Friday, January 8, 2010

neenendare - junglee

ಚಿತ್ರ: ಜಂಗ್ಲೀ
ನಟರು: ವಿಜಯ್, ಐನ್ದ್ರಿತ
ಹಾಡಿದವರು: ಸೋನು ನಿಗಮ್

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ
ಓ ಜೀವವೇ ಹೇಳಿಬಿಡು ನಿನಗೂ ಕೂಡ ಹೀಗೆನಾ?

ತಂದೆನು ಪಿಸುಮಾತು ಜೇಬಲ್ಲಿ
ಕಂಡೆನು ಹಸಿ ಮಿಂಚು ಕಣ್ಣಲ್ಲಿ
ಬಂದೆನು ತುಸು ದೂರ ಜೊತೆಯಲ್ಲಿ ಮರೆತು ಮೈಮನ
ನಿನ್ನ ಬೆರಳು ಹಿಡಿದು ನಾನು ನೀರ ಮೇಲೆ ಬರೆಯಲೇನು
ನಿನ್ನ ನೆರಳು ಸುಳಿಯುವಲ್ಲು ಹೂವ ತಂದು ಸುರಿಯಲೇನು
ನಂಬಿ ಕೂತ ಹುಂಬ ನಾನು ನೀನು ಹೀಗೆನಾ?

ಹೂವಿನ ಮಳೆ ನೀನು ಕನಸಲ್ಲಿ
ಮೋಹದ ಸೆಲೆ ನೀನು ಮನಸಲ್ಲಿ
ಮಾಯದ ಕಲೆ ನೀನು ಎದೆಯಲ್ಲಿ ಒಲಿದ ಈ ಕ್ಷಣ
ನಿನ್ನ ಗುಂಗಿನಿಂದ ನನ್ನ ಬಂದು ಪಾರು ಮಾಡು ನೀನು
ಒಂದೆ ಕನಸು ಕಾಣುವಾಗ ನಾನು ನೀನು ಬೇರೆಯೇನು
ಶರಣು ಬಂದ ಚೋರ ನಾನು ನೀನು ಹೀಗೆನಾ?

2 comments: