Monday, October 12, 2009

ninnindale - milana

ಚಿತ್ರ: ಮಿಲನ
ಗಾಯನ: ಸೋನು ನಿಗಮ್
ನಟರು: ಪುನೀತ್ ರಾಜ್ ಕುಮಾರ್, ಪಾರ್ವತಿ

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ....

ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ.......ನಿನ್ನಿಂದಲೆ....

ಹೋದಲ್ಲಿ ಬಂದಲ್ಲಿ ಎಲ್ಲ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ನಿನ್ನಿಂದಲೆ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ....ನಿನ್ನಿಂದಲೆ....

3 comments:

  1. Good work dear sister, Now I want lyrics of song nanna mannidu kannada mannu from veera parampare.

    ReplyDelete
  2. ನಮಸ್ಕಾರ,
    ಮುತ್ತಿನಂತಹ ನಿಮ್ಮ ಕನ್ನಡ ನುಡಿಗಳಿಗೆ ನನ್ನ ನಮನ.

    ಕನ್ನಡ ಲಿಪಿಯಲ್ಲಿ ಈ ಹಾಡು ಇದ್ರೆ ಹಚ್ಚಿಯಲ್ಲ. .

    ಮನಸ್ಸೇ ಓ ಮನಸ್ಸೇ
    "ಚಂದ್ರ ಮುಖಿ ಪ್ರಾಣ ಸಖಿ ಸಿನಿಮಾದ್ದು".
    subbu-7899746623

    ReplyDelete
  3. is it "haaLaada or haaDaada" in the end of first paragraph??

    ReplyDelete