನಿಂತೆ ನನ್ನಲಿ
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ

ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಯಾವುದೋ ಜನುಮಾಂತರ ಬಂಧನ,
ಬೆರೆಸಿತು ಅದು ನಮ್ಮನು ಆ ದಿನ
ತಾಳದು ಜೀವ ನೀ ನಿಮಿಷ ನೊಂದರು,
ಒಂದೆ ಒಂದು ಹನಿಯ ಕಣ್ಣೀರು ಬಂದರು,
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ಮುದ್ದಿನ ಹುಡುಗ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ee bandhana - bandhana

ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಎಂ.ರಂಗರಾವ್
ಗಾಯನ : ಡಾ.ಕೆ.ಜೆ.ಯೇಸುದಾಸ್ ಮತ್ತು ಎಸ್.ಜಾನಕಿ

ಈ ಬಂಧನ ಜನುಮ ಜನುಮದ ಅನುಬಂಧನ
ಈ ಬಂಧನ ಜನುಮ ಜನುಮದ ಅನುಬಂಧನ
ಈ ಪ್ರೇಮ ಸಂಗೀತ ಸಂತೋಷ ಸಂಕೇತ

ಈ ಬಂಧನ ಜನುಮ ಜನುಮದ ಅನುಬಂಧನ
ಈ ಬಂಧನ ಜನುಮ ಜನುಮದ ಅನುಬಂಧನ
ಈ ಪ್ರೇಮ ಸಂಗೀತ ಸಂತೋಷ ಸಂಕೇತ

ಈ ಬಂಧನ ನನ್ನ ನಿನ್ನ ಮಿಲನ ತಂದ ಹೊಸ ಜೀವನ
ಈ ಬಂಧನ ಎದೆಯ ತುಂಬಿ ಬಂದ ಒಂದು ಸುಖ ಭಾವನ

ನಿನ್ನಾ
ಮಡಿಲಲ್ಲಿ

ನಾನೂ
ಮಗುವಾದೇ

ನಿನ್ನಾ
ಉಸಿರಲ್ಲಿ

ನಾನೂ
ಉಸಿರಾದೆ

ಪ್ರೇಮದಾ ಸೌರಭ ಚೆಲ್ಲುವ ಚಂದನ

ಈ ಬಂಧನ ಜನುಮ ಜನುಮದ ಅನುಬಂಧನ

ಈ ದಾರಿಯೂ ಹೂವ ರಾಶಿ ಹಾಸಿ ನಮಗೆ ಶುಭ ಕೋರಿದೆ
ಆ ದೂರಾದ ಒಲವ ಮನೆಯು ಕೈಯ್ಯಾ ಬೀಸಿ ಬಾ ಎಂದಿದೆ

ಹೆಜ್ಜೆ ಜೊತೆಯಾಗಿ
ನಿನ್ನಾನೆರಳಾಗಿ

ಪ್ರೀತಿ ಬೆಳಕಾಗಿ
ದಾರಿ ಹಾಯಾಗಿ

ಸೇರುವಾ ಸುಂದರ ಪ್ರೇಮದಾ ಮಂದಿರ

ಈ ಬಂಧನ ಜನುಮ ಜನುಮದ ಅನುಬಂಧನ

ee bandhana januma janumada anubandhana
ee bandhana januma janumada anubandhana
ee prema sangeeta santosha sanketa                    x 2

ee bandhana nanna ninna milana tanda hosa jeevana
ee bandhana edeya tumbi banda ondu sukha bhaavana

ninna maDilalli
naanu maguvaade
ninna usiralli
naanu usiraade

premada sourabha chelluva chandana

ee bandhana januma janumada anubandhana

ee daariyu hoova raashi haasi namage shubha koride
aa dooraada olava maneyu kaiyaa beesi baa endide

hejje joteyaagi
ninna neraLaagi

preeti beLakaagi
daari haayaagi
seruvaa sundaraa premadaa mandira

ee bandhana januma janumada anubandhana


entha soundarya nodu - maatu tappada maga

ಚಿತ್ರ: ಮಾತು ತಪ್ಪದ ಮಗ (೧೯೭೮)
ಸಂಗೀತ: ಇಳೆಯರಾಜ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಹಾಡಿದವರು: ಎಸ್.ಪಿ.ಬಾಲಸುಬ್ರಹ್ಮಣ್ಯಂ


ಹೆಯ್...ಹೆಯ್ ಹೆಯ್, ಹಾ..ಹಾಹಾಹಾ
ಎ ಹೆಯ್ ಹೆಯ್, ಎ ಹೆಯ್ ಹೆಯ್
ಎ ಹೆಯ್ ಹೆಯ್ ಹೆಯ್ ಹೆಯ್...

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ ನಾಡಿದು ಚಿನ್ನದಾ ಮಣ್ಣಿದು

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ
ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ
ಭರತ ಮಾತೆಯಾ ಈ ತನುಜಾತೆಯ ಚೆಲುವನು ನೋಡುತ ನಲಿಯುತ ಮೆರೆಯುವೆನಾ..

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಎಲ್ಲೇ ಇರಲಿ, ಹೇಗೇ ಇರಲಿ, ನಮ್ಮೂರ ಸವಿನೋಟ ಚಂದ,
ಸಾವಿರ ಭಾಷೆಯ, ಕಲಿತರು ಮನಕೇ, ಕನ್ನಡ ನುಡಿಮುತ್ತೆ ಅಂದ,
ಪೂರ್ವದ ಪುಣ್ಯವೊ, ಪಡೆದಿಹ ಭಾಗ್ಯವೊ, ಹುಟ್ಟಿದೆ ಪಾವನ ಕನ್ನಡ ಮಣ್ಣಲಿನಾ..

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ, ನಾಡಿದು, ಚಿನ್ನದಾ, ಮಣ್ಣಿದು

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಲಾ ಲಾ ಲಾ ಲಾ ಲಾ, ಲಾ ಲಾ ಲಾ ಲಾ ಲಾ

entha soundarya noDu, namma karunaaDa beeDu
gandhada gooDidu kalegaLa touridu
kannaDa naaDidu chinnadaa maNNidu

entha soundarya noDu, namma karunaaDa beeDu

hariyuva neeru, hasurina pairu, elleDe aa taaya siriye
hoogaLa kampu, maragaLa sompu, ellu aa taaya nageye   x 2
bharata maateyaa ee tanujaateya cheluvanu noDuta naliyuta mereyuvenaa

entha soundarya noDu, namma karunaaDa beeDu

elle irali, hege irali, nammoora savinoTa chanda,
saavira bhaasheya, kalitaru manake, kannaDa nuDimutte anda,
poorvada puNyavo, paDediha bhaagyavo, huTTide paavana kannaDa maNNalinaa

entha soundarya.......