Thursday, October 8, 2009

baanigondu elle ellide - premada kaaNike

ಚಿತ್ರ: ಪ್ರೇಮದ ಕಾಣಿಕೆ
ಹಾಡಿದವರು: ರಾಜ್ ಕುಮಾರ್
ನಟರು: ರಾಜ್ ಕುಮಾರ್, ಆರತಿ

ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ ನಿಧಾನಿಸು ನಿಧಾನಿಸು

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ ವಿನೋದವಾಗಲಿ ಅದೇನೇ ಆಗಲಿ ಅವನೇ ಕಾರಣ....

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ ನಿರಾಸೆ ಏತಕೆ ಅದೇನೇ ಬಂದರು ಅವನ ಕಾಣಿಕೆ......

2 comments:

  1. thanks for posting "jagave ondu ranaranga" song..

    Regards,
    Ranganath

    ReplyDelete
  2. Thanks for this, was very sad today in in this desert and it made me realize so many things

    ReplyDelete